Advertisement
ಇದರಿಂದಾಗಿ 10 ಸಾವಿರ ರೂ. ಮೌಲ್ಯದ ಮೊಬೈಲ್ ದರ 600 ರೂ.ಗಳಷ್ಟು ಏರಲಿದೆ. ಈ ಹೊಸ ದರ ಎ.1ರಿಂದ ಜಾರಿಗೆ ಬರಲಿದೆ ಎಂದು ತನ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ, ಸಭೆಯಲ್ಲಿ ಕೈಗೊಳ್ಳಲಾದ ಇನ್ನಿತರ ಮಹತ್ವದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು. ಅದರಂತೆ ವಿಮಾನಗಳ ಮೈಂಟೇನೆನ್ಸ್ ರಿಪೇರ್ ಓವರಾಲ್ (ಒಎಂಆರ್) ಸೇವೆಗಳ ಮೇಲಿನ ಶುಲ್ಕವನ್ನು ಶೇ. 12ರಿಂದ 5ಕ್ಕೆ ಇಳಿಸಲಾಗಿದೆ. ಬೆಂಕಿ ಕಡ್ಡಿಗಳ ಮೇಲಿನ ಜಿಎಸ್‌ಟಿಯನ್ನು ಶೇ. 12ಕ್ಕೆ ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು. ಉದ್ಯಮಿಗಳಿಗೆ ಸಿಹಿ,ಕಹಿ
2018, 2019ರ ವಿತ್ತೀಯ ವರ್ಷ ಗಳಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ತಡ ಮಾಡಿರುವ ಕಾರ್ಪೊರೆಟ್ ಕಂಪೆನಿಗಳಿಗೆ ವಿಧಿಸಬಹುದಾದ ವಿಳಂಬ ಶುಲ್ಕದಿಂದ ವಿನಾಯಿತಿ ನೀಡುವ ನಿರ್ಧಾರವನ್ನು ಜಿಎಸ್‌ಟಿ ಕೌನ್ಸಿಲ್ ಕೈಗೊಂಡಿದೆ. ವಾರ್ಷಿಕವಾಗಿ 2 ಸಾವಿರ ಕೋ.ರೂ. ಒಳಗಿನ ವಹಿವಾಟು ನಡೆಸುತ್ತಿರುವ ಕಂಪೆನಿಗಳಿಗೆ ಈ ವಿನಾಯಿತಿ ಅನ್ವಯಿಸಲಿದೆ.
Related Articles
Advertisement