ನವ ದೆಹಲಿ : ಅಮೆರಿಕಾ ಮೂಲದ ಮಾಡೆರ್ನಾ ಕೋವಿಡ್ ಲಸಿಕೆಯನ್ನು ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ದಿಂದ ಅನುಮೋದನೆ ಪಡೆದುಕೊಂಡಿದೆ ಎಂದು ಇಂದು(ಮಂಗಳವಾರ, ಜೂನ್ 29) ಕೇಂದ್ರ ಮಾಹಿತಿ ನೀಡಿದೆ.
ಇದಲ್ಲದೆ, ಭಾರತೀಯ ಔಷಧಿ ಉತ್ಪಾದಕ ಸಂಸ‍್ಥೆ ಸಿಪ್ಲಾ ಗೆ ಮಾಡೆರ್ನಾದ ಕೋವಿಡ್ -19 ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಮತ್ತು ದೇಶದಲ್ಲಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ಕೂಡ ತಿಳಿಸಿದೆ.
ಇದನ್ನೂ ಓದಿ : ಬಿಜೆಪಿ ಬಂಡಾಯ ಶಾಸಕ ಯತ್ನಾಳ ಜೊತೆ ರಹಸ್ಯ ಮಾತುಕತೆ ನಡೆಸಿದ ಸಚಿವ ಯೋಗೇಶ್ವರ್
ಈಗಾಗಲೇ ಭಾರತದಲ್ಲಿ ಮೂರು ಕೋವಿಡ್ 19 ಲಸಿಕೆಗಳನ್ನು ನೀಡಲಾಗುತ್ತಿದ್ದು, ಈಗ ಆ ಸಾಲಿಗೆ ಮಾಡೆರ್ನಾ ಲಸಿಕೆ ಸೇರ್ಪಡೆಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿದ ನಿತಿ ಆಯೋಗದ ಸದಸ್ಯ ಡಾ. ವಿ.ಕೆ.ಪಾಲ್, ಈವರೆಗೆ ಮಾಡೆರ್ನಾ ಲಸಿಕೆಯನ್ನು ನೀಡಲು ನಿರ್ಬಂಧಗಳು ಇದ್ದಿತ್ತು. ಆದರೇ, ಈಗ ತುರ್ತು ಪರಿಸ್ಥಿತಿಯಲ್ಲಿ ನೀಡಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನಿಮೋದನೆ ನೀಡಿದೆ. ಕೋವಿಡ್ ವಿರುದ್ಧ ಹೋರಾಟಕ್ಕೆ ದೇಶಕ್ಕೆ ಮತ್ತೊಂದು ಅಸ್ತ್ರ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಇನ್ನು, ಭಾರತದಲ್ಲಿ ಔಷಧ ನಿಯಂತ್ರಕರ ಅನುಮೋದನೆ ಪಡೆಯುವುದರ ಜೊತೆಗೆ, ಮಾಡೆರ್ನಾ ಕೋವಿಡ್ -19 ಲಸಿಕೆಯ ನಿರ್ದಿಷ್ಟ ಪ್ರಮಾಣವನ್ನು ಕೋವಾಕ್ಸ್ ಮೂಲಕ ಭಾರತಕ್ಕೆ ನೀಡಲು ಅಮೆರಿಕಾ ಸರ್ಕಾರ ಒಪ್ಪಿಕೊಂಡಿದೆ ಮತ್ತು ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ ಸಿ ಒ) ದಿಂದ ಅನುಮೋದನೆ ಕೋರಿದೆ ಎಂದು ಮಾಡರ್ನಾ ಮಾಹಿತಿ ನೀಡಿದೆ.
ಇದನ್ನೂ ಓದಿ : ರೈಲ್ವೆ ನಿಲ್ದಾಣಗಳಲ್ಲಿಯೂ ಇದೇ ರೀತಿ ಖಾಸಗಿ ಪ್ರಯೋಗಾಲಯ ಆರಂಭ : ಪ್ರಮೋದ್ ಸಾವಂತ್