Advertisement
ಬಹುತೇಕ ದಿನಗಳಲ್ಲಿ ಈ ಭಾಗದಲ್ಲಿ ಸಂಜೆ ವೇಳೆಗೆ ಮಳೆ ಜತೆಗೆ ಗುಡುಗು ಮಿಂಚು ಇರುತ್ತದೆ. ಈ ಸಮಯದಲ್ಲಿ ಟವರ್ ಸಿಗ್ನಲ್ ಅನ್ನು ನಿಷ್ಕ್ರಿಯಗೊಳಿಸುತ್ತಾರೆ. ಸಣ್ಣ ಮೋಡ ಬಂದರು ಸಹಿತ ಕೆಲವೊಮ್ಮೆ ಮುಂಜಾಗ್ರತೆ ನೆಪದಲ್ಲಿ ಸಿಗ್ನಲ್ ಕಡಿತಗೊಳಿಸುತ್ತಾರೆ.
ಈ ವೇಳೆ ಅನಾರೋಗ್ಯ ಇತ್ಯಾದಿ ತುರ್ತು ಸೇವೆಗಳಿಗೆ ಸಂಪರ್ಕ ಸಾಧ್ಯವಾಗುವುದಿಲ್ಲ. ಜನ ತೊಂದರೆಗೆ ಒಳಗಾಗಬೇಕಾಗುತ್ತಾರೆ. ಹೀಗಾಗಿ ಮೊಬೈಲ್ ಸೇವೆ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ನೋವು ಇಲ್ಲಿನ ಜನರನ್ನು ಕಾಡುತ್ತಿದೆ. ದಟ್ಟಾರಣ್ಯಗಳ ಅಂಚಿನಲ್ಲಿರುವ ಈ ಐದು ಗ್ರಾಮಗಳ ಜನತೆ ದಿನ ನಿತ್ಯ ಇಲಾಖೆಯ ಈ ಕ್ರಮಕ್ಕೆ ಹಿಡಿಶಾಪ ಹಾಕುತ್ತಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಕಾಡು ಪ್ರಾಣಿಗಳ ಹಾವಳಿ ಇದೆ. ಕೃಷಿ ಅವಲಂಬಿತರಿರುವ ಈ ಭಾಗಗಳ ಮನೆಗಳಲ್ಲಿ ವಯೋವೃದ್ಧರು ವಾಸವಿದ್ದು, ಅಗತ್ಯ ಸಂದರ್ಭ ಕೈಕೊಡುವ ಈ ಮೊಬೈಲ್ ಸೇವೆಯಲ್ಲಿನ ವ್ಯತ್ಯಯದ ಕುರಿತು ಜನ ಆಕ್ರೋಶಿತರಾಗಿದ್ದು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾರೆ.
Related Articles
ಗುಡುಗು ಮಿಂಚು ಬಂದಾಗ ಅದರ ತೀವ್ರತೆಗೆ ಉಪಕರಣದ ಭಾಗಗಳು ಕೆಟ್ಟುಹೋಗುತ್ತವೆ. ಜಾಗರೂಕತೆಗಾಗಿ ಈ ರೀತಿ ಗುಡುಗು ಮಿಂಚುವಿನ ಹೊತ್ತಲ್ಲಿ ಸಿಗ್ನಲ್ ತೆಗೆಯುತ್ತೇವೆ. ಒಂದು ವೇಳೆ ಮುಂಜಾಗರೂಕತೆ ವಹಿಸದೆ ಇದ್ದಲ್ಲಿ ಮಿಂಚು-ಗುಡುಗಿಗೆ ಸಾಧನಗಳು ಕೆಟ್ಟು ಹೋಗುತ್ತವೆ ಮಿಂಚು ನಿರೋಧಕ ಅಳವಡಿಸಿದ್ದರೂ ತಾಂತ್ರಿಕ ತೊಂದರೆ ಬರುತ್ತದೆ.
– ಸದಾಶಿವ ಹೊಳ್ಳ, ಬಿಎಸ್ಸೆನ್ನೆಲ್ ನ ಮೊಬೈಲ್ ವಿಭಾಗ ಅಧಿಕಾರಿ
Advertisement
ಬೇರೆಡೆ ನಿಯಂತ್ರಣ ಬೇಡಮಿಂಚು ಗುಡುಗು ತೀವ್ರವಿದ್ದಾಗ ಸಿಗ್ನಲ್ ತೆಗೆಯುವುದಕ್ಕೆ ಯಾರೂ ಆಕ್ಷೇಪ ಮಾಡುವುದಿಲ್ಲ. ತಿಳಿಯಾದ ಬಳಿಕ ಹಾಗೂ ಮಿಂಚು – ಗುಡುಗು ಇಲ್ಲದೆ ಇದ್ದಾಗಲೂ ತುಂಬಾ ಹೊತ್ತು ಸಿಗ್ನಲ್ ತೆಗೆಯುವುದಕ್ಕೆ ಜನರ ವಿರೋಧವಿದೆ. ಜತೆಗೆ ಇಲ್ಲಿಯ ಟವರ್‌ಗಳನ್ನು ಬೇರೆಡೆಯ ಕೇಂದ್ರಗಳಲ್ಲಿ ನಿಯಂತ್ರಿಸುವದಕ್ಕೆ ನಮ್ಮ ವಿರೋಧವಿದೆ. ಇನ್ನು ಕೂಡ ಇದೇ ರೀತಿ ವ್ಯತ್ಯಯ ಮುಂದುವರಿದಲ್ಲಿ ಸಂಸ್ಥೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದು ಅನಿವಾರ್ಯ.
– ಗ್ರಾಮಸ್ಥರು — ವಿಶೇಷ ವರದಿ