Advertisement

“ಸಹಾರ್ದ’ರಾಜ್ಯದಲ್ಲೇ ಮಾದರಿ ತರಬೇತಿ ಸಂಸ್ಥೆ

09:33 AM Jul 07, 2017 | |

ಬೀದರ: ಸಹಾರ್ದ ಸಂಸ್ಥೆಯು ಜಿಲ್ಲೆಯಲ್ಲಿ ನಡೆದಿರುವ ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಸಬಲೀಕರಣದ ಮೌನ ಕ್ರಾಂತಿಯನ್ನು ಜಗತ್ತಿಗೆ ಪರಿಚಯಿಸುವ ಮತ್ತು ಹಬ್ಬಿಸುವ ಕೆಲಸವನ್ನು ತರಬೇತಿ ಮೂಲಕ ಸಮರ್ಥವಾಗಿ ಮಾಡುತ್ತಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

Advertisement

ನಗರದಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಸ್ಥಾಪಿಸಲ್ಪಟ್ಟಿರುವ ಸಹಾರ್ದ ಸಂಸ್ಥೆಯ ವಾರ್ಷಿಕ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶದ 371 ಡಿಸಿಸಿ ಬ್ಯಾಂಕ್‌ಗಳ ಪೈಕಿ 256 ಬ್ಯಾಂಕ್‌ಗಳ ಅಧ್ಯಕ್ಷರು, ಆಡಳಿತ ಮಂಡಳಿ ಮತ್ತು ಹಿರಿಯ ಅ ಧಿಕಾರಿಗಳು ಸಂಸ್ಥೆಯಲ್ಲಿ ತರಬೇತಿ ಪಡೆದು ತಮ್ಮ ಜಿಲ್ಲೆಗಳಲ್ಲೂ ಇದೇ ಮಾದರಿ ಅಳವಡಿಸಿಕೊಂಡಿರುವುದು ಬೀದರಗೆ ಹೆಮ್ಮೆಯ ವಿಷಯ. ಬೀದರ ಮಾದರಿಯನ್ನು ತಮ್ಮ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ದೇಶಾದ್ಯಂತ ಉಳಿದ ಬ್ಯಾಂಕ್‌ಗಳಿಗೆ ಮಾರ್ಗದರ್ಶ, ನೆರವು ನೀಡಿದೆ ಎಂದರು.

ಸ್ವಸಹಾಯ ಗುಂಪುಗಳ ತರಬೇತಿಗಳಲ್ಲದೇ ಸಹಾರ್ದ ಸಂಸ್ಥೆಯು ಇತರ ಚಟುವಟಿಕೆಗಳಲ್ಲೂ ಪಾಲ್ಗೊಂಡಿದ್ದು, ಅದರಲ್ಲಿ ಸ್ವಸಹಾಯ ಸಂಘಗಳಲ್ಲಿ ಉದ್ಯಮಶೀಲತೆ ಬೆಳೆಸುವುದು, ಯುವಕರಿಗೆ ಜಂಟಿ ಬಾಧ್ಯತಾ ಗುಂಪುಗಳ ಮೂಲಕ ಆದಾಯ ಉತ್ಪನ್ನ ಚಟುವಟಿಕೆ ನಡೆಸುವಂಥ ತರಬೇತಿ ನೀಡುತ್ತಿರುವುದು, ಶಾಲೆಗಳಲ್ಲಿ ಉತ್ತಮ  ಕಲಿಕಾ ವರ್ಧನೆ ಚಟುವಟಿಕೆ, ರೈತರಿಗೆ ರೈತರ ಕೂಟದನಿರ್ವಹಣೆ ತರಬೇತಿ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದೆ ಎಂದರು. 

ರೈತರ ಕೂಟಗಳನ್ನು ಕಾರ್ಯೋನ್ಮುಖಗೊಳಿಸುವ ನಿಟ್ಟಿನಲ್ಲಿ ಇಲ್ಲಿಯವರೆಗೆ ಸುಮಾರು 302 ಬುನಾದಿ ತರಬೇತಿಗಳನ್ನು 3,878 ರೈತರಿಗೆ ಮತ್ತು 10 ನಾಯಕತ್ವ ತರಬೇತಿಗಳ ಮೂಲಕ 757 ರೈತರಿಗೆ ತರಬೇತಿ ನೀಡಲಾಗಿದೆ. ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರಿಗೆ 6,182 ತರಬೇತಿಗಳನ್ನು ನೀಡಲಾಗಿದೆ. 10 ವರ್ಷಗಳಿಂದ ಸತತವಾಗಿ ಜಿಲ್ಲೆಯಲ್ಲಿ ತರಬೇತಿ ಪಡೆದ ಸ್ವಸಹಾಯ
ಗುಂಪುಗಳು ನಬಾರ್ಡ್‌ ಅತ್ಯುತ್ತಮ ಸ್ವಸಹಾಯ ಸಂಘ ರಾಜ್ಯ ಪ್ರಶಸ್ತಿಗೆ ಪಾತ್ರವಾಗುತ್ತಿರುವುದು ಅಭಿನಂದನಾರ್ಹ ಎಂದರು.

ದೇಶದಲ್ಲೇ ಒಂದು ಡಿಸಿಸಿ ಹೊಂದಿರುವ ಪ್ರಥಮ ತರಬೇತಿ ಸಂಸ್ಥೆಯೆಂದು ಸಹಾರ್ದ ಹೆಸರು ವಾಸಿಯಾಗಿದೆ. ಉಳಿದ ಬ್ಯಾಂಕ್‌ಗಳಿಗೆ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತರಬೇತಿ ಪಡೆದ ಬೆಳಗಾವಿ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಕಲಬುರಗಿ ಜಿಲ್ಲೆಗಳ ಆಯ್ದ ಪಿಕೆಪಿಎಸ್‌ ಅಧ್ಯಕ್ಷರಿಗೆ ಪ್ರಮಾಣ ಪತ್ರ ವಿತರಿಸಿದರು. ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ಅಧಿ ಕಾರಿ ಡಿವಿಎಸ್‌ ಜೋಶಿ, ಲೀಡ್‌ ಬ್ಯಾಂಕ್‌ ಪ್ರಬಂಧಕ ಪಂಡಿತ ಹೊಸಳ್ಳಿ, ಡಿಸಿಸಿ  ಬ್ಯಾಂಕ್‌ ಸಿಇಒ ಮಲ್ಲಿಕಾರ್ಜುನ ಮಹಾಜನ, ನಿರ್ದೇಶಕ ಜಗನ್ನಾಥ ರೆಡ್ಡಿ, ಉಪ ಪ್ರಧಾನ ವ್ಯವಸ್ಥಾಪಕ ಅನೀಲ ಪಾಟೀಲ, ಚನಬಸಯ್ನಾ ಸ್ವಾಮಿ ಉಪಸ್ಥಿತರಿದ್ದರು. ಸಹಾರ್ದ
ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ನಾಗಶೆಟ್ಟಿ ಘೋಡಂಪಳ್ಳಿ ಮತ್ತು ಅನೀಲ ಪರೇಷಣೆ ನಿರೂಪಿಸಿದರು.
ಎಸ್‌.ಜಿ. ಪಾಟೀಲ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next