Advertisement

69 ದಿನಗಳ ನಂತರ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ನೆಟ್ ವರ್ಕ್ ಆರಂಭ

10:28 AM Oct 15, 2019 | Team Udayavani |

ಶ್ರೀನಗರ: ಕಣಿವೆ ರಾಜ್ಯದ ವಿಶೇಷಾಧಿಕಾರ ರದ್ದತಿಯ ಸಮಯದಲ್ಲಿ ಸ್ಥಗಿತಗೊಳಿಸಲಾಗಿದ್ದ ಮೊಬೈಲ್ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ. ಸೋಮವಾರ ಮಧ್ಯಾಹ್ನ 12 ಗಂಟೆಯ ನಂತರ ಪೋಸ್ಟ್ ಪೈಡ್ ನೆಟ್ ವರ್ಕ್ ಗಳು ಜಮ್ಮು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸಲಿದೆ.

Advertisement

ಇಂದು ಮಧ್ಯಾಹ್ನದಿಂದ ಸುಮಾರು 40 ಲಕ್ಷ ಪೋಸ್ಟ್ ಪೈಯ್ಡ್ ಮೊಬೈಲ್ ಗಳು ರಿಂಗಣಿಸಲಿದೆ. ಆದರೆ ಸಮಾರು 20 ಲಕ್ಷ ಪ್ರಿಪೈಯ್ಡ್ ಮೊಬೈಲ್ ನೆಟ್ ವರ್ಕ್ ಗಳು ಇನ್ನಷ್ಟು ಕಾಯಬೇಕಾಗಿದೆ.

ಸುಳ್ಳು ಸುದ್ದಿ ಮತ್ತು ದ್ವೇಷದ ಸಂದೇಶಗಳನ್ನು ಹರಡುವವರನ್ನು ಪತ್ತೆ ಹಚ್ಚಲಾಗುವುದು. ಶಾಂತಿ ಕದಡುವ ಯಾವುದೇ ಅವಕಾಶ ನೀಡಲಾಗುವುದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಮ್ಮು ಕಾಶ್ಮೀರದಲ್ಲಿ ಆಗಸ್ಟ್ 5ರಂದು ಆರ್ಟಿಕಲ್ 370ನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಭದ್ರತೆಯ ಕಾರಣಕ್ಕಾಗಿ ಎಲ್ಲಾ ಮೊಬೈಲ್ ಸೇವೆಗಳನ್ನು ಸ್ಥಗಿತ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next