Advertisement

ಸ್ವಯಂ ಸೋಂಕು ಪರೀಕ್ಷೆಗೆ ಬಂತು ಮೊಬೈಲ್‌ ಆ್ಯಪ್‌

04:07 PM May 18, 2020 | sudhir |

ಪೆನ್ಸಿಲ್ವೇನಿಯಾ: ಕೋವಿಡ್‌-19 ಸೋಂಕು ನಿಂತ್ರಿಸುವ ಔಷಧ ಮತ್ತು ಲಸಿಕೆಗಳ ಅನ್ವೇಷಣೆಯ ಜತೆಗೆ ಹೊಸ ಹೊಸ ತಂತ್ರಜ್ಞಾನದ ಅನ್ವೇಷಣೆಯೂ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಈಗ ಹೊಸ ರೀತಿಯ ಆ್ಯಪ್‌ ಒಂದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‌ ಸ್ಮಾರ್ಟ್‌ ಫೋನಿನಲ್ಲಿದ್ದರೆ ನಮಗೆ ಕೋವಿಡ್‌ ಸೋಂಕು ಅಂಟಿಕೊಂಡಿದೆಯೇ ಎಂದು ನಾವೇ ತಿಳಿದುಕೊಳ್ಳಬಹುದು.
ಅಮೆರಿಕದ ಪಿಟ್ಸ್‌ಬರ್ಗ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳು ಈ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

Advertisement

ಕೃತಕ ಬುದ್ಧಿಮತ್ತೆ ಮತ್ತು ಹೊಸ ಮೊಬೈಲ್‌ ಸಂವೇದಕವನ್ನು(ಸೆನ್ಸಾರ್‌)ಇದರಲ್ಲಿ ಬಳಸಲಾಗಿದೆ. ಸೋಂಕಿಗೆ ಒಳಗಾಗಿದ್ದರೆ ಅಂಥವರ ಉಸಿರಾಟದ ಗತಿಯನ್ನು ನಿರಂತರವಾಗಿ ವಿಶ್ಲೇಷಿಸುತ್ತದೆ ಮತ್ತು ಬದಲಾವಣೆಯನ್ನು ಪತ್ತೆ ಹಚ್ಚುತ್ತದೆ. ಈ ಸಂಪೂರ್ಣ ಸಿಸ್ಟಮ್‌ ಅನ್ನು ಆ್ಯಪ್‌ಗೆ ಸಂಪರ್ಕಿಸಲಾಗಿದೆ ಎಂದು ಯೋಜನೆಯ ನೇತೃತ್ವ ವಹಿಸಿರುವ ಪ್ರೊಫೆಸರ್‌ ವೀ ಗಾವೊ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next