Advertisement

ಚಿನ್ನದ ಗಟ್ಟಿಯಲ್ಲಿ ಮೋದಿ, ಅಟಲ್‌ ಚಿತ್ರ

06:15 AM Nov 06, 2018 | |

ಸೂರತ್‌: ಉತ್ತರ ಭಾರತದಲ್ಲಿ ದೀಪಾವಳಿ ವೇಳೆ ಚಿನ್ನ ಕೊಳ್ಳುವ ಸಂಪ್ರದಾಯವಿದೆ. ಆ ದಿನ ಚಿನ್ನ ಕೊಂಡರೆ ಐಶ್ವರ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಸೂರತ್‌ನ ಚಿನ್ನದ ಅಂಗಡಿಯಲ್ಲಿ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಚಿತ್ರವಿರುವ ಚಿನ್ನ ಮತ್ತು ಬೆಳ್ಳಿಯ ಗಟ್ಟಿಗಳನ್ನು ದೀಪಾವಳಿಗೆ ವಿಶೇಷವಾಗಿ ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಭಾರೀ ಬೇಡಿಕೆ ಬಂದಿದೆ. 

Advertisement

ಸಾಮಾನ್ಯವಾಗಿ ಇಂಥ ಗಟ್ಟಿಗಳ ಮೇಲೆ ದೇವರ ಚಿತ್ರ ಚಿತ್ರಿಸಲಾಗಿರುತ್ತದೆ. ಆ ಜಾಗ ದಲ್ಲಿ ಮೋದಿ ಚಿತ್ರ ಕೆತ್ತಲಾಗಿದ್ದು, ಈ ಗಟ್ಟಿ ಗಳು ಜನರನ್ನು ಆಕರ್ಷಿ ಸಿವೆ ಎಂದು ಮಾಲೀ ಕರು ಹೇಳಿದ್ದಾರೆ. 

ದೀಪಾವಳಿಯಂದು ಲಕ್ಷ್ಮೀ ಅಥವಾ ಗಣೇಶನನ್ನು ಆರಾಧಿಸುತ್ತೇವೆ. ಮೋದಿ ನಮಗೆ ದೇವರ ಸಮಾನ. ಪ್ರತಿ ವರ್ಷ ಈ ಅಂಗಡಿಗೆ ಬಂದು ಅವರ ಚಿತ್ರವಿರುವ ಚಿನ್ನದ ಗಟ್ಟಿ ಕೊಳ್ಳುತ್ತೇನೆ ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next