Advertisement
ನಗರದಲ್ಲಿ ಶನಿವಾರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತೆರಳಿದ ಎಟಿಎಂ, ಮೈಕ್ರೋ ಎಟಿಎಂ ಸೌಲಭ್ಯ ಹೊಂದಿರುವ ಸುಸಜ್ಜಿತ ಮೊಬೈಲ್ ಬ್ಯಾಂಕಿಂಗ್ ವಾಹನ ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲೆಯಜೀವಾಳವಾಗಿರುವ ಹೈನುಗಾರಿಕೆ ನಮ್ಮ ಗ್ರಾಮೀಣ ಜನರ ಬದುಕಿಗೆ ರಕ್ಷಣೆ ನೀಡಿದೆ. 454 ಹಾಲುಉತ್ಪಾದಕರ ಸಹಕಾರ ಸಂಘಗಳು ಹಾಗೂ 14,260 ಮಂದಿ ಹಾಲು ಉತ್ಪಾದಕ ರೈತರ ಉಳಿತಾಯ ಖಾತೆಗಳು ಡಿಸಿಸಿ ಬ್ಯಾಂಕಿನಲ್ಲಿವೆ ಎಂದು ಹೇಳಿದರು.
Related Articles
Advertisement
ಬ್ಯಾಂಕ್‌ನ ಅಧಿ ಕಾರಿಗಳಾದ ಹುಸೇನ್ ದೊಡ್ಡಮನಿ,ಅಮೀನಾ, ಹ್ಯಾರೀಸ್, ಅಬ್ದುಲ್ ಜಬ್ಟಾರ್, ಸತೀಶ್, ಕುರುಬೂರು ನಾಗರಾಜ್ ಮತ್ತಿತರರಿದ್ದರು.
ಮೊಬೈಲ್ ಬ್ಯಾಂಕಿಂಗ್, ಆನ್‌ಲೈನ್ ಸೌಲಭ್ಯ : ಡಿಸಿಸಿ ಬ್ಯಾಂಕಿಗೆ ಹೊಸ ಮನ್ವಂತರಕ್ಕೆ ಸ್ಪಂದಿಸಲು ಆಧುನಿಕತೆಗೆ ತಕ್ಕಂತೆ ´ೋನ್ ಪೇ, ಗೂಗಲ್ ಫೇ ಮತ್ತಿತರ ಆನ್‌ಲೈನ್ ಬ್ಯಾಂಕಿಂಗ್ ಸೇವೆಗೂ ಅನುಮತಿ ನೀಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಬ್ಯಾಲಹಳ್ಳಿ ಗೋವಿಂದಗೌಡರು ಧನ್ಯವಾದ ಸಲ್ಲಿಸಿದರು. ರೈತರು, ತಾಯಂದಿರ ಆರ್ಥಿಕಾಭಿವೃದ್ಧಿಗೆ ಸದಾ ಸಿದ್ಧವಾಗಿರುವ ಡಿಸಿಸಿ ಬ್ಯಾಂಕ್‌ಗೆ ಇದೀಗ ಆಧುನಿಕ ಸ್ಪರ್ಶ ನೀಡಲಾಗಿದ್ದು, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಿಗುವ ಎಲ್ಲಾ ಆನ್ ಲೈನ್ ಸೇವೆಗಳು ಇಲ್ಲಿಯೂ ಲಭ್ಯವಿದೆ ಎಂದು ತಿಳಿಸಿದರು. ರೈತರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುತ್ತಿರುವುದು ಬ್ಯಾಂಕಿಂಗ್ ಇತಿಹಾಸದಲ್ಲೇ ಮೈಲಿಗಲ್ಲು ಎಂದ ಅವರು, ಇದರ ಸದುಪಯೋಗ ಪಡೆದುಕೊಳ್ಳಲು ಜಿಲ್ಲೆಯ ರೈತರು, ಹಾಲು ಉತ್ಪಾದಕರಿಗೆ ಮನವಿ ಮಾಡಿದರು.
ಮೊಬೈಲ್ ಎಟಿಎಂಗಾಗಿ ದೂರವಾಣಿ ಕರೆ ಮಾಡಿ : ಹಾಲು ಉತ್ಪಾಕರಿಗೆ ಬಟವಾಡೆ ಹಣ ಡ್ರಾ ಮಾಡಲು ಅಗತ್ಯವಿದ್ದರೆ ಆಯಾ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಡಿಸಿಸಿ ಬ್ಯಾಂಕಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದರೆ ಮೊಬೈಲ್ ಬ್ಯಾಂಕಿಂಗ್ ವಾಹನ ಅಲ್ಲಿಗೆ ಬಂದು ನಿಲ್ಲುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು. ಬ್ಯಾಂಕಿನ ಹುಸೇನ್ ದೊಡ್ಡಮನಿ ಮೊ. 9449252678, ಸತೀಶ್ ಮೊ. 8660547217,ಹ್ಯಾರೀಸ್ ಮೊ. 9448289135, ಅಬ್ದುಲ್ ಜಬ್ಟಾರ್ ಮೊ. 9686088093 ಈ ದೂರವಾಣಿ ಸಂಖ್ಯೆಗೆಸಂಪರ್ಕಿಸಿ ಮೊಬೈಲ್ ಬ್ಯಾಂಕಿಂಗ್ ಸೇವೆ ಅಗತ್ಯವೆಂದು ತಿಳಿಸಿದರೆ ಸಾಕು ವಾಹನ ಡೇರಿ ಮುಂದೆ ನಿಲ್ಲುತ್ತದೆ ಎಂದು ತಿಳಿಸಿದರು.