Advertisement

ಪ್ರಗತಿಗೆ ಹೆಸರಾದ ಮಾದರಿ ಸ್ತ್ರೀ ಶಕ್ತಿ ಸಂಘಗಳು

04:39 PM Mar 23, 2019 | |

ಯಾದಗಿರಿ: ಹಿಂದೇ ಒಂದು ಕಾಲ ಇತ್ತು. ಮಹಿಳೆ ಕೇವಲ ನಾಲ್ಕು ಗೋಡೆಗಳ ಮಧ್ಯೆಯೇ ಸೀಮಿತವಾಗಿದ್ದಳು, ಈಗ ಬೆಳೆಯುತ್ತಿರುವು ಜಗತ್ತಿನೊಂದಿಗೆ ಗಡಿ ಜಿಲ್ಲೆಯ ಮಹಿಳಯರು ಸಬಲರಾಗುತ್ತಿರುವುದು ಸಂತಸದ ಸಂಗತಿ. ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಸ್ತ್ರೀ ಶಕ್ತಿ ಗುಂಪುಗಳಿದ್ದು,
ಹಲವು ಬಗೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಇವರಲ್ಲಿ ಪ್ರಮುಖವಾಗಿ ಶಹಾಪುರ ನಗರದಲ್ಲಿರುವ ಪ್ರಿಯಾ ದರ್ಶಿನಿ ಸ್ತ್ರೀ ಶಕ್ತಿ ಸಂಘವು ನಿರ್ಮಲಾ ಉಪ್ಪಿನ್‌ ಮತ್ತು ರಾಜೇಶ್ವರಿ ಅವರ ನೇತೃತ್ವದಲ್ಲಿ ಬಗೆ ಬಗೆಯ ಮುತ್ತಿನ ಹಾರಗಳನ್ನು ತಯಾರಿಸುವ ಮೂಲಕ ತನ್ನ ಛಾಪು ಮೂಡಿಸಿದೆ. 2019ರ ಜನವರಿಯಲ್ಲಿ ಪ್ರಾರಂಭವಾದ ಸಂಘ 15 ಸದಸ್ಯನ್ನು ಒಳಗೊಂಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸುತ್ತು ನಿಧಿ ಯನ್ನು ಪಡೆದು, ಮಹಿಳಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ಕಿರು ಸಾಲ, 40 ಸಾವಿರ ಉದ್ಯೋಗಿನಿ ಲೋನ್‌ ಹಾಗೂ 3.75 ಲಕ್ಷ ಬ್ಯಾಂಕ್‌ ಲೋನ್‌ ತೆಗದುಕೊಂಡಿದ್ದು, ಇದರಿಂದ ವಿವಿಧ ರೀತಿಯ ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

Advertisement

ಪ್ರಸ್ತುತ ಹಿಟ್ಟಿನ ಗಿರಿಣಿ, ಶಾವಿಗಿ ಮಿಷನ್‌ ಹಾಗೂ ಮುತ್ತಿನ ಹಾರ ತಯಾರಿಸುವುದಕ್ಕೆ ಕಚ್ಚಾ ವಸ್ತುಗಳನ್ನು ಖರೀದಿಸಲು ಈ ಅನುದಾನವನ್ನು ಉಪಯೋಗಿಸಿ ತಯಾರಿಸಿದ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿದೆ. ಮುತ್ತಿನ ಹಾರಗಳನ್ನು ತಯಾರಿಸಿ ಇಲ್ಲಿಯರೆಗೂ 2 ಲಕ್ಷ ಉಳಿತಾಯ ಮಾಡಿದ್ದು, ತಿಂಗಳಿಗೆ 5ರಿಂದ 6 ಸಾವಿರಗಳಷ್ಟು ಲಾಭ ಪಡೆಯುತ್ತಿದ್ದಾರೆ.

ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಸ್ತು ಪ್ರದರ್ಶನ ಮಾರಾಟ ಮೇಳದಲ್ಲಿ ಭಾಗವಹಿಸಿದ್ದಲ್ಲದೇ ಮೈಸೂರು, ಬೆಂಗಳೂರಿನ ಮಡಿವಾಳ ಹಾಗೂ ಕೊಡಗು, ಕಲಬುರಗಿಯಲ್ಲಿವಸ್ತು ಪ್ರದರ್ಶನ ಮಾರಾಟ ಮೇಳದಲ್ಲಿ ಭಾಗವಹಿಸಿದ್ದಾರೆ. 2015-16ನೇ ಸಾಲಿನಲ್ಲಿ ಯಾದಗಿರಿ ಜಿಲ್ಲೆಯ ಜಿಲ್ಲಾ
ಮಟ್ಟದಲ್ಲಿ ಅತ್ಯುತ್ತಮ ಸ್ತ್ರೀಶಕ್ತಿ ಸಂಘ ಎಂಬ ಹೆಮ್ಮೆಗೂ ಈ ಸಂಘ ಪಾತ್ರವಾಗಿದೆ.

