Advertisement

ಮಂಗಳೂರು: ಮೊಬೈಲ್ ಶೋರೂಂಗೆ ಕನ್ನ: 70 ಲಕ್ಷ ಮೌಲ್ಯದ ಮೊಬೈಲ್ಸ್ ದೋಚಿದ ಖದೀಮರು

03:01 PM Jul 05, 2021 | Team Udayavani |

ಮಂಗಳೂರು: ವೀಕೆಂಡ್ ಕರ್ಫ್ಯೂ ವೇಳೆ ಮೊಬೈಲ್ ಅಂಗಡಿ ಕಳ್ಳತನ ನಡೆದಿದ್ದು ಇಂದು (ಜುಲೈ 5) ಬೆಳಕಿಗೆ ಬಂದಿದೆ.

Advertisement

ನಗರದ ಬಲ್ಮಠದಲ್ಲಿರುವ ಮೊಬೈಲ್ ಶೋರೂಂವೊಂದಕ್ಕೆ ಕರಾಮತ್ತು ತೋರಿರುವ ಕಳ್ಳರು ಐಪೋನ್ ಸೇರಿದಂತೆ ಸುಮಾರು 70 ಲಕ್ಷ ರೂ.ಮೌಲ್ಯದ ಮೊಬೈಲ್ ಗಳನ್ನು ಎಗರಿಸಿದ್ದಾರೆ.

ಕಳ್ಳತನ ನಡೆದಿರುವುದು ಇಂದು ಬೆಳಗ್ಗೆ ಶೋರೂಂ ಸಿಬ್ಬಂದಿ ಗಮನಕ್ಕೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಕೂಡ ಈ ಶೋರೂಂನಲ್ಲಿ ಕಳ್ಳತನ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next