Advertisement
ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಹೀಗಾಗಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದೆ. ಕಡಬ, ಸುಳ್ಯ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಪಣಂಬೂರಿನಲ್ಲಿ ಕಡಲಬ್ಬರ ಜೋರಾಗಿತ್ತು. ಗಾಳಿ-ಮಳೆಗೆ ಕೆಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ.
ಸುಬ್ರಹ್ಮಣ್ಯ: ಸುಳ್ಯ ತಾಲೂಕಿನಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ಮುಂದುವರಿದ್ದು, ಹಲವೆಡೆ ಹಾನಿ ಸಂಭವಿಸಿದೆ. ಹೆದ್ದಾರಿ ಜಲಾವೃತಗೊಂಡಿದೆ. ಕುಮಾರಧಾರಾ ನದಿಯಲ್ಲಿ ಸೋಮವಾರ ನೀರಿನ ಮಟ್ಟ ಏರಿಕೆಯಾಗಿದ್ದು, ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ಪಂಜ – ಕಡಬ ಹೆದ್ದಾರಿಯ ಪುಳಿಕುಕ್ಕು ಬಳಿ ಹೆದ್ದಾರಿ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಸಂಪಾಜೆ ಗ್ರಾಮದ ಪೇರಡ್ಕಕ್ಕೆ ತೆರಳುವ ಸೇತುವೆ ಮುಳುಗಡೆಯಾಗಿದೆ.
Related Articles
ಉಡುಪಿ: ಜಿಲ್ಲೆಯಲ್ಲಿ ರವಿವಾರ ತಡರಾತ್ರಿ, ಸೋಮವಾರ ಬಿಟ್ಟುಬಿಟ್ಟು ಮಳೆ ಸುರಿದಿದೆ. ಕುಂದಾಪುರ, ಬೈಂದೂರು, ಸಿದ್ದಾಪುರ, ಹೆಬ್ರಿ, ಅಜೆಕಾರು, ಕಾರ್ಕಳ, ಪಡುಬಿದ್ರಿ, ಕಾಪು, ಬ್ರಹ್ಮಾವರ, ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಮತ್ತೆ ಮಳೆ ಚುರುಕುಗೊಂಡಿದೆ. ಉಡುಪಿ ನಗರದ ಸುತ್ತಮುತ್ತ ಬಿಸಿಲ ವಾತಾವರಣದ ನಡುವೆ ಬಿಟ್ಟುಬಿಟ್ಟು ಮಳೆಯಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ 3, ಕಾರ್ಕಳ 2, ಬೈಂದೂರು ತಾಲೂಕಿನಲ್ಲಿ 3 ಮನೆಗಳು ಸೇರಿ 8 ಮನೆಗಳಿಗೆ ಹಾನಿ ಸಂಭವಿಸಿದೆ.
Advertisement
ಮಂಗಳವಾರ ಮತ್ತು ಬುಧವಾರಕ್ಕೆ ಎಲ್ಲೋ ಅಲರ್ಟ್ ಇದೆ. ಸಮುದ್ರದ ಪ್ರಕ್ಷುಬ್ದತೆ ಮುಂದುವರಿಯಲಿದ್ದು, ಗಾಳಿ ಕಡಿಮೆಯಾಗುವ ಸಂಭವವಿದೆ.