ಫೇಮಸ್‌ ಮಸಾಲೆ: ಶಹಾಪುರ ತಾಲೂಕಿನ ಗೋಗಿಪೇಠದ ಶ್ವೇತಾ ಸ್ತ್ರೀ ಶಕ್ತಿ ಸಂಘದ ಮಸಾಲೆ ಪದಾರ್ಥಗಳು ಈ ಭಾಗದಲ್ಲಿ ಅತ್ಯಂತ
ಹೆಸರು ಪಡೆದಿದೆ. ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ತಯಾರಿಸುವ ಮಸಲಾ ಪ್ಯಾಕೇಟ್‌ ಬ್ರ್ಯಾಂಡೆಡ್‌ ಇದ್ದು, ತಿಪ್ಪು ಬಾಯಿ ಮತ್ತು
ಶಕುಂತಲಾ ನೇತೃತ್ವದದಲ್ಲಿ ತಯಾರಾಗುವ ಪರಿಮಳ ಹೆಸರಿನ ಮಸಾಲೆ ಪ್ಯಾಕೇಟ್‌ ಕಲಬುರಗಿ, ರಾಯಚೂರ, ಹಾಗೂ ಶಹಾಪುರಲ್ಲಿ ಬೇಡಿಕೆ ಹೊಂದಿದೆ. ಸಂಘ 2010ರ ಜುಲೈನಲ್ಲಿ ಪ್ರಾರಂಭವಾಗಿದ್ದು, 15 ಸದಸ್ಯರನ್ನು ಹೊಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 20 ಸಾವಿರ ಸುತ್ತುನಿಧಿ ಪಡೆದು ಮಹಿಳಾ ಅಭಿವೃದ್ಧಿ ನಿಗಮದಿಂದ 2 ಲಕ್ಷ ರೂಪಾಯಿ ಕಿರುಸಾಲ ಹಾಗೂ 50 ಸಾವಿರದಷ್ಟು ಬ್ಯಾಂಕ್‌ ಲೋನ್‌
ಪಡೆದಿದ್ದಾರೆ. ಇದರಿಂದ ವಿವಿಧ ರೀತಿಯ ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಿಂಗಳಿಗೆ ಸರಾಸರಿ 5ರಿಂದ 6 ಸಾವಿರಗಳಷ್ಟು ಲಾಭ ಪಡೆಯುತ್ತಿದ್ದಾರೆ. ಮೈಸೂರಿನ ದಸಾರ ವಸ್ತು ಪ್ರದರ್ಶನ ಮಾರಾಟ ಮೇಳದಲ್ಲಿಯೂ ಭಾಗವಹಿಸಿರುವ ಕೀರ್ತಿ ಈ ಸಂಘಕ್ಕಿದೆ.

ನಮ್ಮ ಸಂಘವು ಬಗೆ ಬಗೆಯ ಮುತ್ತಿನ ಹಾರ ತಯಾರಿಸುತ್ತಿದ್ದು, ಆಕರ್ಷಕ ಕಚ್ಚಾ ವಸ್ತಗಳನ್ನು ಖರೀದಿಸಿ ತಯಾರಿಸಿದ ಬಳಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಹಿಟ್ಟಿನ ಗಿರಿಣಿ, ಶಾವಿಗಿ ಮಷೀನ್‌ ನಡೆಸಲಾಗುತ್ತಿದ್ದು, ಸಂಘಕ್ಕೆ ಆದಾಯ ಬರುವಂತೆ ಮಾಡಿದೆ.
 ನಿರ್ಮಲಾ ಉಪ್ಪಿನ್‌, ಅಧ್ಯಕ್ಷೆ. ಪ್ರಿಯಾದರ್ಶಿನಿ ಸ್ತ್ರೀ ಶಕ್ತಿ ಸಂಘ ಶ್ವೇತಾ ಸ್ತ್ರೀ ಶಕ್ತಿ ಸಂಘದ ಮಸಾಲೆ ಪದಾರ್ಥಗಳಿಗೆ ನಮ್ಮ ಜಿಲ್ಲೆಯಲ್ಲದೆ. ಕಲಬುರಗಿ ಮತ್ತು ರಾಯಚೂರಿನಲ್ಲಿಯೂ ಬೇಡಿಕೆಯಿದೆ. ಸಂಘದ ಕಾರ್ಯಕರ್ತೆಯರು ತಯಾರಿಸಿದ ಮಸಾಲೆಯನ್ನು ಪ್ಯಾಕಿಂಗ್‌ ಮಾಡಿ ಮಾರಾಟ ಮಾಡಲಾಗುತ್ತಿದೆ. ಉತ್ತಮ ಆದಾಯವೂ ಸಂಘಕ್ಕೆ ಬರುತ್ತಿದೆ.

Advertisement

 ತಿಪ್ಪು ಬಾಯಿ, ಅಧ್ಯಕ್ಷೆ ಶ್ವೇತಾ ಸ್ತ್ರೀ ಶಕ್ತಿ ಸಂಘ ಮಹಿಳೆಯರು ಸ್ತ್ರೀ ಶಕ್ತಿ ಸಂಘಗಳನ್ನು ಕಟ್ಟಿಕೊಂಡು ಹಲವು ಚಟುವಟಿಕೆಗಳಲ್ಲಿ ತೊಡಗಿ ಸಬಲರಾಗುತ್ತಿದ್ದಾರೆ. ಸರ್ಕಾರದ ಹಲವು ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತಿದೆ. ಜಿಲ್ಲೆಯಲ್ಲಿ ಮಹಿಳಾ ಗುಂಪುಗಳು ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು.
  ಜ್ಯೋಗಿ ಜೇವರ್ಗಿ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷ

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next