Advertisement

Modi 3.0 ವೇಳೆ ಪ್ರಸಾರ ಭಾರತಿ ಜಾಗತಿಕ ಬ್ರ್ಯಾಂಡ್‌

12:58 AM Apr 22, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ಸರಕಾರಿ ಸ್ವಾಮ್ಯದ ಪ್ರಸಾರ ಭಾರತಿಯನ್ನು ಜಾಗತಿಕ ಬ್ರ್ಯಾಂಡ್‌ ಆಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ನ್ಯೂಸ್‌ 18 ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಡಿಡಿಗೆ ಕೇಸರಿ ಬಣ್ಣದ ಲೋಗೋ ಹಾಕಿ ರುವ ವಿಚಾರ ಸದ್ದು ಮಾಡಿದ ಬೆನ್ನಲ್ಲೇ ಇಂಥ ದ್ದೊಂದು ವರದಿ ಬಂದಿ ದೆ.

Advertisement

15 ದೇಶಗಳಲ್ಲಿ ಡಿಡಿ ಇಂಡಿಯಾದ ಬ್ಯೂರೋಗಳನ್ನು ತೆರೆಯುವ ಮೂಲಕ ಜಾಗತಿಕ ಬ್ರ್ಯಾಂಡ್‌ನ‌ಂತೆ ಅಭಿವೃದ್ಧಿ ಪಡಿಸಲಾಗುವುದು. ಪ್ರಸಾರ ಭಾರತಿಯ “ಶಬ್‌œ’ ಪೋರ್ಟಲ್‌ ಅನ್ನು ಜಾಗತಿಕ ಸುದ್ದಿ ಸಂಸ್ಥೆಯಾಗಿ ಅಭಿವೃದ್ಧಿಪಡಿಸಲಾ ಗುವುದು. ವಿದೇಶಿ ಔಟ್‌ಲೆಟ್‌ ಸೇರಿ ದಂತೆ 1000ಕ್ಕೂ ಹೆಚ್ಚು ಮಾಧ್ಯಮ ಘಟಕಗಳನ್ನು ಸ್ಥಾಪಿಸಲಾಗುವುದು. ಕೃತಕ ಬುದ್ಧಿಮತ್ತೆಯನ್ನು ಇದರ ಅಭಿ ವೃದ್ಧಿಯಲ್ಲಿ ಬಳಕೆ ಮಾಡಿಕೊಳ್ಳಲಾಗು ತ್ತದೆ. ಸಾಮಾನ್ಯ ಜನರ ಮಾಧ್ಯಮ ಪ್ರವೇಶಕ್ಕಾಗಿ “ನಮನ್‌’ ಪೋರ್ಟಲ್‌ ಶುರು ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ. ಇವೆಲ್ಲವೂ ಪ್ರಧಾನಿ ಮೋದಿ ಅವರ ನಿರ್ದೇಶನ ನೀಡಿರುವ 3.0ಗೆ 100 ದಿನ ಯೋಜನೆಯ ಭಾಗವಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next