ವಿಜಯಪುರ: ಸೈಬರ್ ಕದೀಮರ “ಡಿಜಿಟಲ್ ಅರೆಸ್ಟ್’ ಎಂಬ ಹೊಸ ವಂಚನೆಯ ಜಾಲದಿಂದ ಬಚಾವ್ ಆದ ವಿಜಯಪುರದ ರಹೀಮ ನಗರದ ನಿವಾಸಿ ಸಂತೋಷ ಚೌಧರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ರವಿವಾರ ತಮ್ಮ “ಮನ್ ಕೀ ಬಾತ್’ನಲ್ಲಿ ಪ್ರಸ್ತಾವಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶದ ಜನತೆಗೂ ಸೈಬರ್ ವಂಚನೆಯಿಂದ ಎಚ್ಚರ ವಹಿಸುವುದಕ್ಕೆ ಈ ಯುವಕನನ್ನು ಉದಾಹರಣೆಯಾಗಿ ನೀಡಿದ್ದಾರೆ. ಖುದ್ದು ಪ್ರಧಾನಿ ಮೋದಿ ಅವರೇ ತನ್ನ ಬಗ್ಗೆ ಮಾತ ನಾಡಿದಕ್ಕೆ ಸಂತೋಷ ಚೌಧರಿ ಸಂತಸ ಗೊಂಡಿದ್ದಾರೆ.
ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್‌ನಲ್ಲಿ ಡಿಜಿಟಲ್ ವಂಚನೆಗಳ ಬಗ್ಗೆ ಪ್ರಸ್ತಾವಿಸಿ, ನಕಲಿ ಪೊಲೀಸ್ ಅಧಿ ಕಾರಿಗಳೊಂದಿಗೆ ಹೇಗೆ ಜಾಣತನದಿಂದ ಬಲೆಗೆ ಬೀಳುವುದನ್ನು ತಪ್ಪಿಸ ಬಹುದು ಎಂಬುದನ್ನು ಸಂತೋಷ ಚೌಧರಿ ಪ್ರಕರಣವನ್ನು ಎತ್ತಿ ತೋರಿಸಿದರು. ಡಿಜಿಟಲ್ ಅರೆಸ್ಟ್ ವಂಚನೆಗಳಿಂದ ಜಾಗರೂಕರಾಗಿರಿ. ಯಾವುದೇ ತನಿಖಾ ಸಂಸ್ಥೆಗಳು ವಿಚಾರಣೆಗಾಗಿ ವೀಡಿಯೋ ಕಾಲ್ ಮಾಡುವುದಿಲ್ಲ ಎಂದೂ ದೇಶದ ಜನತೆಗೆ ತಿಳಿಸಿದರು.
ಏನಿದು “ಡಿಜಿಟಲ್ ಅರೆಸ್ಟ್’ ಪ್ರಕರಣ?
ಸಂತೋಷ ಚೌಧರಿಗೆ ಸೆ. 16ರಂದು ಕರೆ ಮಾಡಿ ನಿಮ್ಮ ಮೊಬೈಲ್ ನಂಬರ್ ಬ್ಲಾಕ್ ಆಗುತ್ತದೆ ಎಂದು ಹೇಳಿ ನಂಬರ್ 9 ಒತ್ತಲು ತಿಳಿಸಿರುತ್ತಾರೆ. ಬಳಿಕ ಟ್ರೈ ಅಧಿ ಕಾರಿಗಳ ಹೆಸರಲ್ಲಿ ಮಾತನಾಡಿ, ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗಿದೆ. ಆಧಾರ್ ಕಾರ್ಡ್ ಮೇಲೆ ಅನೇಕ ಮೊಬೈಲ್ ನಂಬರ್ ಪಡೆದಿರುವ ಬಗ್ಗೆ ದೂರು ಬಂದಿದೆ.
ನಿಮ್ಮ ನಂಬರ್ ರದ್ದಾಗುತ್ತದೆ ಎಂದು ವಂಚಕರು ಹೇಳಿ ಮುಂಬಯಿ ಸೈಬರ್ ಠಾಣೆಗೆ ಸಂಪರ್ಕ ಮಾಡುತ್ತೇವೆ ಎಂದು ಹೇಳಿ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ವೀಡಿಯೋ ಕಾಲ್ ಮೂಲಕ ವಿಚಾರಣೆ ಮಾಡಲು ಶುರು ಮಾಡುತ್ತಾರೆ. ಇದರಿಂದ ಅನುಮಾನಗೊಂಡ ಸಂತೋಷ ಚೌಧರಿ ತನ್ನ ನಿಜ ಹೆಸರನ್ನು ಹೇಳದೆ ಸಂತೋಷ ಪಾಟೀಲ್ ಎಂದು ಹೇಳಿ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಈ ಬಗ್ಗೆ ವಿಜಯಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜತೆಗೆ ಪೊಲೀಸರ ಹೆಸರಲ್ಲಿ ವಿಚಾರಣೆ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು.
ಈ ವೀಡಿಯೋವನ್ನು ಕರ್ನಾಟಕ ಮೂಲದ ತೆಲಂಗಾಣ ಐಪಿಎಸ್ ಅ ಧಿಕಾರಿ ವಿ.ಎಸ್. ಸಜ್ಜನ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಅಲ್ಲಿಂದ ಇದು ಗೃಹ ಸಚಿವಾಲಯದ ಗಮನಕ್ಕೆ ಬಂದಿತ್ತು. ಬಳಿಕ ಸಂತೋಷ ಚೌಧರಿಗೂ ಸಹ ಗೃಹ ಸಚಿವಾಲಯದ ಅಧಿ ಕಾರಿಗಳು ಅ. 25ರಂದು ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದರು.