Advertisement

ಕುಂಬಾರಿಕೆಗೆ ಆಧುನಿಕ ಸ್ಪರ್ಶ

01:21 PM Mar 15, 2021 | Team Udayavani |

ಮಂಡ್ಯ: ವಿನಾಶದ ಅಂಚಿನಲ್ಲಿರುವ ಕುಂಬಾರಿಕೆ ವೃತ್ತಿಗೆ ಆಧುನೀಕತೆಯ ಸ್ಪರ್ಶ ನೀಡುವ ಮೂಲಕ ಕುಂಬಾರ ವೃತ್ತಿಯನ್ನು ಪ್ರೋತ್ಸಾಹಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಭರವಸೆ ನೀಡಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ಕುಂಬಾರ ಜಾಗೃತಿ ವೇದಿಕೆ ಹಾಗೂ ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್‌ ವತಿಯಿಂದ ನಡೆದಗ್ರಾಪಂ ಸದಸ್ಯರು ಹಾಗೂ ಸಮಾಜದ ಸಾಧಕರ ಅಭಿನಂದನಾ ಸಮಾರಂಭ ಮತ್ತು ಕುಂಬಾರರ ಸಂಘಟನಾ ಸಮಾವೇಶದಲ್ಲಿ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಮಣ್ಣಿನ ವಸ್ತುಗಳಿಗೆ ವಿಶೇಷ ಮಾನ್ಯತೆ: ಇಂದಿನ ಆಧುನಿಕ ಜಗತ್ತಿನಲ್ಲಿ ಮಣ್ಣಿನಿಂದ ತಯಾರಾಗುವ ಮಡಕೆ ಕುಡಿಕೆಯಂತಹ ಸಾಮಗ್ರಿಗಳಿಗೆ ವಿಶೇಷವಾದ ಮಾನ್ಯತೆ ಇದೆ. ಆದ್ದರಿಂದ ಜಿಲ್ಲೆಯಲ್ಲಿ ಕುಂಬಾರಿಕೆವೃತ್ತಿಯನ್ನು ಉತ್ತೇಜನಗೊಳಿಸಲು ಕಾರ್ಖಾನೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸೌಲಭ್ಯ ಒದಗಿಸಲು ಕ್ರಮ: ಈ ಯೋಜನೆಗೆ ಪೂರಕವಾದ ನಿವೇಶನ, ಅನುದಾನ ಮತ್ತಿತರಸವಲತ್ತುಗಳನ್ನು ಕೊಡಲು ತಾನು ಸಿದ್ಧ ನಾಗಿದ್ದೇನೆ ಎಂದು ಘೋಷಿಸಿದ ಸಚಿವರು,ಭವಿಷ್ಯದಲ್ಲಿ ಮಣ್ಣಿನ ಮಡಕೆಯಿಂದತಯಾರಿಸಿದ ಆಹಾರಕ್ಕೆ ಹೆಚ್ಚಿನ ಮಹತ್ವಬರಲಿದೆ. ಇಂದಿನ ಆಹಾರ ಸಂಸ್ಕೃತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವಬಹುತೇಕರಿಗೆ ಮಡಕೆ-ಕುಡಿಕೆಯ ಆಹಾರ ವರದಾನವಾಗಲಿದೆ ಎಂದು ವಿವರಿಸಿದರು.

ಬಜೆಟ್‌ನಲ್ಲಿ ಅನುದಾನ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕುಂಬಾರ ಸಮುದಾಯ ಸೇರಿದಂತೆ ಎಲ್ಲ ಹಿಂದುಳಿದ ವರ್ಗಗಳ ಬಗ್ಗೆ ಅತೀವ ಕಾಳಜಿ ಮತ್ತುಪ್ರೀತಿಯನ್ನು ಹೊಂದಿದ್ದಾರೆ. ಅವರ ಅಭಿವೃದ್ಧಿಗೆ ಪೂರಕವಾಗಿ ಬಜೆಟ್‌ನಲ್ಲಿ ಕೂಡಅನುದಾನವನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ನೆರವು ನೀಡಲಿದ್ದಾರೆ. ಕುಂಬಾರ ಸಮದಾಯದ ಎಲ್ಲ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

Advertisement

ನಿವೇಶನಕ್ಕೆ ಕ್ರಮ: ಶಾಸಕ ಎಂ.ಶ್ರೀನಿವಾಸ್‌ ಮಾತನಾಡಿ, ಕುಂಬಾರ ಸಮುದಾಯಸೇರಿದಂತೆ ಸವಿತಾ, ಕುಳುವ ಮತ್ತಿತರರಸಮಾಜಗಳು ನಿವೇಶನದ ಬೇಡಿಕೆಯನ್ನುಮುಂದಿಟ್ಟಿದ್ದು, ಈಗಾಗಲೇ ಉಸ್ತುವಾರಿ ಸಚಿವರು ಮತ್ತು ಸರ್ಕಾರದೊಡನೆ ಸಮಾಲೋಚನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ನಿವೇಶನ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದರು.

