Advertisement
ಶಿಕ್ಷಕರ ದಿನದಂದೇ ಅವರು ಇಂಥದ್ದೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಸೋಮವಾರ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, “ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ದೇಶದ 14,500 ಪಿಎಂ-ಶ್ರೀ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಈ ಶಾಲೆಗಳು ಆಧುನಿಕ, ಪರಿವರ್ತನೆಯ ಮತ್ತು ಸಮಗ್ರ ಶಿಕ್ಷಣವನ್ನು ಒದಗಿಸಲಿವೆ. ಆವಿಷ್ಕಾರ ಆಧರಿತ, ಕಲಿಕಾ ಕೇಂದ್ರಿತ ಬೋಧನೆಗೆ ಹೆಚ್ಚಿನ ಮಹತ್ವ ನೀಡಲಾಗುವುದು.
– ನೂತನ ಶಿಕ್ಷಣ ನೀತಿಯ ಪ್ರಯೋಗಶಾಲೆಗಳಾಗಿ ಇವು ಕಾರ್ಯನಿರ್ವಹಿಸಲಿವೆ
– ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಆವಿಷ್ಕಾರ ಆಧರಿತ, ಕಲಿಕಾ ಕೇಂದ್ರಿತ ಬೋಧನೆ
– ಆಧುನಿಕ ತಂತ್ರಜ್ಞಾನ, ಸ್ಮಾರ್ಟ್ ತರಗತಿ ಮತ್ತಿತರ ಮೂಲಸೌಕರ್ಯ ಒದಗಿಸುವುದು
– ಸಮಾನ, ಎಲ್ಲರನ್ನೊಳಗೊಂಡ, ಆನಂದದಾಯಕ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು