Advertisement
ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಮೂಲಕ ಬಳಕೆದಾರ ತಮ್ಮ ಮೊಬೈಲ್ ಸಂಖ್ಯೆ ಬದಲಾಯಿ ಸದೆ ಒಂದು ಆಪರೇಟರ್‌ನಿಂದ ಮತ್ತೂಂದು ಆಪರೇಟರ್‌ಗೆ ತಮ್ಮ ಸಂಪರ್ಕವನ್ನು ಪೋರ್ಟ್ ಮಾಡಿ ಕೊಳ್ಳಬಹುದು. ಉದಾ: ಏರ್‌ಟೆಲ್ ಟು ಜಿಯೋ, ಜಿಯೋ ಟು ವೊಡಾಫೋನ್. ಈ ವೇಳೆ ಕಂಪೆನಿ ಬದಲಿಸಿದರೂ ನಿಮ್ಮ ಫೋನ್‌ನಂಬರ್ ಬದಲಾಗುವುದಿಲ್ಲ.
ಗ್ರಾಹಕ ಸಲ್ಲಿಸುವ ಪೋರ್ಟೆಬಿ ಲಿಟಿ ಅರ್ಜಿ ಪೂರ್ಣಗೊಳಿಸಲು ಟ್ರಾಯ್ ಸಂಸ್ಥೆ 3 ಕೆಲಸದ ದಿನಗಳ ವರೆಗೆ ಸಮಯ ವಾಕಶ ನೀಡಿದೆ. ಇತರ ವಲಯಗಳಿಗೆ 1ವಾರ
ಒಂದು ವಲಯದಿಂದ ಮತ್ತೂಂದು ವಲಯಕ್ಕೆ ಪೋರ್ಟಿಂಗ್ ಸೇವೆ ಪೂರ್ಣಗೊಳಿ ಸಲು 1 ವಾರ ಕಾಲಮಿತಿ ಯನ್ನು ಟೆಲಿಕಾಂ ಸೆಕ್ಟರ್ ಮೊಬೈಲ್ ಸಂಸ್ಥೆಗಳಿಗೆ ನೀಡಿದೆ.
Related Articles
ನಿಮ್ಮ ಮೊಬೈಲ್ ಸಂಖ್ಯೆಯಿಂದ ಕORಖ ಎಂದು ಬರೆದು 1900 ನಂಬರಿಗೆ ಎಸ್‌ಎಂಎಸ್ ಮಾಡ ಬೇಕು. ಆ ಬಳಿಕ ವಿಶಿಷ್ಟ ಪೋರ್ಟ್ ಕೋಡ್ ಲಭಿಸುತ್ತದೆ. ಇದನ್ನು ನೀವು ಸಂಪರ್ಕ ಬಯಸುವ ಟೆಲಿಕಾಂ ಕಂಪೆನಿಯ ಸರ್ವಿಸ್ ಅಲ್ಲಿ ಅರ್ಜಿ ಮತ್ತು ಕೆವೈಸಿ ಫಾರಂ ಅನ್ನು ತುಂಬಿ ಹೊಸ ಸಂಪರ್ಕ ಪಡೆಯಬಹುದು.
