Advertisement

Modi Cabinet 70 ವರ್ಷ ಮೇಲ್ಮಟ್ಟವರಿಗೆ ಇನ್ನು ಆಯುಷ್ಮಾನ್‌ ವಿಮೆ; 6 ಕೋಟಿ ಮಂದಿಗೆ ಲಾಭ

12:42 AM Sep 12, 2024 | Team Udayavani |

ಹೊಸದಿಲ್ಲಿ: ನಾಲ್ಕು ತಿಂಗಳ ಹಿಂದೆ ಘೋಷಿಸಿದಂತೆ ಕೇಂದ್ರ ಸಚಿವ ಸಂಪುಟ 70 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರನ್ನು ಆಯುಷ್ಮಾನ್‌ ಭಾರತ್‌ ವಿಮೆ ವ್ಯಾಪ್ತಿಗೆ ಸೇರಿಸಲು ಬುಧವಾರ ಅನುಮೋದನೆ ನೀಡಿದೆ.

Advertisement

ಪ್ರಧಾನಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲ ಹಿರಿಯ ನಾಗರಿಕರು ತಮ್ಮ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಯನ್ನು ಪರಿಗಣಿಸದೆ ಆಯುಷ್ಮಾನ್‌ ಭಾರತ್‌ ಪ್ರಧಾನ ಮಂತ್ರಿ ಜನ್‌ ಆರೋಗ್ಯ ಯೋಜನೆ (ಎಬಿ ಪಿಎಂ  ಜೆಎವೈ) ಪ್ರಯೋಜನ ಪಡೆಯಲು ಅರ್ಹ ರಾಗಿರುತ್ತಾರೆ. ಈ ಹಿರಿಯರಿಗೆ ಹೊಸ ವಿಶಿಷ್ಟ ಕಾರ್ಡ್‌ ನೀಡಲಾಗು ವುದು ಎಂದು ಕೇಂದ್ರ ತಿಳಿಸಿದೆ.

ಇದರಿಂದ 6 ಕೋಟಿ ಹಿರಿಯ ನಾಗರಿಕರ ಸಹಿತ 4.5 ಕೋಟಿ ಕುಟುಂಬಗಳಿಗೆ ಯೋಜನೆಯ ಲಾಭ ಸಿಗಲಿದೆ.

ಈ ಯೋಜನೆಯಡಿ 5 ಲಕ್ಷ ರೂ. ಆರೋಗ್ಯ ವಿಮೆ ನೀಡಲಾಗುತ್ತದೆ. ಈಗಾಗಲೇ ಆಯುಷ್ಮಾನ್‌ ಭಾರತ್‌ ವ್ಯಾಪ್ತಿಗೆ ಒಳಪಡುವ ಕುಟುಂಬಗಳಿಗೆ ಸೇರಿದ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ವರ್ಷಕ್ಕೆ 5 ಲಕ್ಷ ರೂ.ವರೆಗೆ ಹೆಚ್ಚುವರಿ ವಿಮೆ ಪಡೆಯಲಿದ್ದಾರೆ. ಇದನ್ನು ಕುಟುಂಬದ ಇತರ ಸದಸ್ಯರೊಂದಿಗೆ ಹಂಚಿಕೊಳ್ಳಲು ಅವಕಾಶವಿಲ್ಲ. ಹಾಗೆಯೇ ಖಾಸಗಿ ಆರೋಗ್ಯ ವಿಮೆ ಅಥವಾ ರಾಜ್ಯ ವಿಮೆಗಳ ಸೌಲಭ್ಯವನ್ನು ಪಡೆಯುತ್ತಿರುವ ಹಿರಿಯ ನಾಗರಿಕರು ಕೂಡ ಆಯುಷ್ಮಾನ್‌ ಭಾರತ್‌ ಲಾಭ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next