ತುಮಕೂರು: ಮುಂದಿನ ಒಂದು ವರ್ಷದಲ್ಲಿ ರಾಜ್ಯದ ಎಲ್ಲಾ ಪಶುವೈದ್ಯ ಆಸ್ಪತ್ರೆಗಳಿಗೆ ಅಗತ್ಯವಿರುವ ಕಂಪ್ಯೂಟರ್, ಇಂಟರ್‌ನೆಟ್ ವ್ಯವಸ್ಥೆ ನೀಡಲಾಗು ವುದು ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್ ಭರವಸೆ ನೀಡಿದರು.
ನಗರದ ಸಿದ್ಧಗಂಗಾ ಬಾಲಕರ ಕಾಲೇಜಿನ ಡಾ.ಶಿವ ಕುಮಾರಸ್ವಾಮೀಜಿ ಸಭಾಂಗಣದಲ್ಲಿ ಜಿಲ್ಲಾ ಪಶು ವೈದ್ಯಕೀಯ ಇಲಾಖೆ ಹಾಗೂ ಪಶುವೈದ್ಯರ ಸಂಘ ಜಂಟಿಯಾಗಿ ಏರ್ಪಡಿಸಿದ್ದ ವಿಶ್ವ ಪಶುವೈದ್ಯಕೀಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದ ಎಲ್ಲಾ ಪಶುವೈದ್ಯ ಆಸ್ಪತ್ರೆಗಳಿಗೆ ಸರಬರಾಜು ಮಾಡಲು ಸರ್ಕಾರದ ಮುಂದೆ 2800 ಗಣಕಯಂತ್ರಗಳನ್ನು ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ದಿಂದ ಮಂಜೂರಾದ ತಕ್ಷಣವೇ ಎಲ್ಲಾ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುವುದು. ಇಲಾಖೆಯ ಐದು ವಿವಿಧ ಕಾರ್ಯಕ್ರಮಗಳನ್ನು ಸಕಾಲಕ್ಕೆ ತರು ತ್ತಿದ್ದು, ಈ ಕೆಲಸ ಮಾಡಲು ಕಂಪ್ಯೂಟರ್‌ಗಳು ಅತ್ಯವಶ್ಯ ಎಂದು ತಿಳಿಸಿದರು.
ವೈದ್ಯರ ರಕ್ಷಣೆಗೆ ಅಗತ್ಯ ಕ್ರಮ: ಪಶುವೈದ್ಯರು ರಾಸುಗಳಿಗೆ ಬರುವ ರೋಗ ತಡೆಗಟ್ಟುವುದು, ರೋಗ ಬಾರದಂತೆ ಮುನ್ನಚ್ಚರಿಕೆ ವಹಿಸುವುದರ ಜೊತೆಗೆ, ಪಶುಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇಂದಿನ ಬರಗಾಲದಲ್ಲಿ ರೈತರು ಹೈನುಗಾರಿಕೆ, ಪಶು ಸಂಪತ್ತಿನ ಮೇಲೆ ಹೆಚ್ಚು ಅವ ಲಂಬಿತರಾಗುತ್ತಿದ್ದಾರೆ. ಆದ್ದರಿಂದ ಈ ನಿಟ್ಟಿನಲ್ಲಿ ಎಲ್ಲಾ ಪಶುವೈದ್ಯಕೀಯ ಸಿಬ್ಬಂದಿ ಕಾರ್ಯೋನ್ಮುಖ ರಾಗಬೇಕಾಗಿದೆ. ಪಶುವೈದ್ಯರ ಕೊರತೆಯಿಂದ ಹಾಲಿ ಕಾರ್ಯನಿರ್ವಹಿಸುತ್ತಿರುವವರ ಮೇಲೆ ಒತ್ತಡ ಹೆಚ್ಚಿದೆ. ಇದರ ನಿವಾರಣೆಗೆ ಅಗತ್ಯ ಕ್ರಮ ಇಲಾಖೆ ಕೈಗೊಳ್ಳುತ್ತಿದೆ. ಮೇವು ಬ್ಯಾಂಕ್ ಮತ್ತು ಗೋಶಾಲೆ ನಿರ್ವಹಣೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ 31 ಜನರ ಪಶು ವೈದ್ಯರ ಮೇಲೆ ಲೋಕಾ ಯುಕ್ತದಲ್ಲಿರುವ ದೂರಿನ ಬಗ್ಗೆ ಕೂಲಂಕಷ ಪರಿ ಶೀಲನೆ ನಡೆಸಿ, ಯಾವುದೇ ತಪ್ಪು ಮಾಡದೇ ಇರುವ ವೈದ್ಯರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದೂರುಗಳನ್ನು ಋಣಾತ್ಮಕವಾಗಿ ಪರಿಗಣಿಸಿ: ಪಶು ವೈದ್ಯಕೀಯ ಇಲಾಖೆ ನಿರ್ದೇಶಕ ಎಂ.