Advertisement

2.24 ಕೋಟಿ ರೂ.ಗೆ ಹರಾಜಾದ ಲಕ್ಕಿ ನಂಬರ್‌!

03:21 PM Aug 17, 2020 | keerthan |

ಬೀಜಿಂಗ್‌: ಇದನ್ನು ದೂರವಾಣಿ ಸಂಖ್ಯೆಯ ಅದೃಷ್ಟ ಎನ್ನಬೇಕೋ ಅಥವಾ ಅದನ್ನು ಪಡೆದವನ ಅದೃಷ್ಟ ಎನ್ನಬೇಕೋ ಗೊತ್ತಿಲ್ಲ! ಒಟ್ಟಿನಲ್ಲಿ ಮೊಬೈಲ್‌ ಫೋನ್‌ ನಂಬರ್‌ವೊಂದು ಬರೋಬ್ಬರಿ 2.24 ಕೋಟಿ ರೂ.ಗೆ ಮಾರಾಟವಾಗಿದೆ.

Advertisement

ಚೀನದಲ್ಲಿ ಅತ್ಯಂತ ಅದೃಷ್ಟದ ಸಂಖ್ಯೆ ಎಂಬ ಕಾರಣಕ್ಕೆ ನೂರಾರು ಜನರು ಇದೇ ನಂಬರ್‌ಗಾಗಿ ಆನ್‌ಲೈನ್‌ನಲ್ಲಿ ಪೈಪೋಟಿಗೆ ಬಿದ್ದಿದ್ದರು. ಕೊನೆಯ 5 ಸಂಖ್ಯೆಗಳೂ “8′ ಆಗಿರುವ ಮೊಬೈಲ್‌ ನಂಬರ್‌ ಇದು.

ಮ್ಯಾಂಡರಿನ್‌ನಲ್ಲಿ 8 ಎಂಬುದು ಸಮೃದ್ಧಿಯ ಸಂಕೇತವಾಗಿರುವ ಕಾರಣ, ಈ ಸಂಖ್ಯೆ ಹೊಂದಿದ್ದರೆ ಅದೃಷ್ಟ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ಈ ಮೊಬೈಲ್‌ ಫೋನ್‌ ನಂಬರ್‌ ಬರೋಬ್ಬರಿ 2.24 ಕೋಟಿ ರೂ.ಗೆ ಮಾರಾಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next