ಮಕ್ಕಳಿಗೆ ಶಿಕ್ಷಣ ನೀಡಿ: ಕುಂಬಾರ ಸಮುದಾ ಯದವರು ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇನೆಎಂದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿಕುಂಬಾರರು ತಮ್ಮ ಮಕ್ಕಳಿಗೆ ಉತ್ತಮಶಿಕ್ಷಣವನ್ನು ಕೊಟ್ಟು ಉನ್ನತ ವ್ಯಕ್ತಿಗಳನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಸಂವಿಧಾನಾತ್ಮಕ ಹಕ್ಕು ಪಡೆಯಿರಿ: ನಗರಸಭೆಅಧ್ಯಕ್ಷ ಎಚ್‌.ಎಸ್‌.ಮಂಜು ಮಾತನಾಡಿ, ಧ್ವನಿ ಇಲ್ಲದ ತಳ ಸಮುದಾಯಗಳು ಸಂವಿಧಾನಾತ್ಮಕವಾದ ತಮ್ಮ ಹಕ್ಕುಗಳನ್ನುಸಂಘಟನೆ ಮತ್ತು ಹೋರಾಟದ ಮೂಲಕ ಪಡೆಯಬೇಕು. ಮಂಡ್ಯ ನಗರವ್ಯಾಪ್ತಿಯಲ್ಲಿರುವ ಈ ಸಮುದಾಯದ ಜನರಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆನೀಡಿದರು.

ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರ ಬಾಬು ಎಸ್‌.ಕುಂಬಾರ್‌ ಅವರನ್ನು ಅಭಿನಂದಿಸಲಾಯಿತು. ಗ್ರಾಪಂ ಸದಸ್ಯರನ್ನು ಸನ್ಮಾನಿಸಲಾಯಿತು. ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್‌.ಶ್ರೀನಿವಾಸ್‌, ಸರ್ವಜ್ಞಕುಂಬಾರ ಸೇವಾ ಟ್ರಸ್ಟ್‌ ಅಧ್ಯಕ್ಷ ಆರ್‌. ಶ್ರೀನಿವಾಸ್‌, ಮುಡಾ ಅಧ್ಯಕ್ಷ ಕೆ. ಶ್ರೀನಿವಾಸ್‌, ಕುಂಬಾರ ಜಾಗೃತಿ ವೇದಿಕೆಜಿಲ್ಲಾಧ್ಯಕ್ಷ ಎಂ.ಕೃಷ್ಣ, ಡಿ. ದೇವರಾಜ ಅರಸುವೇದಿಕೆ ಅಧ್ಯಕ್ಷ ಎಲ್‌.ಸಂದೇಶ್‌, ಮುಖಂಡರಾದ ಎಂ.ಪಿ.ವರ್ಷ, ಡಾ.ಸಾಂಬಶಿವ, ಡಾ.ಅಂಬುಜಾಕ್ಷಿ, ಕಾಂತರಾಜು, ಪ್ರದೀಪ್‌,ವೆಂಕಟೇಶ್‌, ಚಿಕ್ಕವೀರಯ್ಯ, ಗುರುರಾಜ್‌ ಮತ್ತಿತರರಿದ್ದರು.

ಕುಂಬಾರ ಸಮುದಾಯ ದವರು ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಆರ್ಥಿಕ ಮತ್ತು ಶೈಕ್ಷಣಿಕಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇನೆಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿಕುಂಬಾರರು ತಮ್ಮ ಮಕ್ಕಳಿಗೆಉತ್ತಮ ಶಿಕ್ಷಣವನ್ನು ಕೊಟ್ಟು ಉನ್ನತವ್ಯಕ್ತಿಗಳನ್ನಾಗಿ ರೂಪಿಸಲು ಮುಂದಾಗಬೇಕು. -ಎಂ.ಶ್ರೀನಿವಾಸ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next