Advertisement

“ಕೋವಿಡ್ ಸಮಯದಲ್ಲೂ ಮೋಡೆಲ್‌ ಬ್ಯಾಂಕಿನ ಸೇವೆ ವಿಶ್ವಾಸಾರ್ಹ”

08:27 PM Feb 26, 2021 | Team Udayavani |

ಮುಂಬಯಿ: ಗತ ಸಾಲಿನ ಕೋವಿಡ್ ಸಂಕಟದ ಸಮಯದಲ್ಲೂ ಮೋಡೆಲ್‌ ಬ್ಯಾಂಕ್‌ ಹಣಕಾಸು ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿ ಗ್ರಾಹಕರ ವಿಶ್ವಾಸರ್ಹತೆಗೆ ಪಾತ್ರವಾಗಿರುವುದು ನಮ್ಮ ಹಿರಿಮೆಯಾಗಿದೆ.

Advertisement

ಕೋವಿಡ್‌ ಸಾಂಕ್ರಾಮಿಕವು ಜಾಗತಿಕವಾಗಿ ಹಣಕಾಸು ವಹಿವಾಟು ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರೂ ತನ್ನ ಅಸ್ತಿತ್ವದಲ್ಲಿರುವ ನವೀನ ಉತ್ಪನ್ನಗಳನ್ನು ಮತ್ತು ಸೇವೆಗಳ ಜತೆಗೆ ಮೋಡೆಲ್‌ ಬ್ಯಾಂಕ್‌ ಹೊಸತನದೊಂದಿಗೆ ಆಧುನಿಕ ಸವಲತ್ತುಗಳನ್ನು ಪರಿಚಯಿಸಲು ಸಮರ್ಥವಾಗಿದೆ. 2020-21ನೇ ಪ್ರಸ್ತುತ ವರ್ಷದಲ್ಲಿ ನಮ್ಮದೇ ಆದ ಐಎಫ್‌ಎಸ್‌ಸಿ ಕೋಡ್‌ ಅನ್ನು ಸಕ್ರಿಯಗೊಳಿಸಲು ಬ್ಯಾಂಕಿಗೆ ಸಾಧ್ಯವಾಗಿದೆ. ಇದು ನೆಫ್ಟ್‌ ಮತ್ತು ಆರ್‌ಟಿಜಿಎಸ್‌ ವಹಿವಾಟುಗಳನ್ನು ವೇಗವಾಗಿ ಪ್ರಕ್ರಿಯೆಗೊಳಿಸಲು ಅನುವುಮಾಡಿಕೊಟ್ಟಿದ್ದು, ಮೊಬೈಲ್‌ ಬ್ಯಾಂಕಿಂಗ್‌ ಅಪ್ಲಿಕೇಶನ್‌ನಲ್ಲಿ ಐಎಂಪಿಎಸ್‌ ಮತ್ತು ಯುಪಿಐ ಪಾವತಿ ಪ್ಯಾ$Éಟ್‌ಫಾರ್ಮ್ಗಳನ್ನು ಒದಗಿಸಿದೆ.

ನಮ್ಮ ಬ್ಯಾಂಕ್‌ ವೈಶಿಷ್ಟéಗಳೊಂದಿಗೆ ಇತರ ಸೇವೆಗಳನ್ನು ಪರಿಚಯಿಸಿ ಶೈಕ್ಷಣಿಕ ಮತ್ತು ಇತರ ಸಂಸ್ಥೆಗಳಿಗೆ ಆನ್‌ಲೈನ್‌ ಶುಲ್ಕ ಪಾವತಿಗಳನ್ನು ಸ್ವೀಕರಿಸಲು, ಆಕರ್ಷಕ ಚಿನ್ನದ ಸಾಲ ಯೋಜನೆಯನ್ನು ಪ್ರಾರಂಭಿಸಿದೆ. ಆರ್‌ಬಿಐಯ ಸೇವಾ ನಿರ್ವಹಣೆ, ನಿಯಂತ್ರಕತೆ, ಕಾರ್ಯಾಚರಣೆಯ ಜತೆಗೂ ನಮ್ಮ ಗ್ರಾಹಕರು ಮತ್ತು ಷೇರುದಾರರ ಬೆಂಬಲದೊಂದಿಗೆ ಬ್ಯಾಂಕ್‌ ಸದೃಢವಾಗಿ ಬೆಳೆದು ನಿಂತಿದೆ ಎಂದು ಮೋಡೆಲ್‌ ಕೋ. ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ನ‌ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬ್ಲೂÂ. ಡಿ’ಸೋಜಾ ನುಡಿದರು.

