Advertisement

ಎನ್‌ಎಂಪಿಟಿಗೆ ‘ಮೊಬೈಲ್ ಎಕ್ಸ್‌ರೇ ಕಂಟೈನರ್‌ ಸ್ಕ್ಯಾನರ್‌’

03:06 AM May 29, 2019 | Team Udayavani |

ಮಂಗಳೂರು: ಭದ್ರತಾ ದೃಷ್ಟಿಯಿಂದ ಮಂಗಳೂರಿನ ಪ್ರತಿಷ್ಠಿತ ನವಮಂಗಳೂರು ಬಂದರಿಗೆ (ಎನ್‌ಎಂಪಿಟಿ) ವಿಶೇಷ ಸೌಲಭ್ಯಗಳ ‘ಮೊಬೈಲ್ ಎಕ್ಸ್‌ರೇ ಕಂಟೈನರ್‌ ಸ್ಕ್ಯಾನರ್‌’ ಜೂನ್‌ ಮೊದಲ ವಾರದಲ್ಲಿ ಬರುವ ನಿರೀಕ್ಷೆಯಿದೆ.

Advertisement

ಎನ್‌ಎಂಪಿಟಿಗೆ ಹಡಗುಗಳ ಮೂಲಕ ಬರುವ ಮತ್ತು ಹೋಗುವ ವಸ್ತಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುವ ಬದಲು ವಾಹನವನ್ನೇ ಪೂರ್ಣವಾಗಿ ಸ್ಕ್ಯಾನ್‌ ಮಾಡುವ ನೂತನ ಸಲಕರಣೆ ಇದು. 40 ಅಡಿ ಎತ್ತರದ ಕಂಟೈನರ್‌ಗಳ ಒಳಗೆ ಇರುವ ಎಲ್ಲ ವಸ್ತುಗಳನ್ನು ಕ್ಷಣ ಮಾತ್ರದಲ್ಲಿ ತಪಾಸಣೆ ಮಾಡಲು ಇದರಿಂದ ಸಾಧ್ಯವಾಗಲಿದೆ. ದೇಶದ ಇತರ ಬಂದರುಗಳಲ್ಲಿ ಈ ಸೌಲಭ್ಯವಿದ್ದು, ಈಗ ಮಂಗಳೂರಿಗೂ ಲಭ್ಯವಾಗಲಿದೆ.

ದೇಶದ ನೌಕಾಯಾನ ಸಚಿವಾಲಯದ ನಿರ್ದೇಶನದ ಮೇರೆಗೆ ನೂತನ ಸ್ಕ್ಯಾನರ್‌ ಅನ್ನು ಮಂಗಳೂರಿಗೆ ತರಲಾಗುತ್ತಿದೆ. ಫ್ರಾನ್ಸ್‌ ತಯಾರಿಕೆಯಾದ ಈ ಯಂತ್ರವನ್ನು ಎನ್‌ಎಂಪಿಟಿಯ ಕಸ್ಟಮ್ಸ್‌ ಆಫೀಸ್‌ನಲ್ಲಿ ನಿರ್ವಹಣೆ ಮಾಡಲಾಗುತ್ತದೆ ಎಂದು ಎನ್‌ಎಂಪಿಟಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next