Advertisement

UV Fusion: ಮೊಬೈಲ್‌ ಎಂಬ ಮಾಯಾವಿ

02:48 PM Dec 16, 2023 | Team Udayavani |

ಮೊಬೈಲ್‌ ಇದು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಆಗ ತಾನೆ ಮಾತಾಡಲು ಕಲಿತ ಮಗುವಿನಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರಿಗೂ  ಬೇಕು. ಮೊಬೈಲ್‌ನಿಂದ ಬದುಕು, ಸಂಬಂಧಗಳು ಚೆನ್ನಾಗಿವೆ, ಇಂದ ತುಂಬಾ ನೆಮ್ಮದಿಯಾಗಿದ್ದೇನೆ, ಸಂತೋಷವಾಗಿದ್ದೀನಿ ಎಂದು ಹೇಳುವವರು ಕಡಿಮೆ. ಮೊಬೈಲಿನಲ್ಲೇ ವೃತ್ತಿ ಮಾಡುತ್ತಾ ಜೀವನ ನಡೆಸುವವರು ಇದ್ದರೂ ಬಹಳ ಕಡಿಮೆಯಿದ್ದಾರೆ.

Advertisement

ಆದರೆ ಅವರೆಲ್ಲ  ನೆಮ್ಮದಿಯಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ಜೀವನವಿಡೀ ಮೊಬೈಲ್‌ನೊಂದಿಗೆ ಕಳೆಯುವ ಸಮಯವನ್ನು ಸ್ನೇಹಿತರು, ಮನೆಯವರು, ಸಂಬಂಧಿಕರೊಂದಿಗೆ ಕಳೆಯುವುದಿಲ್ಲ. ಅವರೆಲ್ಲರರೊಂದಿಗೆ ಸಂಪರ್ಕದಲ್ಲಿರುತ್ತೇವೆ. ಆದರೆ ಅದು ನೇರ ಸಂಪರ್ಕ ಆಗಿರುವುದಿಲ್ಲ, ಬದಲಾಗಿ ಮೊಬೈಲ್‌ ಮೂಲಕವೇ ಸಂಪರ್ಕದಲ್ಲಿರಿರುತ್ತೇವೆ.

ಮೊಬೈಲ್‌ ಬಳಕೆ ಇಂದ ನೆಮ್ಮದಿ ಇರುವುದಿಲ್ಲ ಎಂದು ಖಂಡಿತವಾಗಿಯೂ ಹೇಳಲು ಸಾಧ್ಯವಿಲ್ಲ. ನಾವು ಬಳಸುವ ರೀತಿಯಲ್ಲಿ ನೆಮ್ಮದಿ, ಖುಷಿ ಇದೆ. ಇಂದು ಜೀವನದ ಪ್ರಮುಖ ಭಾಗವಾಗಿಯೇ ನಾವು  ಬಳಸುತ್ತಿದ್ದೇವೆ. ಯಾಕೆಂದರೆ ಈಗ ಮೊಬೈಲ್‌ ಕೇವಲ  ಫೋನ್‌ ಮಾಡಲು, ಮೆಸೇಜ್‌  ಮಾಡಲು ಮಾತ್ರವಲ್ಲದೆ ಹಲವಾರು ವಿಷಯಗಳಿಗೆ ಬಳಸುತ್ತೇವೆ.

ಇದು ಒಂದು ರೀತಿಯ ಆಕರ್ಷಣೆಯೂ ಆಗಿದೆ. ಮೊಬೈಲ್‌ ಬಂದಾಗ ಇಡಿ ಪ್ರಪಂಚವೇ ನಮ್ಮ ಅಂಗೈಯಲ್ಲಿ ಇರುವಂತೆ ಖುಷಿ ಪಡುತ್ತೇವೆ, ದಿನ ಕಳೆದಂತೆ ಮೊಬೈಲ್‌ ಅಂಗೈಯಲ್ಲಿ ನಾವಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಏಷ್ಟು ಜನ ಇರುತ್ತಾರೋ ಅವರೆಲ್ಲರ ಬಳಿಯಲ್ಲಿಯು ಒಂದೊಂದು ಮೊಬೈಲ್‌ ಇರುತ್ತದೆ.

