Advertisement

ಅಭಿಯಾನಕ್ಕೆ ಮೊಬೈಲ್‌ ತಂತ್ರಜ್ಞಾನ; ಪ್ರಧಾನಿ ನರೇಂದ್ರ ಮೋದಿ ಘೋಷಣೆ

07:13 AM Dec 09, 2020 | mahesh |

ಹೊಸದಿಲ್ಲಿ: ಕೋವಿಡ್ ಸೋಂಕಿನ ಲಸಿಕೆಯ ಲಭ್ಯತೆಗೆ ದಿನಗಣನೆ ಆರಂಭವಾಗಿರುವಂತೆಯೇ ಭಾರತದಲ್ಲಿ “ಸಾಮೂಹಿಕ ಲಸಿಕೆ ಅಭಿಯಾನ’ಕ್ಕೆ ಮೊಬೈಲ್‌ ತಂತ್ರಜ್ಞಾನವನ್ನು ಬಳಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

Advertisement

ಮಂಗಳವಾರ ಇಂಡಿಯಾ ಮೊಬೈಲ್‌ ಸಮಾ ವೇಶದಲ್ಲಿ ಮಾತನಾಡುತ್ತಾ ಈ ವಿಚಾರ ತಿಳಿಸಿದ ಅವರು, “ಜಗತ್ತಿನ ಅತಿದೊಡ್ಡ ಲಸಿಕೆ ನೀಡಿಕೆ ಅಭಿಯಾನವು ಭಾರತ ದಲ್ಲಿ ನಡೆಯಲಿದ್ದು, ಅದಕ್ಕೆ ತಂತ್ರ ಜ್ಞಾನವೇ ಅಡಿಪಾಯ ವಾಗಿರಲಿದೆ. ಲಸಿಕೆಯನ್ನು ಸಾಮೂಹಿಕವಾಗಿ ವಿತರಿ ಸುವ ಪ್ರಕ್ರಿಯೆಗೂ ಮೊಬೈಲ್‌ ತಂತ್ರ ಜ್ಞಾನ ಬಳಕೆಯಾಗಲಿದೆ’ ಎಂದು ಹೇಳಿದ್ದಾರೆ. ಈಗಾಗಲೇ ಫೈಜರ್‌, ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಮತ್ತು ಭಾರತ್‌ ಬಯೋಟೆಕ್‌ ಸಂಸ್ಥೆಗಳು ತಮ್ಮ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿವೆ.

“ಮೊಬೈಲ್‌ ತಂತ್ರಜ್ಞಾನವು ಕೋಟ್ಯಂತರ ಮಂದಿಗೆ ಅನುಕೂಲ ಕಲ್ಪಿಸಿದೆ. ಟೋಲ್‌ ಬೂತ್‌ಗಳಲ್ಲಿನ ಯುವ ಸಂಪರ್ಕರಹಿತ ಇಂಟರ್‌ಫೇಸ್‌ ಹಾಗೂ ಕೋಟಿಗಟ್ಟಲೆ ನಗದು ರಹಿತ ವಹಿವಾಟು ಗಳಿಗೂ ಮೊಬೈಲ್‌ ನೆರವಾ ಗಿದೆ. ಕೊರೊನಾ ಸಾಂಕ್ರಾಮಿಕದ ಸಮಯ ದಲ್ಲೂ ನಾವು ಬಡವರು ಮತ್ತು ಕಷ್ಟದಲ್ಲಿರುವರಿಗೆ ನೆರವಾಗಿದ್ದು ಇದೇ ತಂತ್ರ ಜ್ಞಾನದ ಸಹಾಯದಿಂದ. ಈಗ ಇದೇ ಮೊಬೈಲ್‌ ತಂತ್ರಜ್ಞಾನದ ಮೂಲಕ ನಾವು ಜಗತ್ತಿನ ಅತಿ ದೊಡ್ಡ ಕೋವಿಡ್‌-19 ಲಸಿಕೆ ಅಭಿಯಾನಕ್ಕೂ ನಾಂದಿ ಹಾಡಲಿದ್ದೇವೆ’ ಎಂದು ಮೋದಿ ಹೇಳಿ ದ್ದಾರೆ. ಆದರೆ, ಈ ಕುರಿತು ಹೆಚ್ಚಿನ ವಿವರವನ್ನು ಅವರು ನೀಡಿಲ್ಲ.

ಇದೇ ವೇಳೆ, ಅತಿ ಹೆಚ್ಚಿನ ವೇಗದಲ್ಲಿ ದತ್ತಾಂಶವನ್ನು ಒದಗಿಸಬಲ್ಲಂಥ 5ನೇ ತಲೆಮಾರಿನ(5ಜಿ) ಮೊಬೈಲ್‌ ನೆಟ್‌ವರ್ಕ್‌ಗಳು ಆದಷ್ಟು ಬೇಗ ಜಾರಿ ಯಾಗಲಿ ಎಂದೂ ಅವರು ಆಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next