Advertisement
ಕೇಂದ್ರ ಸಚಿವ ಸಂಪುಟದಲ್ಲಿ 81 ಸ್ಥಾನಗಳಿವೆ. ಸದ್ಯ ಮೋದಿ ಸಂಪುಟದಲ್ಲಿ 53 ಮಂದಿ ಸಚಿವರಿದ್ದಾರೆ. ಇನ್ನೂ 28 ಮಂದಿ ಸಂಸದರಿಗೆ ಸಚಿವ ಸ್ಥಾನ ನೀಡಬಹುದಾಗಿದೆ. ಸದ್ಯ ಹೆಚ್ಚುವರಿ ಖಾತೆ ಹೊಂದಿರುವ ಸಚಿವರ ಖಾತೆಗಳನ್ನು ಹೊಸಬರಿಗೆ ನೀಡಬಹುದು.
Related Articles
Advertisement
ಇತ್ತೀಚೆಗೆ ಲೋಕ ಜನಶಕ್ತಿ ಪಕ್ಷದಲ್ಲಿ ನಡೆದ ಬೆಳವಣಿಗೆಯ ಬಳಿಕ ಸದ್ಯ ಲೋಕಸಭೆಯಲ್ಲಿ ಎಲ್ ಜೆಪಿ ಮುಖ್ಯಸ್ಥರಾಗಿರುವ ಚಿರಾಗ್ ಪಾಸ್ವಾನ್ ರ ಚಿಕ್ಕಪ್ಪ ಪಶುಪತಿ ಪರಾಸ್ ಗೆ ಸಚಿವಗಿರಿ ಸಿಗಬಹುದು ಎನ್ನಲಾಗಿದೆ. ಇತ್ತೀಚೆಗೆ ನಿಧನರಾದ ಚಿರಾಗ್ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರು ಸಚಿವರಾಗಿದ್ದರು.
ಕರ್ನಾಟಕದ ಮೈಸೂರು ಸಂಸದ ಪ್ರತಾಪ್ ಸಿಂಹ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ, ಮಹಾರಾಷ್ಟ್ರದ ನಾರಾಯಣ ರಾಣೆ, ಬಿಹಾರ- ಗುಜರಾತ್‌ನ ಬಿಜೆಪಿ ಉಸ್ತುವಾರ ಭೂಪೇಂದ್ರ ಯಾದವ್ ಕೂಡ ಕೇಂದ್ರ ಸಂಪುಟದ ಆಕಾಂಕ್ಷಿಗಳಾಗಿದ್ದಾರೆ. ಉತ್ತರ ಪ್ರದೇಶದ ವರುಣ್ ಗಾಂಧಿ, ರಾಮಶಂಕರ್ ಕಠಾರಿಯಾ, ಅನಿಲ್ ಜೈನ್, ರೀಟಾ ಬಹುಗುಣ ಜೋಷಿ, ಜಾಫರ್ ಇಸ್ಲಾಂ ಅವರಿಗೆ, ಆ ರಾಜ್ಯದಲ್ಲಿ ಎನ್‌ಡಿಎ ಅಂಗಪಕ್ಷವಾಗಿರುವ ಅಪ್ನಾ ದಳದ ಅನುಪ್ರಿಯಾ ಪಟೇಲ್‌ಗೆ, ಉತ್ತರಾಖಂಡ್‌ನ ಅಜಯ್ ಭಟ್ ಅಥವಾ ಅನಿಲ್ ಬಲುನಿ ಅವರಿಗೆ ಸಚಿವ ಸ್ಥಾನ ಸಿಗಬಹುದು.
ಇದನ್ನೂ ಓದಿ:ಗ್ರಾಮ ಭಾರತ: ಸಾಗರದಷ್ಟು ಸಮಸ್ಯೆಗಳಿಗೆ ಸಾಸಿವೆಯಷ್ಟೇ ಪರಿಹಾರ !
ಪಶ್ಚಿಮ ಬಂಗಾಲದ ಬಿಜೆಪಿ ನಾಯಕರಾದ ಜಗನ್ನಾಥ್ ಸರ್ಕಾರ್, ಶಾಂತನು ಠಾಕೂರ್, ನಿಥೀಟ್ ಪ್ರಾಮಾಣಿಕ್ ಅವರು ಸಚಿವರಾಗುವ ಸಾಧ್ಯತೆಯಿದೆ. ಇದಲ್ಲದೆ, ಬ್ರಿಜೇಂದ್ರ ಸಿಂಗ್ (ಹರಿಯಾಣ), ರಾಹುಲ್ ಕಸ್ವಾನ್ (ರಾಜಸ್ಥಾನ), ಅಶ್ವಿನಿ ವೈಷ್ಣವ್ (ಒಡಿಶಾ), ಪೂನಮ್ ಮಹಾಜನ್ ಅಥವಾ ಪ್ರೀತಮ್ ಮುಂಡೆ (ಮಹಾರಾಷ್ಟ್ರ) ಹಾಗೂ ಪರ್ವೇಶ್ ವರ್ಮಾ ಅಥವಾ ಮೀನಾಕ್ಷಿ ಲೇಖೀ (ದಿಲ್ಲಿ) ಅವರೂ ಸಂಪುಟ ಸೇರುವ ಸಾಧ್ಯತೆಯಿದೆ.