Advertisement

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ : ಮಾಡೆಲ್ ಸೋನಿಯಾ ಸೇರಿ ಮೂವರ ಬಂಧನ

03:08 PM Aug 30, 2021 | Team Udayavani |

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಇಂದು (ಆ.30) ಮಾಡೆಲ್ ಸೋನಿಯಾ ಅಗರ್ವಾಲ್ ಹಾಗೂ ಡಿಜೆ ವಚನ್ ಚಿನ್ನಪ್ಪ ಮತ್ತು ಉದ್ಯಮಿ ಭರತ್ ನನ್ನು ವಶಕ್ಕೆ ಪಡೆದಿದ್ದಾರೆ.

Advertisement

ಸೋಮವಾರ ಮುಂಜಾನೆ ಸೋನಿಯಾ​, ವಚನ್​ ಚಿನ್ನಪ್ಪ, ಉದ್ಯಮಿ ಭರತ್​ ಮುಂತಾದವರ ಮನೆಯ ಮೇಲೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ಮಾಡಿದ್ದಾರೆ.

ಡ್ರಗ್ ಪೆಡ್ಲರ್ ಥಾಮಸ್ ಈ ಹಿಂದೆ ನೀಡಿದ್ದ ಮಾಹಿತಿಯನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ರಾಜಾಜಿನಗರ, ಪದ್ಮನಾಭನಗರ, ಬೆನ್ಸೆನ್ ಟೌನ್ ಮುಂತಾದ ಕಡೆ ಇರುವ ಸೆಲೆಬ್ರಿಟಿಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಮಾದಕ ವಸ್ತುಗಳು ಪತ್ತೆ ಆಗಿದೆ ಎಂದು ತಿಳಿದು ಬಂದಿದೆ.

ತಮ್ಮ ಫ್ಲ್ಯಾಟ್‌ನಲ್ಲಿ ಉದ್ಯಮಿ ಭರತ್‌ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದರು ಎನ್ನಲಾಗಿದೆ. ಸೆಲೆಬ್ರಿಟಿಗಳ ಜೊತೆಗೂ ಅವರು ಸಂಪರ್ಕ ಹೊಂದಿದ್ದರು. ಕಾರ್ಯಚರಣೆ ಬಳಿಕ ಅವರನ್ನು ಗೋವಿಂದಪುರ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಡ್ರಗ್ಸ್ ಪೆಡ್ಲರ್ ಥಾಮಸ್ ಜೊತೆ ಸಂಪರ್ಕದಲ್ಲಿದ್ದರು ಎಂಬ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿದೆ. ಡಿಜೆ ವಚನ್​ ಚಿನ್ನಪ್ಪ ಮನೆಯಲ್ಲಿ 50 ಗ್ರಾಂ ಗಾಂಜಾ ಪತ್ತೆ ಆಗಿದ್ದು, ಅವರನ್ನೂ ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next