Advertisement
ಮೊಬೈಲ್‌ಗಳಲ್ಲಿ ಇತರ ಜಾಲತಾಣಗಳಲ್ಲಿ ಸಿಗುವ ಉತ್ತಮ ಛಾಯಾಚಿತ್ರವನ್ನು ನೋಡುವ ಆಸಕ್ತಿ ಮೊದಲಿನಿಂದಲೂ ಇತ್ತು. ನನ್ನ ಕಾಲೇಜಿನ ಕೆಲವು ಗೆಳೆಯರಿಗೂ ಈ ಕ್ಷೇತ್ರದ ಬಗೆಗಿನ ಜ್ಞಾನ, ಆಸಕ್ತಿ ನನ್ನನ್ನು ಈ ಆಸಕ್ತಿಯೆಡೆಗೆ ಸೆಳೆದಿರಬಹುದೇನೋ ಗೊತ್ತಿಲ್ಲ. ಯಾವುದೇ ಹೊಸ ಸ್ಥಳಗಳಿಗೆ ಭೇಟಿ ನೀಡುವಾಗಲೂ ಮೊಬೈಲ್ ಒಂದು ಕೈಯಲ್ಲಿರುವುದು ಮಾಮೂಲಾಗಿ ಹೋಗಿದ್ದು ಇದು ನನ್ನ ನಿತ್ಯ ದಿನಚರಿಯಾಗಿ ಬಿಟ್ಟಿದೆ. ಬೇರೆ ಬೇರೆ ಸ್ಥಳಗಳಿಗೆ ಹೋದಾಗ ಆ ನೆನಪು ಅಚ್ಚಳಿಯದ ಹಾಗೆ ಉಳಿಯಲಿ ಎಂಬ ಉದ್ದೇಶದಿಂದ ಕಟ್ಟಡಗಳು, ದೇವಾಲಯಗಳ ಚಿತ್ರ ಸೆರೆಹಿಡಿಯಲು ಬಯಸುತ್ತೇನೆ. ಆದರೆ, ಪ್ರಕೃತಿಯನ್ನು ನೈಸರ್ಗಿಕವಾಗಿ, ನೈಜವಾಗಿ ಸೆರೆ ಹಿಡಿಯಲು ಬಹಳ ಆಸೆ. ಮಳೆಗಾಲದಲ್ಲಂತೂ ಈ ನೀಲ ಆಗಸ ಚಿತ್ರಿಸುವ ಬಣ್ಣ ಬಣ್ಣದ ಚಿತ್ತಾರದ ಮೋಡಗಳು, ಕ್ಷಣಕ್ಕೊಂದು ಆಕಾರವನ್ನು ಹೋಲುವುದನ್ನು ಆನಂದಿಸುತ್ತ ಫೋಟೊ ತೆಗೆಯುವುದೇ ಒಂದು ರೂಢಿಯಾಗಿ ಬಿಟ್ಟಿದೆ. ಮಳೆ ಹನಿ ತಂದು ಕೊಡುವ ಕನಸಿನ ಕಡಲಂತೂ ಇನ್ನೂ ಸೋಜಿಗ. ಹಾರಾಡುವ ರಂಗಿನ ಚಿಟ್ಟೆ, ಪಕ್ಷಿ, ಒಂಟಿಮರ, ಕಾಡು, ವಿವಿಧ ಬಗೆಯ ಹೂವುಗಳೆಲ್ಲವೂ ನನ್ನ ಮೊಬೈಲ್ ಕೆಮರಾಕ್ಕೆ ಇದೀಗ ಆಹಾರವಾಗಲು ಆರಂಭವಾಗಿದೆ.ಇದರಿಂದ ಅದೇನೋ ಸಮಾಧಾನ, ಸೋಜಿಗ ಉಂಟಾಗುತ್ತದೆ. “ಗ್ರಹಚಾರ ಕೆಟ್ಟರೆ ಹಗ್ಗವೂ ಹಾವಾಗಿ ಕಾಣುತ್ತದಂತೆ’ ಎನ್ನುವಂತೆ ಈ ಕ್ಷೇತ್ರದಲ್ಲಿ ಮೂಡುತ್ತಿರುವ ಆಸಕ್ತಿಯಿಂದ ಪರಿಸರದಲ್ಲಿ ಕಾಣುವಂಥ ಎಲ್ಲ ವಸ್ತುಗಳು ಕ್ಲಿಕ್ಕಿಸಲು, ಸೆರೆಹಿಡಿಯಲು ಸೂಕ್ತ ವಾದವು ಎಂದು ಅನಿಸಲು ಆರಂಭವಾಯಿತು. ಕವಿಯಾದವರಿಗೆ ಮುಳ್ಳು -ಪೊದೆಗಳಲ್ಲೂ ಜೀವಂತಿಕೆಯನ್ನು ಕಂಡು ಕಾವ್ಯಗಳನ್ನು ಸೃಷ್ಟಿಸುವಷ್ಟು ವಿಭಿನ್ನತೆಯಲ್ಲಿ ಜೀವಂತಿಕೆಯನ್ನು ಕಾಣುತ್ತಾರೆ. ಇದು ಅವರ ನೋಟದ ದೃಷ್ಟಿ ಮತ್ತು ಆಸಕ್ತಿಯ ವಿಚಾರವಾದ ಕಾರಣ ಅದರಲ್ಲೂ ನೈಜತೆಯನ್ನು ಕಾಣುವಂತೆ ನನಗೂ ನೋಡುವ ನೋಟದಲ್ಲೆಲ್ಲಾ ಒಂದೊಂದು ಚಿತ್ತಾರದ ದೃಶ್ಯ ಭಾಸವಾಗುತ್ತದೆ.
Related Articles
ತೃತೀಯ ಬಿ. ಎ.
ವಿವೇಕಾನಂದ ಪದವಿ ಕಾಲೇಜು, ಪುತ್ತೂರು.
Advertisement