Advertisement

Bangalore: ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌ ಸ್ಫೋಟ!

11:44 AM Jan 04, 2024 | Team Udayavani |

ಬೆಂಗಳೂರು: ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌ ಸಿಡಿದು ಯುವಕನ ತೊಡೆಗೆ ಗಂಭೀರ ಗಾಯವಾಗಿರುವ ಘಟನೆ ವೈಟ್‌ ಫೀಲ್ಡ್‌ನಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ವೈಟ್‌ ಫೀಲ್ಡ್‌ ನಿವಾಸಿ ಪ್ರಸಾದ್‌ (24 ) ಗಾಯಗೊಂಡಿದ್ದಾನೆ. ಪ್ರಸಾದ್‌ ಅಕ್ಟೋಬರ್‌ನಲ್ಲಿ ಆ್ಯಂಡ್ರೈಡ್‌ ಮೊಬೈಲ್‌ ಖರೀದಿಸಿದ್ದ. ಬುಧವಾರ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿದ್ದ ಮೊಬೈಲ್‌ ಏಕಾಏಕಿ ಸ್ಫೋಟಗೊಂಡಿದೆ.

ಪರಿಣಾಮ ಆತನ ಬಲಭಾಗದ ತೊಡೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಮೊಬೈಲ್‌ ಸ್ಫೋಟಗೊಂಡ ಬಗ್ಗೆ ಪ್ರಸಾದ್‌, ಮೊಬೈಲ್‌ ಶೋರೂಂ ಸಿಬ್ಬಂದಿಗೆ ದೂರು ನೀಡಿದ್ದಾನೆ. ಅಲ್ಲದೆ, ತೊಡೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದರಿಂದ ಶಸ್ತ್ರಚಿಕಿತ್ಸೆಗೆ 4 ಲಕ್ಷ ರೂ. ಖರ್ಚು ಆಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸುವಂತೆ ಶೂರೂಮ್‌ ಸಿಬ್ಬಂದಿಗೆ ಕೇಳಿದ್ದಾನೆ. ಇಷ್ಟೊಂದು ಮೊತ್ತದ ಹಣ ಕೊಡಲು ಶೋರೂಮ್‌ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.

ಹೀಗಾಗಿ ಪ್ರಸಾದ್‌ ವಕೀಲರ ಮೊರೆ ಹೋಗಲು ನಿರ್ಧರಿಸಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಇದುವರೆಗೂ ಯಾರು ದೂರು ನೀಡಿಲ್ಲ ಎಂದು ವೈಟ್‌ ಫೀಲ್ಡ್‌ ಠಾಣೆ ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next