Advertisement

MNS; ಬಿಜೆಪಿ ಮೈತ್ರಿಯಿಂದ ದೂರ: ಪ್ರತ್ಯೇಕ ಸ್ಪರ್ಧೆ ಎಂದ ರಾಜ್ ಠಾಕ್ರೆ

06:59 PM Jul 25, 2024 | Team Udayavani |

ಮುಂಬಯಿ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ(Maharashtra Navnirman Sena) ಬಿಜೆಪಿ ನೇತೃತ್ವದ ಮಹಾಯುತಿಯ ಭಾಗವಾಗಿರದೆ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ರಾಜ್ ಠಾಕ್ರೆ ಘೋಷಿಸಿದ್ದಾರೆ.

Advertisement

ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಮಹಾಯುತಿ ಮೈತ್ರಕೂಟಕ್ಕೆ ಬೆಂಬಲ ನೀಡಿದ್ದ ಎಂಎನ್ ಎಸ್ ಸಂಸ್ಥಾಪಕ ರಾಜ್ ಠಾಕ್ರೆ ವಿಧಾನಸಭಾ ಚುನಾವಣೆಯನ್ನು ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ.

ಮಹಾಯುತಿ ಸರ್ಕಾರದ ಯೋಜನೆಗಳನ್ನು ಪ್ರಶ್ನಿಸಿರುವ ರಾಜ್ ಠಾಕ್ರೆ, ರಾಜ್ಯದಲ್ಲಿ ಗುಂಡಿಗಳನ್ನು ತುಂಬಲು ಹಣವಿಲ್ಲ, ಆದರೆ ಸರ್ಕಾರವು ಯೋಜನೆಗಳನ್ನು ಘೋಷಿಸುತ್ತಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದ ಕೆಲವು ಹೊಸ ಯೋಜನೆಗಳನ್ನು ಟೀಕಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ “200 ರಿಂದ 250 ಸ್ಥಾನಗಳಲ್ಲಿ ಹೋರಾಡುತ್ತೇನೆ” ಎಂದು ಹೇಳಿದ್ದಾರೆ. ಎನ್ ಸಿಪಿ ವಿಭಜನೆ ಕುರಿತು ಪ್ರತಿಕ್ರಿಯಿಸಿ “ಲಾಡ್ಲಾ ಭಾಯಿ(ಶರದ್ ಪವಾರ್) ಮತ್ತು ಬೆಹೆನ್ ಇಬ್ಬರೂ ಒಟ್ಟಿಗೆ ಸಂತೋಷವಾಗಿದ್ದರೆ, ಪಕ್ಷವು ವಿಭಜನೆಯಾಗುತ್ತಿರಲಿಲ್ಲ.”ಎಂದರು.

ಮಾಹಾರಾಷ್ಟ್ರ ರಾಜಕೀಯ ಗೊಂದಲಗಳ ಕುರಿತು ಪ್ರತಿಕ್ರಿಯಿಸಿ ”ಯಾವ ಶಾಸಕರು ಯಾವ ಪಕ್ಷದಲ್ಲಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ.ಮುಂಬರುವ ಚುನಾವಣೆಯಲ್ಲಿ ಈ ಪಕ್ಷಗಳ ನಡುವೆ ಜಟಾಪಟಿ ನಡೆಯಲಿದೆ’ ಎಂದರು.

Advertisement

“ನನ್ನ ಪಕ್ಷದವರಲ್ಲಿ ಕೆಲವರು ಬೇರೆ ಪಕ್ಷ ಸೇರಲು ಬಯಸುತ್ತಿದ್ದಾರೆ ಎಂದು ನಾನು ಕೇಳಿದೆ.ಅವರಿಗೆ ಕೆಂಪು ಹಾಸು ಹಾಸುತ್ತೇನೆ. ಈಗಲೇ ಹೊರಡಬಹುದು” ಎಂದರು.

ಎಲ್ಲಾ ಪಾತ್ರಗಳನ್ನು ನಿರ್ವಹಿಸುತ್ತಾರೆ!

ರಾಜ್ ಠಾಕ್ರೆ ಘೋಷಣೆ ಬಳಿಕ ಪ್ರತಿಕ್ರಿಯಿಸಿದ ಎನ್‌ಸಿಪಿ-ಎಸ್‌ಸಿಪಿ ನಾಯಕ ಜಿತೇಂದ್ರ ಅಹವಾದ್ “ರಾಜ್ ಠಾಕ್ರೆ ತಮ್ಮ ಪಾತ್ರವನ್ನು ಯಾವಾಗ ಬದಲಾಯಿಸುತ್ತಾರೆ ಎಂದು ಅವರ ಕುಟುಂಬದ ಸದಸ್ಯರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅವರು ಸಾಕಷ್ಟು ಚಲನಚಿತ್ರಗಳನ್ನು ನೋಡುತ್ತಾರೆ.ಆದ್ದರಿಂದ ಅವರು ಎಲ್ಲಾ ಪಾತ್ರಗಳನ್ನು ನಿರ್ವಹಿಸುತ್ತಾರೆ. ವಿಭಿನ್ನ ಪಾತ್ರಗಳನ್ನು ನಿರ್ವಹಿಸುವುದು ಅಭ್ಯಾಸವಾಗಿದೆ” ಎಂದರು.

ವಿಶೇಷವೆಂದರೆ 2019 ರಲ್ಲಿ ಎಂ ಎನ್ ಎಸ್ ಕೇವಲ ಒಂದು ಸ್ಥಾನ ಗೆದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next