Advertisement

Shocking: ರಿಪೇರಿ ಮಾಡುತ್ತಿದ್ದ ವೇಳೆ ಸ್ಪೋಟಗೊಂಡ ಮೊಬೈಲ್… ಭಯಾನಕ ವಿಡಿಯೋ ವೈರಲ್

03:49 PM Jan 08, 2024 | Team Udayavani |

ಆಗ್ರಾ: ಅಂಗಡಿಯಲ್ಲಿ ಮೊಬೈಲ್ ರಿಪೇರಿ ಮಾಡುತ್ತಿದ್ದ ವೇಳೆ ಏಕಾಏಕಿ ಮೊಬೈಲ್ ಸ್ಪೋಅತಗೊಂಡಿದ್ದು ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದ ಘಟನೆ ಆಗ್ರಾದಲ್ಲಿ ಸಂಭವಿಸಿದೆ, ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ವಿಡಿಯೋದಲ್ಲಿ ಯುವಕನೊಬ್ಬ ಅಂಗಡಿಯಲ್ಲಿ ಮೊಬೈಲ್ ರಿಪೇರಿ ಮಾಡುತ್ತಿದ್ದು, ಏಕಾಏಕಿ ಮೊಬೈಲ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಮೊಬೈಲ್ ರಿಪೇರಿ ಮಾಡುವ ವೇಳೆ ಯುವಕನಿಗೆ ಕರೆಯೊಂದು ಬಂದಿದೆ ಈ ವೇಳೆ ತನ್ನ ಮೊಬೈಲ್ ನಲ್ಲಿ ಮಾತನಾಡುತ್ತಿರುವ ವೇಳೆ ಸ್ಪೋಟಗೊಂಡಿದೆ.

ಈ ಘಟನೆ ಜನವರಿ 7 ರಂದು ಪಿನಾಹತ್ ಪಟ್ಟಣದ ನಂದಗನ್ವಾನ್ ತಿರಾಹೆಯಲ್ಲಿರುವ ಅಂಕುಶ್ ಮೊಬೈಲ್ ಕೇಂದ್ರದಲ್ಲಿ ನಡೆದಿದ್ದು. ಅಂಕುಶ್ ಶರ್ಮಾ ಎಂಬ ವ್ಯಕ್ತಿ ತನ್ನ ಅಂಗಡಿಯಲ್ಲಿ ಮೊಬೈಲ್ ರಿಪೇರಿ ನಡೆಸುತ್ತಿದ್ದ ವೇಳೆ ಆತನ ಮೊಬೈಲ್ ಗೆ ಕರೆಯೊಂದು ಬಂದಿದೆ ಈ ವೇಳೆ ಮಾತನಾಡುತ್ತಿರುವ ವೇಳೆ ರಿಪೇರಿ ನಡೆಸುತ್ತಿದ್ದ ಮೊಬೈಲ್ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ ಕೂಡಲೇ ಯುವಕ ಅಲ್ಲಿಂದ ಎದ್ದ ಪರಿಣಾಮ ದೊಡ್ಡ ಅಪಾಯ ತಪ್ಪಿದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next