Advertisement
ರದ್ದು ಹೇಗೆಪೋರ್ಟೆಬಿಲಿಟಿ ರದ್ದುಪಡಿ ಸಬೇಕಿದ್ದರೆ CANCEL ಎಂದು ಬರೆದು ಎಸ್‌ಎಂಎಸ್ ಅನ್ನು 1900 ಸಂಖ್ಯೆಗೆ ಕಳುಹಿಸ ಬೇಕು. ರಿಕ್ವೆಸ್ಟ್ ಕಳುಹಿಸಿ 24 ತಾಸು ಒಳಗಡೆ ಮಾತ್ರ ರದ್ದಿಗೆ ಮನವಿ ಮಾಡಬಹುದು. ಡಿ.16 ರಿಂದ ಜಾರಿ
ಈ ಹೊಸ ನಿಯಮ ಡಿ.16 ರಿಂದ ಜಾರಿಗೆ ಬರಲಿದ್ದು, ಟ್ರಾಯ್ ಪೋರ್ಟೆಬಿಲಿಟಿ (ಎಂಎನ್‌ಪಿ) ಪ್ರಕ್ರಿಯೆ ನಿಯಮ ವನ್ನು ಪರಿಷ್ಕರಿಸಿದೆ. ಚಂದಾದಾರರು ತಮ್ಮ ಮೊಬೈಲ್ ಸಂಖ್ಯೆ ಯನ್ನು ಪೋರ್ಟ್ ಮಾಡಲು ಅರ್ಹರಾ ದಾಗ ಮಾತ್ರ ಯುಪಿಸಿಯನ್ನು ನೀಡಲಾ ಗುತ್ತದೆ ಎಂದು ಟ್ರಾಯ್ ಹೇಳಿದೆ. ನೂತನ ನಿಯಮ ಏನು ?
· ಪೋರ್ಟೆಬಿಲಿಟಿ ಮಾಡಬೇಕೆಂದು ಇಚ್ಛಿಸುವ ಗ್ರಾಹಕರು ಪೋÓr…ಪೇಯ್ಡ ಮೊಬೈಲ್ ಸಂಪರ್ಕದ ಬಿಲ್ ಪಾವತಿಯನ್ನು ಪೋರ್ಟ್ ಮಾಡುವ ಮೊದಲು ಪಾವತಿ ಮಾಡಿರಬೇಕು.
· ಪೋರ್ಟೆಬಿಲಿಟಿಗೊಳಿಸಿದ ನೆಟ್‌ವರ್ಕ್ ಅನ್ನು ಕನಿಷ್ಠ 90 ದಿನಗಳು ಸಕ್ರಿಯವಾಗಿಡಬೇಕು. ಅನಂತರ ಬೇಕಾದರೆ ಪುನ: ಮತ್ತೂಂದು ನೆಟ್‌ವರ್ಕ್‌ಗೆ ಪೋರ್ಟ್ ಮಾಡಬಹುದು.
· ಪೋರ್ಟ್ ಮಾಡುವ ಮುನ್ನ ಚಂದಾರರು ಯಾವ ಸಂಸ್ಥೆಯ ಸೇವೆಯಿಂದ ಹೊರಬರಲು ಬಯಸುತ್ತಾರೋ, ಆ ಸಂಸ್ಥೆಯ ಎಕ್ಸಿಟ್ ನಿಯಮಗಳನ್ನು ಉಲ್ಲಂ ಸಬಾರದು.
· ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡುವುದನ್ನು ಯಾವುದೇ ನ್ಯಾಯಾಲಯವು ನಿಷೇಧಿಸುವುದಿಲ್ಲ ಮತ್ತು ಪೋರ್ಟ್ ಮಾಡುವುದು ಕಾನೂನಿನ ಉಲ್ಲಂಘನೆಯಲ್ಲ.
· ನೀವು ಈಗಾಗಲೇ ಪೋರ್ಟೆ ಬಿಲಿಟಿಗಾಗಿ ಅರ್ಜಿಯನ್ನು ನೀಡಿದ್ದರೆ ಮತ್ತೂಮ್ಮೆ ನಿಮ್ಮ ಮೊಬೈಲ್ ಸಂಖ್ಯೆ ಪೋರ್ಟೆಬಿಲಿಟಿಗೆ ಅರ್ಹವಾಗುವುದಿಲ್ಲ.
· ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಪ್ರತಿ ಪೋರ್ಟಿಂ ಗ್ ಸೇವೆಗೆ 6.46 ರೂ. ಮೊತ್ತವನ್ನು ವಹಿವಾಟು ಶುಲ್ಕವಾಗಿ ವಿಧಿಸುತ್ತದೆ.