ಗುವಾಹಟಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಾಗ್ದಾಳಿ ಮುಂದುವರಿಸಿದ್ದು, ರಾಹುಲ್ ಗಾಂಧಿ ಆಧುನಿಕ ದಿನದ ಜಿನ್ನಾ ಎಂದು ಕರೆದಿದ್ದಾರೆ.
ಇದನ್ನೂ ಓದಿ:ಸೀರೆಗಾಗಿ ಬಾಲ್ಕನಿಯಿಂದ ಮಗನನ್ನು ನೇತಾಡಿಸಿದ ತಾಯಿ : ವಿಡಿಯೋ ವೈರಲ್
ಶುಕ್ರವಾರ(ಫೆ.11) ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದ ಶರ್ಮಾ, ಪಾಕಿಸ್ತಾನದ ಪ್ರದೇಶದೊಳಗೆ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿರುವುದಕ್ಕೆ ಪುರಾವೆ ಕೇಳುತ್ತಾರೆ. ಆದರೆ ನಾವೆಂದರೂ ಒಂದು ವೇಳೆ ನೀವು ನಿಜವಾಗಿಯೂ ರಾಹುಲ್ ಗಾಂಧಿಯ ಮಗ ಹೌದು ಅಥವಾ ಅಲ್ಲವೇ ಎಂದು ಕೇಳಿದ್ದೇವೆಯೇ ಎಂದು ವಿವಾದಿತ ಹೇಳಿಕೆ ನೀಡಿದ್ದರು.
ರಾಹುಲ್ ಗಾಂಧಿಯ ಭಾಷೆ ಮತ್ತು ಭಾಷಣ 1947ರಕ್ಕಿಂತ ಹಿಂದಿನ ಜಿನ್ನಾ ಅವರಂತೆಯೇ ಇದೆ ಎಂದು ಶರ್ಮಾ ಟೀಕಿಸಿದ್ದು, ಒಂದು ರೀತಿಯಲ್ಲಿ ರಾಹುಲ್ ಗಾಂಧಿ ಆಧುನಿಕ ಜಿನ್ನಾ ರೀತಿ ವರ್ತಿಸುತ್ತಿರುವುದಾಗಿ ಕಿಡಿಕಾರಿರುವುದಾಗಿ ವರದಿ ತಿಳಿಸಿದೆ.
ಅಸ್ಸಾಂನಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ಗುವಾಹಟಿಯಲ್ಲಿ ಶರ್ಮಾ ಪ್ರತಿಕೃತಿಯನ್ನು ಸುಟ್ಟಿರುವುದಾಗಿ ವರದಿ ಹೇಳಿದೆ.