ಫೆ. 25ರಂದು ಪೂರ್ವಾಹ್ನ ಬಾಂದ್ರಾ ಪಶ್ಚಿಮದ ಸೈಂಟ್‌ ಆ್ಯಂಡ್ರೂಸ್‌ ಸಭಾಗೃಹ ದಲ್ಲಿ ನಡೆದ ಮೋಡೆಲ್‌ ಬ್ಯಾಂಕಿನ 103ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್‌ನ 2019-20ನೇ ಸಾಲಿನ ವಾರ್ಷಿಕ ಕಾರ್ಯಸಾಧನೆ ತೃಪ್ತಿದಾಯಕವಾಗಿದೆ. ಕೋವಿಡ್‌ ನಿಮಿತ್ತ ಆರ್‌ಬಿಐ ಮಾರ್ಗಸೂಚಿ ಹಾಗೂ ಉಭಯ ಸರಕಾರಗಳ ಆದೇಶನುಸಾರ ಈ ಬಾರಿ ಮಹಾಸಭೆಯನ್ನು ತಡವಾಗಿ ಹಾಗೂ ಕಾನೂನಾತ್ಮಕವಾಗಿ ನಡೆಸುವುದು ಅನಿವಾರ್ಯವಾಯಿತು ಎಂದು, ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಬ್ಯಾಂಕಿನ ಮೇಲಿನ ನಂಬಿಕೆ ಪುನರಾವರ್ತಿಸಿರುವುದಕ್ಕೆ ಕೃತಜ್ಞತೆಗಳು ಎಂದರು.

ವೇದಿಕೆಯಲ್ಲಿ ಬ್ಯಾಂಕಿನ ಸಂಸ್ಥಾಪಕಾಧ್ಯಕ್ಷ ಜೋನ್‌ ಡಿಸಿಲ್ವಾ, ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರ, ನಿರ್ದೇಶಕರಾದ ವಿನ್ಸೆಂಟ್‌ ಮಥಾಯಸ್‌, ಸಿಎ ಪೌಲ್‌ ನಝರೆತ್‌, ಅಬ್ರಹಾಂ ಕ್ಲೇಮೆಂಟ್‌ ಲೊಬೋ, ಸಂಜಯ್‌ ಶಿಂಧೆ, ಥೋಮಸ್‌ ಡಿ.ಲೋಬೊ, ಲಾರೇನ್ಸ್‌ ಡಿ’ಸೋಜಾ, ನ್ಯಾಯವಾದಿ ಪಿಯುಸ್‌ ವಾಸ್‌, ಬೆನೆಡಿಕ್ಟಾ ರೆಬೆಲ್ಲೋ, ಜೆರಾಲ್ಡ್‌ ಕರ್ಡೊಜಾ, ಆ್ಯನ್ಸಿ ಡಿ’ಸೋಜಾ, ಬ್ಯಾಂಕಿನ ಸಲಹಾ ಸದಸ್ಯ, ನಿಕಟಪೂರ್ವ ಸಿಇಒ ವಿಲಿಯಂ ಎಲ್‌.ಡಿ’ಸೋಜಾ, ಪ್ರಧಾನ ಪ್ರಬಂಧಕ ಝೆನೊನ್‌ ಡಿಕ್ರೂಜ್‌ ಉಪಸ್ಥಿತರಿದ್ದರು.

