Advertisement

ಬದುಕ ಬಾಡಿಸದಿರಲಿ ಆಧುನಿಕತೆಯ ಒಲವು

10:44 PM Sep 15, 2019 | Team Udayavani |

ಹೌದು ಎಲ್ಲರೂ ಆಧುನಿಕತೆಯೆಂದು ತಮ್ಮ ಜೀವನವನ್ನು ಬರಿದಾಗಿಸುವಂತಹ ಕ್ಲಿಷ್ಟಕರ ಪರಿಸ್ಥಿತಿ ಒದಗಿ ಬಂದಿರುವುದು ವಿಪರ್ಯಾಸವೇ ಸರಿ. ಸಾಧನೆಯ ಮಾತು ಮರೀಚಿಕೆಯಾಗಿ ಆತ್ಮಹತ್ಯೆಯೊಂದೇ ಪರಿಹಾರ ಎಲ್ಲ ಕಷ್ಟಗಳಿಗೂ ಎನ್ನುವ ಭಾವನೆ ಮೂಡುವಲ್ಲಿಗೆ ತಲುಪಿದೆ ಯುವಜನತೆಯ ಮನಸ್ಸು.

Advertisement

ಇದೆಲ್ಲಾ ಯಾಂತ್ರೀಕರಣದ ಪ್ರಭಾವವೇ ಹೌದು. ಯಾವುದೇ ಕೆಲಸ ಮಾಡಲು ಹೊರಟವರೂ ಸತತ ಪರಿಶ್ರಮ ನೀಡುವ ಬದಲು ಯಾಂತ್ರೀಕೃತ ಪರಿಹಾರವೇ ಸೂಕ್ತ ಎಂದು ತಾಂತ್ರಿಕತೆಗಳ ಮೊರೆ ಹೋಗುವುದು ಅಧಿಕ ವಾಗಿರುವುದರಿಂದಲೆ ಇಂತಹ ದುರಂತ ಸ್ಥಿತಿ ನಮ್ಮದಾಗಿರುವುದು. ಇದಕ್ಕೆ ಸ್ಪಷ್ಟ ನಿದರ್ಶನ ಮೊಬೈಲ್‌. ಸಾಕಷ್ಟು ಮನಸ್ಸನ್ನು ಸಂಕುಚಿಸಿ ಯೋಚಿಸಲಾಗದಷ್ಟು ಸಂಕಷ್ಟಕ್ಕೆ ಸಿಲುಕಿಸಿ ಜೀವನವನ್ನು ಬರಡಾಗಿಸುತ್ತಿದೆ. ಇದರ ಪರಿವೆ ಇಲ್ಲದೆ ಈ ಮಾಯೆಗೆ ಮಾರುಹೋಗಿರುವ ಜನತೆ ಈ ವ್ಯಸನದಿಂದ ಮುಕ್ತರಾಗಿ ಸಹಜ ಮತ್ತು ವಾಸ್ತವಿಕ ಚಿಂತನೆ ನಡೆಸುವುದು ಅಗತ್ಯ.

ಹಿಂದಿನ ಕಾಲಘಟ್ಟದತ್ತ ಒಮ್ಮೆ ನೆನಪು ಹಾಯಿಸಿ. ಒಂದು ಹಬ್ಬ ಬಂತೆಂದರೆ ಸಾಕು ಎಲ್ಲ ಕುಟುಂಬಸ್ಥರು ಒಂದೆಡೆ ಸೇರಿ ಹಂಚಿಕೊಳ್ಳುತ್ತಿದ್ದ ಸಡಗರ ಸಂಭ್ರಮ ಇಂದು ಮಾಯವಾಗಿದೆ. ಮನಸ್ಸು ಕದಡುವ ಜಾಲತಾಣಗಳಿಗೆ ಮೊರೆಹೋಗಿ ತಮ್ಮ ಇರುವಿಕೆ ಮರೆಯುತ್ತಿದ್ದಾರೆ. ಇದರಿಂದ ಹೊರ ಬಂದಲ್ಲಿ ಮಾತ್ರವೇ ನಾವು ನಾವಾಗಿ ಜೀವನ ಸಾಗಿಸುವುದು ಸಾಧ್ಯ. ನಮ್ಮವರ ಬಗ್ಗೆ ಕಾಳಜಿ ವಹಿಸಿ ಒಂದೆಡೆ ಕೂತು ಎಲ್ಲರ ಜತೆಗೂಡಿ ಸ್ನೇಹ ಸಂಬಂಧವನ್ನು ಸದೃಢಗೊಳಿಸಲು ಚಿತ್ತ ಹರಿಸುವುದು ಸಾಧ್ಯ.

ಅತಿಯಾದ ಆಧುನಿಕ ಒಲವು ಬಹಳ ಸಂಕಷ್ಟ ವನ್ನು ಒಡ್ಡುತ್ತದೆ. ನಮ್ಮ ಸಂತೋಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅತಿಯಾದರೆ ಅಮೃತವೂ ವಿಷವೆನ್ನುವಂತೆ ಅತಿಯಾದ ಒಲವು ಕೂಡ ವಿಷ. ಮುಖದಲ್ಲಿ ನಗು ಮನದಲ್ಲಿ ನೂರಾರು ಕನಸುಹೊತ್ತ ಯುವಮನಗಳು ಸಾಧನೆಯೆಂಬ ಹಸಿವ ಹೊತ್ತು ಬದುಕ ರೂಪಿಸುವಲ್ಲಿ ಯಶಸನ್ನು ಕಾಣುವ ಪಥವನ್ನು ಆರಿಸಿ. ಆಧುನಿಕತೆಯ ಒಲವು ಮದ್ಯ ವ್ಯಸನಿಯಂತಾಗಲು ಅವಕಾಶ ಕಲ್ಪಿಸದೇ ಉತ್ತಮ ಜೀವನ ರೂಪಿಸಲು ಕಾರಣವಾಗಲಿ.
– ವಿಜಿತಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next