Advertisement
ಮಂಡೆಕೋಲು ಒಟ್ಟು 9,997.12 ಎಕ್ರೆ ವಿಸ್ತೀರ್ಣ ಹೊಂದಿರುವ ಸುಳ್ಯ ತಾಲೂಕಿನ ಎರಡನೇ ಅತೀ ದೊಡ್ಡ ಗ್ರಾಮ. ಬಹುತೇಕ ಅರಣ್ಯಭಾಗಗಳಿಂದ ಆವೃತವಾಗಿದೆ. 2011ರ ಜನಗಣತಿಯಂತೆ ಒಟ್ಟು 1,294 ಕುಟುಂಬಗಳನ್ನು ಹೊಂದಿದ್ದು 5,600 ಜನಸಂಖ್ಯಾ ಪ್ರಾಬಲ್ಯವಿದೆ.
ಮಂಡೆಕೋಲಿನ ಐತಿಹಾಸಿಕ ದೇಗುಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಂಡೆಕೋಲು, ಮೂಡೂರು, ಮಾವಜಿ, ಶಿವಾಜಿನಗರ, ಕೊನಾಜೆ, ಮೈತಡ್ಕ, ಕನ್ಯಾನ, ದೇವರಗುಂಡ, ಬೆಂಗತ್ತಮಲೆ, ಮೈಲೆತಿಪಾರೆ, ಪೇರಾಲು, ಪರಪ್ಪೆ, ಮಾರ್ಗ, ಪೆರಾಜೆ, ಕಾಡುಸೊರಂಜ, ಮೀನಗದ್ದೆ, ಅಂಬ್ರೋಟಿ, ಕುಕ್ಕೇಟಿ, ಕಲ್ಲಡ್ಕ, ಪಾತಿಕಲ್ಲು, ಪುತ್ಯ, ಕಣೆಮರಡ್ಕ ಊರುಗಳಿರುವ ಅತೀ ದೊಡ್ಡ ಗ್ರಾಮ. ಪ್ರಾಥಮಿಕ ಶಾಲೆ, ಅಂಗನವಾಡಿ, ಸಹಕಾರಿ ಸಂಘಗಳು, ಅಂಗಡಿ ಮುಂಗಟ್ಟು ಗಳನ್ನು ಹೊಂದಿವೆ. ಗ್ರಾಮದ ಶೇಕಡಾ 90ಕ್ಕೂ ಅಧಿಕ ಮಂದಿ ಅಡಿಕೆ, ತೆಂಗು, ರಬ್ಬರ್ ಸಹಿತ ಉಪಬೆಳೆಗಳಾಧಾರಿತ ಕೃಷಿಯನ್ನೇ ಜೀವಾಳವಾಗಿರಿ ಸಿಕೊಂಡು ಬದುಕು ಸಾಗಿ ಸುತ್ತಿದ್ದಾರೆ. ಕಾಡಾನೆ ಹಾವಳಿ
ಡೆಂಜಿಮಲೆ, ಬೆಂಗತ್‌ಮಲೆ, ಕಲ್ಲಡ್ಕ, ಅಕ್ಕಪ್ಪಾಡಿ, ಕಾಡುಸೊರಂಜ, ಮುಡೂರು ಹೀಗೆ ಹತ್ತಾರು ಭಾಗಗಳಲ್ಲಿ ಮೀಸಲು ಅರಣ್ಯಗಳಿಂದಾವೃತ ಗ್ರಾಮ. ಅರಣ್ಯಭಾಗದಲ್ಲಿ ಶೇ.90 ಭಾಗ ವಿದ್ಯುತ್‌ಮಾರ್ಗ ಹಾದು ಹೋಗಿರುವುದರಿಂದ ಇಲ್ಲಿ ವಿದ್ಯುತ್ ಪೂರೈಕೆ ಅಡಚಣೆ ಬಹುದೊಡ್ಡ ಸಮಸ್ಯೆ ಮತ್ತು ಸವಾಲು ಕೂಡ. ಮಂಡೆಕೋಲು ಗ್ರಾಮಕ್ಕೆ ಒಂದೆಡೆ ಸಮರ್ಪಕ ವಿದ್ಯುತ್ ಕೊರತೆ ಯಾದರೆ ಮತ್ತೂಂದೆಡೆ ಕಾಡಾನೆ ಹಾವಳಿ ಬಹುದೊಡ್ಡ ಸಮಸ್ಯೆ. ಈಗಾಗಲೇ ಬಹುತೇಕ ಕೃಷಿಕರು ಆನೆ ಹಾವಳಿಯಿಂದ ಕೃಷಿಸೊತ್ತು ನಾಶವಾಗಿ ಸಮಸ್ಯೆಗೀಡಾಗುತ್ತಿದ್ದಾರೆ. ಬೇಂಗತ್ತಮಲೆ, ಕನ್ಯಾನ ಅತೀ ಹೆಚ್ಚು ಕಾಡಾನೆ ಹಾವಳಿ ಪೀಡಿತ ಪ್ರದೇಶಗಳು.
