Advertisement

ಮೊಬೈಲ್‌ ಎಸೆಯುವ ಸ್ಪರ್ಧೆ!

07:00 AM Nov 08, 2018 | Harsha Rao |

“ಮೂರು ಹೊತ್ತು ಮೊಬೈಲ್‌ನಲ್ಲೇ ಮುಳುಗಿರಿ¤àಯಲ್ಲ, ಒಂದಿನ ಅದನ್ನು ದೂರ ಎಸೀತೀನಿ ನೋಡು..’ ಎಂದು ಅಮ್ಮಂದಿರು ಬೈಯ್ಯುತ್ತಾರೆ. ಅದನ್ನೇ ಸೀರಿಸ್ಸಾಗಿ ಪರಿಗಣಿಸಿರುವ ಫಿನ್‌ಲೆಂಡ್‌ ಮಂದಿ ಅದನ್ನೇ ಸ್ಪರ್ಧೆಯನ್ನಾಗಿ ಮಾಡಿದ್ದಾರೆ. ಅತಿ ದೂರಕ್ಕೆ ಮೊಬೈಲ್‌ ಎಸೆಯುವವರಿಗೆ ಬಹುಮಾನವೂ ಇದೆ…

Advertisement

ಫಿನ್‌ಲಾÂಂಡ್‌ನ‌ ಸಾವೋನ್ಲಿನಾ ನಗರದಲ್ಲಿ 2000ನೇ ಇಸವಿಯಿಂದ ಮೊಬೈಲ್‌ ಎಸೆಯುವ ಸ್ಫರ್ಧೆ ನಡೆಯುತ್ತಿದೆ. ಸ್ಫರ್ಧಿಗಳು ತಮ್ಮ ಸ್ವಂತ ಮೊಬೈಲ್‌ ಅನ್ನು ಎಸೆಯಬೇಕಾಗಿಲ್ಲ. ಬದಲಿಗೆ ಆಯೋಜಕರೇ ಮೊಬೈಲ್‌ಗ‌ಳನ್ನು ನೀಡುತ್ತಾರೆ. ಹಳೆಯದಾದ, ಬಳಸಲು ಯೋಗ್ಯವಾಗಿಲ್ಲದ ಮೊಬೈಲ್‌ಗ‌ಳನ್ನು ಸ್ಪರ್ಧೆಯಲ್ಲಿ ಬಳಸಲಾಗುತ್ತದೆ. 

ಬೇಕಾಬಿಟ್ಟಿ ಎಸೆಯೋ ಹಾಗಿಲ್ಲ
220 ರಿಂದ 400 ಗ್ರಾಂ ತೂಕವುಳ್ಳ ವಿಧದ ಮೊಬೈಲ್‌ಗ‌ಳನ್ನು ಈ ಸಂದರ್ಭದಲ್ಲಿ ಒದಗಿಸಲಾಗುತ್ತಿದ್ದು, ಸ್ಫರ್ಧಾಳುಗಳು ತಮಗೆ ಬೇಕಾದದ್ದನ್ನು ಆಯ್ದುಕೊಂಡು ಸ್ಫರ್ಧೆಯಲ್ಲಿ ಭಾಗವಸಬಹುದು. ನಮ್ಮಲ್ಲಿ ನಡೆಯುವ ಗುಂಡು ಎಸೆತ ಹಾಗೂ ಚಕ್ರ ಎಸೆತದ ಸ್ಫರ್ಧೆಗಳ ಮಾದರಿಯಲ್ಲಿಯೇ ಈ ಸ್ಪರ್ಧೆ ನಡೆಯುತ್ತದೆ. ಒಂದು ನಿರ್ದಿಷ್ಟ ಸ್ಥಳವನ್ನು ಗುರುತು ಮಾಡಿ, ಆ ವೃತ್ತದೊಳಗೆ ಸ್ಪರ್ಧಿ ನಿಂತು, ಕೈಯಲ್ಲಿರುವ ಮೊಬೈಲ್‌ಅನ್ನು ಭುಜದ ಮೇಲಿನಿಂದ ಎಸೆಯಬೇಕು. ಯಾರು ಅತೀ ದೂರಕ್ಕೆ ಎಸೆಯುತ್ತಾರೋ ಅವರು ಗೆದ್ದಂತೆ. 

ವಿಶ್ವಮಟ್ಟದ ಸ್ಪರ್ಧೆಯಿದು
ಕ್ರಿಕೆಟ್‌ನಲ್ಲಿ ವರ್ಲ್ಡ್ ಕಪ್‌ ಇರುವಂತೆ ಈ ಆಟದಲ್ಲೂ ವಿಶ್ವ ಚಾಂಪಿಯನ್‌ಶಿಪ್‌ ನಡೆಯುತ್ತದೆ. ಅಲ್ಲದೆ ಚಿಕ್ಕ ಮಕ್ಕಳಿಗಾಗಿ ಜೂನಿಯರ್‌ ಚಾಂಪಿಯನ್‌ಶಿಪ್‌ ಸ್ಫರ್ಧೆಗಳನ್ನೂ ಆಯೋಜಿಸುತ್ತಾರೆ.

ಜಗತ್ತಿನ ಉತ್ತಮ ಮೊಬೈಲ್‌ ಎಸೆತಗಾರನೆಂಬ ವಿಶ್ವದಾಖಲೆಯು ಬೆಲ್ಜಿಯಂನ ಡ್ರೆçಸ್‌ ಫೆರಿಮನ್ಸ್‌ ಹೆಸರಿನಲ್ಲಿದೆ. ಆತ ಪುರುಷರ ಭಾಗದಲ್ಲಿ 110.42 ಮೀಟರುಗಳಷ್ಟು ದೂರದವರೆಗೆ ಮೊಬೈಲ್‌ ಎಸೆದು ದಾಖಲೆ ನಿರ್ಮಿಸಿದ್ದಾರೆ. ಮಹಿಳಾ ಭಾಗದಲ್ಲಿ 53.52 ಮೀಟರ್‌ ದಾಖಲೆಯು ಜಾನ್‌ ಸಿಂಗ್ಲೆಟಾನ್‌ ಎಂಬಾಕೆಯ ಹೆಸರಿನಲ್ಲಿದೆ.

Advertisement

ಕಂಪೆನಿಗಳೇ ಕೊಡುತ್ತವೆ :

ಯುರೋಪ್‌ನ ಪ್ರತಿಷ್ಠಿತ ಮೊಬೈಲ್‌ ಕಂಪನಿಗಳು ನಾಮುಂದು ತಾಮುಂದು ಎಂದು ಮುಗಿಬಿದ್ದು, ಸ್ಪರ್ಧೆಗೆ ಮೊಬೈಲ್‌ಗ‌ಳನ್ನು ನೀಡುತ್ತವಂತೆ.

– ಪ.ನಾ.ಹಳ್ಳಿ.ಹರೀಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next