ಟಿ. ಮಂಜುನಾಥ್ ಮಾತನಾಡಿ, ಪಶುವೈದ್ಯಕೀ ಸಿಬ್ಬಂದಿ ಶಿಕ್ಷಣ ಮುಗಿಸಿ ಇಲಾಖೆಗೆ ಸೇರಿದ ನಂತರವೇ ನಿಜ ವಾದ ಕಲಿಕೆ ಆರಂಭವಾಗುತ್ತದೆ. ಸರ್ಕಾರ ಮತ್ತು ರೈತರು, ಸಾರ್ವಜನಿಕರೊಂದಿಗೆ ಹೇಗೆ ವರ್ತಿಸುತ್ತಿರಿ ಎಂಬುದರ ಮೇಲೆ ನಿಮ್ಮ ವೃತ್ತಿ ಜೀವನದ ಏಳು, ಬೀಳು ಇರುತ್ತದೆ. ರೈತರ ದೂರುಗಳನ್ನು ಋಣಾ ತ್ಮಕವಾಗಿ ಪರಿಗಣಿಸಿ, ಸರ್ಕಾರಕ್ಕಿಂತ ರೈತರಿಗೆ, ಜಾನು ವಾರುಗಳ ಮಾಲಿಕರಿಗೆ ನಿಮ್ಮ ಸೇವೆ ತೃಪ್ತಿಯಾಗುವಂತೆ ಮಾಡಿ. ಮೂಕ ಪ್ರಾಣಿಗಳ ಸೇವೆಗೆ ತಕ್ಕ ಪ್ರತಿಫಲ ಸಿಕ್ಕಿಯೇ ತೀರುತ್ತದೆ. ಹಾಗೆಯೇ ಪಶುವೈದ್ಯಕೀಯ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು, ಜೇನು ನೋಣಗಳಾಗಿ ಬದುಕಿ ಎಂದು ಸಲಹೆ ನೀಡಿದರು.
ಮೊದಲ ಸ್ಥಾನದಲ್ಲಿ ಇಲಾಖೆ: ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರುದ್ರಪ್ರಸಾದ್, ಗ್ರಾಮೀಣ ಭಾಗದಲ್ಲಿ ರೈತರಿಗೆ ಅತ್ಯಂತ ಸಮೀಪದಲ್ಲಿದ್ದುಕೊಂಡು ಸೇವೆ ಸಲ್ಲಿಸುತ್ತಿರುವ ಇಲಾಖೆಯಲ್ಲಿ ಪಶು ವೈದ್ಯಕೀಯ ಇಲಾಖೆ ಮೊದಲ ಸ್ಥಾನದಲ್ಲಿದೆ. ಬರಗಾಲದ ಹಿನ್ನೆಲೆ ಯಲ್ಲಿ ಪಶುವೈದ್ಯರ ಸೇವೆಗೆ ಎಲ್ಲಿಲ್ಲದ ಬೇಡಿಕೆ ಇದೆ. ಆದರೆ, ಕಳೆದ 2016-17ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ತೆರೆದಿದ್ದ ಗೋ ಶಾಲೆಗಳ ನಿರ್ವಹಣೆಗೆ ತೊಡಗಿದ್ದ ಸುಮಾರು 31 ಜನ ಪಶುವೈದ್ಯರ ವಿರುದ್ಧ ಲೋಕಾ ಯುಕ್ತದಲ್ಲಿ ಕೇಸು ನಡೆಯುತ್ತಿದ್ದು, ಯಾವುದೇ ತಪ್ಪು ಮಾಡದ ಪಶು ವೈದ್ಯರು ಕಿರುಕುಳ ಅನುಭವಿಸು ವಂತಾಗಿದೆ. ಈ ಬಗ್ಗೆ ಆಯುಕ್ತರು ಗಮನಹರಿಸಿ, ಸಮಸ್ಯೆಗೆ ಪರಿಹಾರ ಒದಗಿಸಬೇಕು. ಹಾಗೇಯೆ ಇಲಾಖೆಯಲ್ಲಿ ಕಂಪ್ಯೂಟರ್ ಆಧಾರಿತ ಯೋಜನೆ ಗಳು ಹೆಚ್ಚಾಗಿರುವ ಕಾರಣ ಎಲ್ಲಾ ಪಶುವೈದ್ಯಕೀಯ ಚಿಕಿತ್ಸಾಲಯಗಳಿಗೆ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಸೌಲಭ್ಯ ಒದಗಿಸುವಂತೆ ಇಲಾಖೆಯ ಆಯು ಕ್ತರು ಮತ್ತು ನಿರ್ದೇಶಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಪಶು ವೈದ್ಯ ಕೀಯ ಮಹಾವಿದ್ಯಾಲಯದ ಸಹಾಯಕ ಪ್ರಧಾಪಕ ಡಾ.ವೀರೇಗೌಡ ರಾಸುಗಳಲ್ಲಿ ರೋಗ ನಿರೋಧಕ ಶಕ್ತಿ ಹಾಗೂ ಲಸಿಕೆಗಳು ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಲ್.ಪ್ರಕಾಶ್, ಪಶು ವೈದ್ಯಕೀಯ ಸಂಘದ ಉಪಾ ಧ್ಯಕ್ಷ ದಿವಾಕರ್, ಪದಾಧಿಕಾರಿಗಳಾದ ಡಾ.ಬೂದಿ ಹಾಳ್, ಡಾ.ಶಶಿಕಲಾ ಸೇರಿದಂತೆ ಇತರರಿದ್ದರು.