ಉಡುಪಿ: ಮೋದಿ ಉಡುಪಿ ಪ್ರಚಾರ ಸಭೆಗೆ ವೇದಿಕೆ ನಿರ್ಮಿಸಲು ಪೆಂಡಾಲ್ ಸಾಮಗ್ರಿ ತರುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಮೂವರು ಕಾರ್ಮಿಕರು ಮೃತಪಟ್ಟಿರುವ ನೆಲೆಯಲ್ಲಿ ಬಿಜೆಪಿ ಸಮಾವೇಶವನ್ನು ರದ್ದುಪಡಿಸು ವಂತೆ ಕಾಂಗ್ರೆಸ್ ಆಗ್ರಹಿಸಿದೆ. ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಜನಾರ್ದನ ತೋನ್ಸೆ ಅಧ್ಯಕ್ಷತೆಯಲ್ಲಿ ರವಿವಾರ ಜರಗಿದ ಜಿಲ್ಲಾ ಕಾಂಗ್ರೆಸ್ ತುರ್ತು ಸಭೆಯಲ್ಲಿ ಮೋದಿ ಕಾರ್ಯಕ್ರಮ ರದ್ದುಪಡಿಸುವುದೇ ಇದಕ್ಕೆ ಪರಿಹಾರವೆಂದು ಅಭಿಪ್ರಾಯ ವ್ಯಕ್ತವಾಗಿದೆ.
ಬಿಜೆಪಿಯು ಮೃತ ಕಾರ್ಮಿಕರಿಗೆ ಸಂತಾಪ ಸೂಚಿಸಿ, ಬಡ ಕಾರ್ಮಿಕರ ಕುಟುಂಬಕ್ಕೆ ಭದ್ರತೆ ಒದಗಿಸಬೇಕಾಗಿದೆ. ಹಿಂದೆ ಇಂತಹ ದುರಂತಗಳು ಸಂಭವಿಸಿ ದಾಗ ಕಾಂಗ್ರೆಸ್ ತನ್ನ ಕಾರ್ಯಕ್ರಮ ರದ್ದು ಪಡಿಸಿದ ಸಾಕಷ್ಟು ನಿದರ್ಶನಗಳಿವೆ. ಮೋದಿ ಉಡುಪಿ ಆಗಮನ ಈ ಅವಘಡದಿಂದ ಕರಾಳವಾಗಿದೆ ಎಂದರು.
ನಿಧನ ಹೊಂದಿದ ಕಾರ್ಮಿಕರಿಗೆ ಸಭೆ ಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿ ಗಳಾದ ಬಿ. ನರಸಿಂಹ ಮೂರ್ತಿ, ಹರೀಶ್ ಕಿಣಿ, ದಿವಾಕರ ಕುಂದರ್, ಜನಾರ್ದನ ಭಂಡಾರ್ಕಾರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ರಮೇಶ್ ಕಾಂಚನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್. ನಿತ್ಯಾನಂದ ಶೆಟ್ಟಿ, ಸತೀಶ್ ಅಮೀನ್ ಪಡುಕರೆ ಮುಖಂಡರು ಉಪಸ್ಥಿತರಿದ್ದರು. ಭಾಸ್ಕರ್ ರಾವ್ ಕಿದಿಯೂರು ನಿರೂಪಿಸಿ, ವಂದಿಸಿದರು.
ಸಚಿವರ ಆಗ್ರಹ: ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿ ವಾಹನ ಅಪಘಾತಕ್ಕೀ ಡಾದ್ದರಿಂದ ಕಾರ್ಯಕ್ರಮ ರದ್ದುಪಡಿಸಬೇಕು. ಒಂದುವೇಳೆ ನಡೆಸಿದರೆ ಬಿಜೆಪಿಯ ವರು ಸಂವೇದನಾ ರಹಿತರು ಎಂದರ್ಥ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ವರಾದರೆ ಕಾರ್ಯಕ್ರಮ ರದ್ದುಪಡಿಸುತ್ತಿದ್ದರು ಎಂದು ಸಚಿವ ಪ್ರಮೋದ್ ತಿಳಿಸಿದ್ದಾರೆ.