Related Articles
ಗ್ರಾಮದ ಒಟ್ಟು 22 ಮನೆಗಳಿಗೆ ವಿದ್ಯುತ್ ಸಂಪರ್ಕ ಇನ್ನೂ ಈಡೇರಿಲ್ಲ. ವಿದ್ಯುತ್ ಸಂಪರ್ಕವಿರುವ ಕೊಳವೆಬಾವಿ, ಬಾವಿ ಸಹಿತ ಒಟ್ಟು 322 ನೀರಿನ ಮೂಲಗಳಿಗೆ ಪಂಪ್‌ಸೆಟ್‌ಗಳಿವೆ. ಗ್ರಾಮಕ್ಕೆ ಕಾವು ಮತ್ತು ಅಜ್ಜಾವರ ಫೀಡರ್ ಒಟ್ಟು 2 ಫೀಡರ್‌ಗಳಿಂದ ವಿದ್ಯುತ್ ಪೂರೈಕೆಯಾಗುತ್ತಿದೆ. ಲೋವೋಲ್ಟೆಜ್ ಸಮಸ್ಯೆ ಹಾಗೂ ತ್ರೀಫೇಸ್‌ವಿದ್ಯುತ್ ಕೊರತೆಯಿದೆ. ಇವು ಹಳೆಯ ಕಾಲದ ಜೋಡಣಾ ಮಾರ್ಗಗಳು. ಸಿಂಗಲ್‌ಫೇಸ್ ಮಾರ್ಗಗಳೇ ಅಧಿಕ. ಬಹುತೇಕ ವಿದ್ಯುತ್ ತಂತಿಗಳು ಅರಣ್ಯ ನಡುವೆ ಹಾದುಹೋಗಿವೆ. ಹೀಗಾಗಿ ಗಾಳಿ ಮಳೆಗೆ ಆಗಾಗ್ಗೆ ಮರಗಳು ಉರುಳಿಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗುತ್ತಿದೆ.
Advertisement
20 ಫೀಡರ್‌ಗಳು ಅಗತ್ಯಮಳೆಗಾಲ ಹೀಗೆ ವಿದ್ಯುತ್ ಕೊರತೆಯಾದರೆ ಬೇಸಗೆ ಕಾಲ ಕೃಷಿಸೊತ್ತುಗಳಿಗೆ ನೀರುಣಿಸಲು ಸಮರ್ಪಕ ವಿದ್ಯುತ್ ಪೂರೈಕೆಯಾಗದಿರುವುದು ಮತ್ತೂಂದು ಸಮಸ್ಯೆ. ಹೀಗಾಗಿ 24 ಗಂಟೆ ವಿದ್ಯುತ್ ಪೂರೈಕೆಯಾಗಬೇಕು. ಹಳೆಯ ಮಾರ್ಗಗಳನ್ನು ಬದಲಿಸುವುದರೊಂದಿಗೆ ಕನಿಷ್ಠ 20 ಹೊಸ ಫೀಡರ್‌ಗಳನ್ನು ಅಳವಡಿಸಬೇಕಿದೆ. ಅಲ್ಲದೇ ಮಂಡೆಕೋಲು ಗ್ರಾಮಕ್ಕೆಂದೇ ಪ್ರತ್ಯೇಕ ಎಕ್ಸ್‌ಪ್ರೆಸ್ ಲೈನ್ ಅಗತ್ಯವಿದೆ ಎಂಬುದು ಇಲ್ಲಿನ ಪûಾತೀತವಾಗಿ ಕೇಳಿಬರುತ್ತಿರುವ ಆಗ್ರಹ. ಪ್ರತ್ಯೇಕ ಎಕ್ಸ್‌ಪ್ರೆಸ್ ಲೈನ್ ಅಗತ್ಯ
ಪ್ರಸ್ತುತ ಕಾವು ಮತ್ತು ಅಜ್ಜಾವರ ಎರಡು ಫೀಡರ್‌ಗಳಿಂದ ಗ್ರಾಮಕ್ಕೆ ವಿದ್ಯುತ್ ಪೂರೈಕೆಯಾಗುತ್ತಿದೆ. ಇದನ್ನು ಹೋಗಲಾಡಿಸಿ ಗ್ರಾಮಕ್ಕೆಂದೇ ಪ್ರತ್ಯೇಕ ಎಕ್ಸ್‌ಪ್ರೆಸ್ ಲೈನ್ ಅಗತ್ಯಬೇಕು. ಹೀಗಾದರೆ ಸಮಸ್ಯೆ ಬಗೆಹರಿದೀತು.
-ಮೋಹಿನಿ ಬಿ., ಗ್ರಾ.ಪಂ. ಅಧ್ಯಕ್ಷೆ ಸಂಪೂರ್ಣ ಸಹಕಾರ
ಬಹುತೇಕ ಕೃಷಿಯಾಧಾರಿತ ಗ್ರಾಮ. ಹೀಗಾಗಿ ಇಲ್ಲಿನ ಗ್ರಾಮಕ್ಕೆ 24 ಗಂಟೆ ವಿದ್ಯುತ್ ಪೂರೈಸಲು ಆಯ್ಕೆಮಾಡಿರುವುದಕ್ಕೆ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ಮಾದರಿ ವಿದ್ಯುತ್ ಗ್ರಾಮವಾಗಿ ಮಾಡಲು ಸಂಪೂರ್ಣ ಸಹಕಾರ ನೀಡಲಾಗುವುದು.
-ಪ್ರಸಾದ್ ಉಗ್ರಾಣಿಮನೆ, ಮಂಡೆಕೋಲು ಪ್ರಾ. ಕೃ.ಪ.ಸ.ಸಂ.ದ ಅಧ್ಯಕ್ಷ 110 ಕೆ.ವಿ. ಪೂರೈಕೆ ಅಗತ್ಯ
ಮಾದರಿ ಗ್ರಾಮವಾಗಿಸಲು ಪ್ರಯತ್ನಿಸಿದರೂ ತಾಲೂಕಿಗೆ 110 ಕೆ.ವಿ. ಪೂರೈಕೆಯಾಗದಿದ್ದರೆ ಸಮಸ್ಯೆ ಬಗೆಹರಿಯಲಾರದು.
-ಬಾಲಚಂದ್ರ, ಗ್ರಾ.ಪಂ. ಸದಸ್ಯ