Advertisement

Bangalore: ಕಟ್ಟಡ ಸಮೇತ ಧರೆಗುರುಳಿದ ಮೊಬೈಲ್‌ ಟವರ್‌; 11 ಮಂದಿ ಪಾರು

10:26 AM Dec 09, 2023 | Team Udayavani |

ಬೆಂಗಳೂರು: ಪಾಯ ತೋಡುವಾಗ ನಿವೇಶನದ ಪಕ್ಕದಲ್ಲಿದ್ದ ಮನೆ ಸಮೇತ ಮೊಬೈಲ್‌ ಟವರ್‌ ಧರೆ ಗುರುಳಿದ್ದು, ಅದೃಷ್ಟವಶಾತ್‌ 11 ಮಂದಿ ಪ್ರಾಣಾಪಾಯ ದಿಂದ ಪಾರಾಗಿರುವ ಘಟನೆ ಲಗ್ಗೆರೆಯ ಪಾರ್ವತಿ ನಗರದಲ್ಲಿ ನಡೆದಿದೆ.

Advertisement

ಲಗ್ಗೆರೆಯಲ್ಲಿ ಹಳೆ ಕಟ್ಟಡ ತೆರವುಗೊಳಿಸಿ, ಹೊಸ ಮನೆ ನಿರ್ಮಿಸಲು ಮಾಲೀಕರು ಜೆಸಿಬಿ ಯಂತ್ರದಲ್ಲಿ ಪಾಯ ತೋಡಿಸುತ್ತಿದ್ದರು. ಈ ವೇಳೆ ನಿವೇಶನದ ಪಕ್ಕದಲ್ಲಿದ್ದ ಮನೆ ಪಾಯ ಕುಸಿದಿತ್ತು. ಪರಿಣಾಮ ಕಟ್ಟಡ ಹಾಗೂ ಅದರ ಮೇಲಿದ್ದ ಕಬ್ಬಿಣದ ಟವರ್‌ ನೆಲಕ್ಕಪ್ಪಳಿಸಿದೆ.

ಟವರ್‌ ಬೀಳುವ ಮುನ್ಸೂಚನೆ ಸಿಗುತ್ತಿದ್ದಂತೆ ಮನೆಯೊಳಗಿದ್ದ 11 ಮಂದಿಯನ್ನು ಹೊರಗೆ ಕರೆತರಲಾಗಿತ್ತು. ಹೀಗಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೊಬೈಲ್‌ ಟವರ್‌ ಬಿದ್ದ ಕಾರಣ 2 ಅಂಗಡಿಗೆ ಹಾನಿಯಾಗಿದೆ.

ದಾಸರಹಳ್ಳಿ ವಲಯ ಎಂಜಿನಿಯರ್‌ಗಳು, ಬಿಬಿಎಂಪಿ ಅಧಿಕಾರಿಗಳು ನಂದಿನಿ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next