Advertisement

ಸದ್ಯದ ಬ್ಯಾಂಕಿಂಗ್‌ ಸೇವೆ ಮನೆ ಬಾಗಿಲಿನಿಂದ ಕೈಬೆರಳ ತುದಿ ತನಕ ಸೇವೆಗೆ ಸಜ್ಜಾಗಿದೆ. ಎಲ್ಲದ್ದಕ್ಕೂ ಸಾಲ ಸೇವಾ ವ್ಯವಸ್ಥೆ ಪೂರೈಸುತ್ತಿವೆ. ಆದ್ದರಿಂದ ಯವ ಪೀಳಿಗೆ ಬ್ಯಾಂಕಿನ ಸೇವಾ ವೈಖರಿಯನ್ನು ತಿಳಿದು ಆರ್ಥಿಕ ವ್ಯವಸ್ಥೆಯಲ್ಲಿ ತೊಡಗಿಸಿ ಉದ್ಯಮಶೀಲರಾಗಬೇಕು ಎಂದ‌ು ಮೋಡೆಲ್‌ ಬ್ಯಾಂಕಿನ ಸಂಸ್ಥಾಪಕಾಧ್ಯಕ್ಷ ಜೋನ್‌ ಡಿಸಿಲ್ವಾ ತಿಳಿಸಿದರು.
ವಿನ್ಸೆಂಟ್‌ ಮಥಾಯಸ್‌ ಮಾತನಾಡಿ, ಇದು ಒಂದು ಸಮುದಾಯದ ಧುರೀಣರು ಸ್ಥಾಪಿಸಿದ ಹಣಕಾಸು ಸಂಸ್ಥೆಯಾದರೂ ಇದೊಂದು ಸಾರ್ವಜನಿಕ ಸೇವಾ ಪಥಸಂಸ್ಥೆಯಾಗಿದೆ. ಬ್ಯಾಂಕ್‌ ಸಾಲ ಪಡೆದೇ ನಾನೋರ್ವ ಸಾಧಕ ಉದ್ಯಮಿಯಾಗಲು ಸಾಧ್ಯವಾಗಿದೆ. ಸಾಲ ಅನ್ನುವುದು ಪ್ರೋತ್ಸಾಹಕ ಹಣಕಾಸು ವ್ಯವಸ್ಥೆಯಾಗಿದ್ದು ವಿಶೇಷವಾಗಿ ಯುವಜನತೆ ಇದರ ಪ್ರಯೋಜನ ಪಡೆದು ಸ್ವಉದ್ಯಮಿಗಳಾಗಬೇಕು ಎಂದರು.

ಸಭೆಯಲ್ಲಿ ಬ್ಯಾಂಕ್‌ನ ನೂರಾರು ಷೆೇರುದಾರರು, ಹಿತೈಷಿಗಳು, ಸಹಾಯಕ ಪ್ರಧಾನ ಪ್ರಬಂಧಕರಾದ ಓಸೆxನ್‌ ಫೂನ್ಸೆಕಾ, ನರೇಶ್‌ ಠಾಕೂರ್‌, ರತ್ನಾಕರ್‌ ಶೆಟ್ಟಿ, ಹಿರಿಯ ಪ್ರಬಂಧಕ (ಐಟಿ) ವಿಜಯ್‌ ಚವ್ಹಾಣ್‌ ಮತ್ತು ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಹಾಜರಿದ್ದರು. ಸಭಿಕರ ಪರವಾಗಿ ಮೈಕಲ್‌ ಜೋನ್‌ ತಾವ್ರೊ, ಹೆನ್ರಿ ಲೋಬೊ, ಡೆನಿjಲ್‌ ಡಿಸೋಜಾ, ಸುನೀಲ್‌ ಲೋಬೊ, ರೀಟಾ ಡೆಸಾ ಮಾಹಿಮ್‌, ಜೋಸೆಫ್‌ ಮಥಾಯಸ್‌, ಗ್ರೆಗೋರಿ ಮೋನಿಸ್‌, ಜೂಡ್‌ ಲೋಬೊ, ಲಾರೇನ್ಸ್‌ ಫೆರ್ನಾಂಡಿಸ್‌, ಡೆಸ್ಮಂಡ್‌ ಜೆ. ಡಿಸಿಲ್ವಾ, ಸಿ. ಮಸ್ಕರೇನ್ಹಾಸ್‌ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಲಹೆ ಸೂಚನೆಗಳನ್ನು ನೀಡಿ ಶುಭಹಾರೈಸಿದರು. ಗತ ಸಾಲಿನಲ್ಲಿ ಅಗಲಿದ ಬ್ಯಾಂಕಿನ ಸದಸ್ಯರು, ಗ್ರಾಹಕರು, ಹಿತೈಷಿಗಳಿಗೆ ಮತ್ತು ರಾಷ್ಟ್ರದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯ ಪ್ರಬಂಧಕಿ ಬಿಯೆಟಾ ಕರ್ವಾಲೊ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವಿಲಿಯಂ ಸಿಕ್ವೇರಾ ವಂದಿಸಿದರು.

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next