ಪ್ರತಿಯೊಬ್ಬರ ಬಳಿಯೂ ಮೊಬೈಲ್‌ ಇದ್ದಾಗ ಒಬ್ಬೊಬ್ಬರದ್ದು ಒಂದೊಂದು ಪ್ರಪಂಚವಾಗಿಬಿಡುತ್ತದೆ. ಮಕ್ಕಳಿಗೂ ಇದೆ ಅನ್ವಯವಾಗುತ್ತದೆ. ಮೊದಲೆಲ್ಲ ಚಿಕ್ಕ ಮಕ್ಕಳನ್ನು ಸಮಾಧಾನ ಮಾಡಲು ಎಷ್ಟೆಲ್ಲ ಕಷ್ಟ ಪಡಬೇಕಿತ್ತು, ಆದರೆ ಈಗ ಅವರ ಊಟ, ಪಾಠ, ಸಮಾಧಾನ ಎಲ್ಲವೂ ಮೊಬೈಲ್‌ ಒಂದರಿಂದ ಸಾಧ್ಯವಾಗಿದೆ.

Advertisement

ಬದಲಾದ ಜಗತ್ತಿಗೆ ನಾವು ಹೊಂದಿಕೊಂಡು ಹೋಗಬೇಕು, ಆದರೆ ಜಗತ್ತಿನ ಅರಿವೇ ಇರದ ಪುಟ್ಟ ಮಕ್ಕಳಿಗೆ ಮೊಬೈಲ್‌ ಬಳಕೆ ಕಲಿಸುವಷ್ಟು ಆಧುನಿಕರಾಗಬರದು. ಸಣ್ಣ ಪ್ರಾಯದಲ್ಲಿ ಮೊಬೈಲ್‌ ಉಪಯೋಗಿಸುವುದರಿಂದ ಶರೀರಕ್ಕೆ ನಾನಾ ತೊಂದರೆಗಳು ಉಂಟಾಗುತ್ತವೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡುವ ಅಗತ್ಯವಿದೆ, ಆ ದೃಷ್ಟಿಯಿಂದ ಮೊಬೈಲ್‌ ಅತ್ಯಂತ ಪ್ರಯೋಜನಕಾರಿ. ಅಳವಡಿಸಲಾದ ಕೆಮರಾ ನೋಡಿ  ಖರೀದಿಸುತ್ತಾರೆ.  ಕಲರ್‌, ವಿನ್ಯಾಸಗಳನ್ನು ನೋಡಿ ಹೆಚ್ಚೆಚ್ಚು ಹಣ ಸುರಿದು ಖರೀದಿಸುತ್ತಾರೆ. ಮೊಬೈಲ್‌ ಬಳಕೆ ನಮ್ಮ ಜೀವನಕ್ಕೆ ಅಷ್ಟೊಂದು ಅವಶ್ಯಕತೆ ಇದೆಯೇ?

ಒಮ್ಮೆಯಾದರೂ ಯಾರಾದರೂ ಯೋಚಿಸಿದ್ದೀರಾ? ಅಗತ್ಯಕ್ಕೂ ಮೀರಿ ಮೊಬೈಲ್‌ ಬಳಕೆ ಇಂದ ಸಮಯ ಹಾಳಾಗುತ್ತದೆ, ಹಲವಾರು ತೊಂದರೆಗಳಿವೆಯೇ ಹೊರತು ಮತ್ಯಾವ ಘನಕಾರ್ಯವು ಸಾಧ್ಯವಿಲ್ಲ. ನಿಮ್ಮ ಜೀವನಕ್ಕೆ ಮೊಬೈಲ್‌ ಬಳಕೆ ಎಷ್ಟು ಅವಶಕವಿದೆ ಎಂದು ಒಮ್ಮೆಯಾದರೂ ಯೋಚಿಸಿ ಅದನ್ನು ಬಳಸಿ. ಅನವಶ್ಯ ಹಣ ಅದಕ್ಕೆ ಸುರಿದು ನಮ್ಮ ಬುದ್ಧಿವಂತಿಕೆಯನ್ನೆಲ್ಲ ಮೊಬೈಲ್‌ ಬಳಸುವುದರಲ್ಲೇ ಕಳೆಯಬಾರದು. ಸಮಯ ಎನ್ನುವುದು ಬಹಳ ದುಬಾರಿ ಒಮ್ಮೆ ಕಳೆದುಕೊಂಡರೆ ಮತ್ತೆ ಸಂಪಾದಿಸಲು ಸಾಧ್ಯವಿಲ್ಲ.

-ಅಪೂರ್ವ ನಾಯ್ಕ

ಧರ್ಮಸ್ಥಳ

Advertisement

Udayavani is now on Telegram. Click here to join our channel and stay updated with the latest news.

Next