Advertisement

ಕರ್ನಾಟಕ ಪೊಲೀಸ್‌ ದೇಶಕ್ಕೆ ಮಾದರಿ

12:56 PM Aug 03, 2017 | |

ಧಾರವಾಡ: ರಾಜ್ಯದ ಪೊಲೀಸ್‌ ನೇಮಕಾತಿ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿದ್ದು, ಇತರ ರಾಜ್ಯಗಳು ಇದನ್ನು ಅನುಸರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ರಾಜ್ಯ ಸಿಐಡಿ ಡಿಜಿಪಿ ಎಚ್‌.ಸಿ. ಕಿಶೋರ್‌ ಚಂದ್ರ ಅಭಿಪ್ರಾಯಪಟ್ಟರು. ಇಲ್ಲಿನ ಪೊಲೀಸ್‌ ತರಬೇತಿ ಶಾಲೆಯಲ್ಲಿ ನಡೆದ ದ್ವಿತೀಯ ತಂಡದ ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ಗ‌ಳ ನಿರ್ಗಮನ ಪಥಸಂಚಲನದಲ್ಲಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. 

Advertisement

ಪೊಲೀಸ್‌ ಇಲಾಖೆ ಸೇರಿದವರು, ವ್ಯಕ್ತಿ ಸಾಮರ್ಥ್ಯದ ಮೇಲೆ ಪೊಲೀಸ್‌ ಪೇದೆಗಳಾಗಿ ಆಯ್ಕೆಯಾಗಿದ್ದಿರಿ. ನೀವು ಯಾರ ಮುಲಾಜಿಗೂ ಒಳಗಾಗಬೇಕಿಲ್ಲ. ಕಾನೂನಿಗೆ ವಿಧೇಯರಾಗಿ ಕರ್ತವ್ಯ ನಿರ್ವಹಿಸಿ, ನೀವು ಇಂದು ಸ್ವೀಕರಿಸಿದ ಪ್ರತಿಜ್ಞಾವಿಧಿಯನ್ನು ಕರ್ತವ್ಯದ ಅವ ಧಿಯಲ್ಲಿ ಕಾಯಾ ವಾಚಾ ಮನಸಾ ಪಾಲಿಸಿ ಎಂದು ಸಲಹೆ ನೀಡಿದರು. 

ನಿರ್ಗಮನ ಪಥಸಂಚಲನ ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಗೂ ಸ್ಮರಣೀಯ ದಿನವಾಗಿದೆ. ಈ ದಿನವನ್ನು ನಾವು ನಿವೃತ್ತಿಯಾದ ನಂತರವು ನೆನಪಿಸಿಕೊಳ್ಳುತ್ತೇವೆ. ತರಬೇತಿ ಅವಧಿಯಲ್ಲಿ ಮೂಲಭೂತವಾದ ಅಂಶಗಳ ಬಗ್ಗೆ ತರಬೇತಿ ನೀಡಲಾಗಿರುತ್ತದೆ. ರಾಜ್ಯದ ಯಾವುದೇ ಸರ್ಕಾರಿ ಇಲಾಖೆಯಲ್ಲಿ ನಿಮ್ಮ ಮಟ್ಟದ ಅಧಿಕಾರಿಗಳಿಗೆ 9 ತಿಂಗಳ ತರಬೇತಿ ನೀಡುವುದಿಲ್ಲ.

ಆದರೆ ಪೊಲೀಸ್‌ ಇಲಾಖೆಯಲ್ಲಿ ತರಬೇತಿ ನೀಡಲಾಗುತ್ತದೆ. ಇದು ನಿಮ್ಮ ಸೇವಾ ಅವ ಧಿಯಲ್ಲಿ ಬಹಳ ಉಪಯೋಗಕ್ಕೆ ಬರುತ್ತದೆ. ಇಂದು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಇದನ್ನು ಗ್ರಹಿಸಿ ನೀವು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಪೊಲೀಸ್‌ ಇಲಾಖೆ ಒಂದು ದೊಡ್ಡ ಕುಟುಂಬವಿದ್ದಂತೆ. ಇಲ್ಲಿ ಸುಮಾರು ಒಂದು ಲಕ್ಷ ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. 

ಪಥ ಸಂಚಲನ: ಕಾರ್ಯಕ್ರಮದಲ್ಲಿ 12 ವಿವಿಧ ಘಟಕಗಳಿಂದ ಒಟ್ಟು 354 ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿದ್ದರು. ಇದರಲ್ಲಿ 24 ಜನ ಸ್ನಾತ್ತಕೋತ್ತರ ಪದವಿಧರರು, 169 ಜನ ಪದವಿಧರರು, 74 ಜನ ಡಿಎಡ್‌ ಮತ್ತು ಬಿ.ಎಡ್‌. ತರಬೇತಿ ಕೋರ್ಸ್‌ ಗಳನ್ನು ಮಾಡಿದವರು, 87 ಜನ ಪಿಯುಸಿ ಹಂತದ ಶಿಕ್ಷಣ ಪೂರೈಸಿದವರು ಇದ್ದಾರೆ.

Advertisement

ತರಬೇತಿ ಅವಧಿಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇಯತರಾದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ತರಬೇತಿ ಶಾಲೆಯ ಪ್ರಾಂಶುಪಾಲ ಆರ್‌.ಎ. ಪಾರಶೆಟ್ಟಿಯವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ವಾರ್ಷಿಕ ವರದಿ ವಾಚನ ಮಾಡಿದರು. 

ಕರ್ನಾಟಕ ರಾಜ್ಯ ಪೊಲೀಸ್‌ ತರಬೇತಿ ಕೇಂದ್ರ ಮಹಾನಿರ್ದೇಶಕ ಪ್ರೇಮ್‌ಶಂಕರ ಮೀನಾ, ಮಹಾನಿರೀಕ್ಷಕ ಬಿಜಯಕುಮಾರ ಸಿಂಹ, ಹುಬ್ಬಳ್ಳಿ-ಧಾರವಾಡ ಕಮೀಷನರೇಟ್‌ ಕಾನೂನು ಸುವ್ಯವಸ್ಥೆಯ ಡಿಸಿಪಿಯಾದ ರೇಣುಕಾ ಸುಕುಮಾರನ್‌ (ಪ್ರಭಾರಿ ಕಮೀಷನರ್‌) ಸೇರಿದಂತೆ ಇಲಾಖೆಯ ಹಿರಿಯ ಕರ್ತವ್ಯನಿರತ ಹಾಗೂ ನಿವೃತ್ತ ಅ ಧಿಕಾರಿಗಳು, ತರಬೇತಿ ಕೇಂದ್ರ ಸಿಬ್ಬಂದಿಗಳು ಪ್ರಶಿಕ್ಷಣಾರ್ಥಿಗಳ ಕುಟುಂಬದವರು, ಸ್ನೇಹಿತರು, ಸಾರ್ವಜನಿಕರು ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next