Advertisement

ಸಂವಿಧಾನ ದಿನಾಚರಣೆ ‌ಘೋಷಣೆ ಮಾಡಿದ್ದು ಮೋದಿ : ಛಲವಾದಿ ನಾರಾಯಣಸ್ವಾಮಿ

03:50 PM Dec 06, 2021 | Team Udayavani |

 

Advertisement

ಬೆಂಗಳೂರು : ಮೊದಲು ಕಾನೂನು ದಿನಾಚರಣೆ ಅಂತ ಆಚರಣೆ ಮಾಡುತ್ತಿದ್ದೇವು ಈಗ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಗೌರವ ಸಿಗುವ ಸಲುವಾಗಿ ನ.26, 2015ರಂದು ಮೋದಿ ಸಂವಿಧಾನ ದಿನಾಚರಣೆ ‌ಘೋಷಣೆ ಮಾಡಿ .‌ ಅಂಬೇಡ್ಕರ್‌ ಅವರಿಗೆ ಗೌರವ ನೀಡಿದರು ಎಂದು
ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸಂವಿಧಾನ ಶಿಲ್ಪಿ ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ರಾಜ್ಯ ಪದಾಧಿಕಾರಿಗಳು ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿ,ಕೆಳ‌ ಸಮುದಾಯದ ಸಿಂಹ ಗರ್ಜನೆ ಅಂಬೇಡ್ಕರ್ ಕಳೆದುಕೊಂಡು 65 ವರ್ಷ ಆಗಿದೆ. ಅಂಬೇಡ್ಕರ್ ತರಹ ಶಕ್ತಿ ಭಾರತದಲ್ಲಿ ಮತ್ತೆ ಹುಟ್ಟುತ್ತೆ ಎಂಬ ಭರವಸೆ ಇಲ್ಲ. ದೇಶದಲ್ಲಿ ಇದ್ದಂತಹ ಅಶ್ವರ್ಶತೆ, ಸಮಾನತೆ ಸೇರಿದಂತೆ ಅನೇಕ ವಿಚಾರದಲ್ಲಿ ಧ್ವನಿ ಮಾಡಿದ್ದೇ ಅಂಬೇಡ್ಕರ್ ಎಂದರು.

ಇಂದು‌ ನಮಗೆ ಸೂರ್ಯನ ರೀತಿಯಲ್ಲಿ ಬೆಳಕಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಸಂವಿಧಾನ ಗೌರವಿಸುವ ಕೆಲಸ ಮಾಡುತ್ತಿದ್ದೇವೆ. ನವಂಬರ್ 26ರಂದು ಸಂವಿಧಾನ ದಿನಾಚರಣೆ ‌ಮಾಡುತ್ತಿದ್ದೇವೆ ಎಂದರು.

ನವೆಂಬರ್ 26ರಿಂದ ಇಂದಿನವರೆಗೂ ಅಂಬೇಡ್ಕರ್ ಗೌರವಿಸುವ ಅಭಿಯಾನ ಮಾಡಲಾಗಿದೆ. ಇಂದು ಅಂಬೇಡ್ಕರ್ ಅಗಲಿದ ದಿನ. ಇಂದು ನಾವು ಸಂತೋದಿಂದ ಇಲ್ಲ ಆರು ದಶಕದ ಕಾಲ ಬಿಜೆಪಿ ಆಡಳಿತ ‌ಮಾಡಲಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಅಂಬೇಡ್ಕರ್ ಅವಮಾನ ಮಾಡಿದರು. ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡು, ದಲಿತರಿಗೆ ಗೌರವ ಕೊಡಲಿಲ್ಲ. ಮೋದಿ, ನಡ್ಡಾ ನೇತೃತ್ವದಲ್ಲಿ ಅಂಬೇಡ್ಕರ್ ಅವರಿಗೆ ಗೌರವ ಸಿಗುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next