Advertisement
ಒಡಿಶಾದಲ್ಲಿರುವ 21 ಸ್ಥಾನಗಳಲ್ಲಿ, ಈ ಬಾರಿ ಬಿಜೆಪಿ 08 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಳೆದ ಬಾರಿ ಕೇವಲ 1 ಸ್ಥಾನ ಗೆದ್ದಿದ್ದ ಅದು, 7 ಸ್ಥಾನಗಳನ್ನು ಹೆಚ್ಚುವರಿಯಾಗಿ ಬಾಚಿಕೊಂಡಿದೆ. ಈ ಬಾರಿ ಉತ್ತರಪ್ರದೇಶದಲ್ಲಿ ಕಳೆದುಕೊಳ್ಳಬಹುದಾದ ಸ್ಥಾನಗಳನ್ನು ಒಡಿಶಾದಲ್ಲೂ ಬಾಚಿಕೊಳ್ಳುವ ಯೋಜನೆಯೊಂದು ಬಿಜೆಪಿ ಪಾಳೆಯದಲ್ಲಿ ಸಿದ್ಧವಾಗಿತ್ತು. ಅದರಲ್ಲಿ ಅಮಿತ್ ಶಾ ಸ್ಪಷ್ಟ ಯಶಸ್ಸು ಗಳಿಸಿದ್ದಾರೆ.
Related Articles
Advertisement
ಮತದಾನಕ್ಕೆ ಜನರ ನಿರಾಸಕ್ತಿ: ನಾಲ್ಕು ಹಂತಗಳಲ್ಲಿ ನಡೆದಿದ್ದ ಚುನಾವಣೆಗೆ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಫ್ಯಾನಿ ಚಂಡಮಾರುತದ ಕಾರಣದಿಂದಾಗಿ ಹೆಚ್ಚಿನ ಮತದಾರರು ಮತ ಚಲಾಯಿಸಲು ಆಸಕ್ತಿ ತೋರಿರಲಿಲ್ಲ. ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಹಿನ್ನಡೆಯನ್ನು ಅನುಭವಿಸಲು ಇದೂ ಒಂದು ಕಾರಣವೆಂದು ಬಿಜೆಡಿ ಕಾರ್ಯಕರ್ತರು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಪುರಿಯಲ್ಲಿ ತ್ರಾಸದ ಜಯ: ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರವಾದ ಓಡಿಶಾದ ಪುರಿಯಲ್ಲಿ ಬಿಜೆಪಿ ನಾಯಕ ಸಂಭಿತ್ ಪಾತ್ರ, ಹಾಲಿ ಸಂಸದ ಬಿಜೆಡಿ ಪಕ್ಷದ ಪಿನಾಕಿ ಮಿಶ್ರಾ ಅವರನ್ನು 1600 ಮತಗಳಿಂದ ಸೋಲಿಸಿದ್ದಾರೆ. ಈ ಮೂಲಕ ಬಿಜೆಡಿಯ ಭದ್ರಕೋಟೆ ಎಂದೇ ಹೆಸರಾದ ಪುರಿಯಲ್ಲಿ ಬಿಜೆಪಿ ಲಗ್ಗೆಯಿಟ್ಟಿದೆ. ಪುರಿ ಸಂಸದೀಯ ಕ್ಷೇತ್ರ ಬಹಳ ಹಿಂದಿನಿಂದಲೂ ಬಿಜೆಡಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತಾ ಬಂದಿದ್ದ ಕ್ಷೇತ್ರ. 1998ರಿಂದ ಇಲ್ಲಿಯವರೆಗೆ ಇತರೆ ಪಕ್ಷದ ಯಾರೂ ಇಲ್ಲಿ ಗೆಲುವು ಸಾಧಿಸಲಾಗಿರಲಿಲ್ಲ.
ಗೆದ್ದ ಪ್ರಮುಖರು-ಸಂಭಿತ್ ಪಾತ್ರ, ಪುರಿ
-ಜುವಾಲ್ ಓರಾಮ್, ಸುಂದರ್‌ಗಡ್
-ಸರ್ಮಿಷ್ಠಾ ಸೇಠಿ, ಜಾಜ್‌ಪುರ್
-ನಿತೇಶ್ ಗಂಗಾ, ಸಂಬಲ್ಪುರ
-ಚಂದ್ರಾಣಿ ಮರ್ಮು, ಕಿಯೊಂಜØರ್ ಸೋತ ಪ್ರಮುಖರು
-ಪಿನಾಕಿ ಮಿಶ್ರಾ, ಪುರಿ
-ಕಾಳಿಕೇಶ್ ನಾರಾಯಣ್, ಬೋಲಾಂಗಿರ್
-ಜಾರ್ಜ್ ಟಿರ್ಕೆ, ಸುಂದರ್‌ಗಡ್
-ಅರೂಪ್ ಮೋಹನ್, ಭುವನೇಶ್ವರ
-ಪುಷ್ಪೇಂದ್ರ ಸಿಂಗ್‌ದೇವ್, ಕಾಳಹಂದಿ ಒಡಿಶಾ ನನಗೆ ತುಂಬಾ ತಲೆನೋವು ಉಂಟು ಮಾಡಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಭರ್ಜರಿ ಜಯ ಗಳಿಸಿದ್ದಾರೆ.
-ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಮುಖಂಡ