ಮುದ್ದೇಬಿಹಾಳ: ಮುಸ್ಲಿಂರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವ ನೂಪುರ್ ಶರ್ಮಾ ಹಾಗೂ ನವೀನ ಜಿಂದಾಲ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಮುತ್ತಹಿದಾ ಕೌನ್ಸಿಲ್ (ಎಂಎಂಸಿ) ಮುಖಂಡರು ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಶುಕ್ರವಾರ ಶಿರಸ್ತೇದಾರ್ ಎ.ಎಚ್. ಬಳೂರಗಿ ಅವರಿಗೆ ಸಲ್ಲಿಸಿದರು.
ನಮ್ಮ ಭಾರತ ದೇಶ ಬೇರೆ ಬೇರೆ ಧರ್ಮದವರು ವಾಸಿಸುವಂತಹ ದೇಶ. ಒಬ್ಬರು ಇನ್ನೊಂದು ಧರ್ಮದವರನ್ನು ಗೌರವಿಸುವಂತಹ ದೇಶ. ಇಂಥ ದೇಶದಲ್ಲಿ ಧಾರ್ಮಿಕ ಭಾವನೆಯನ್ನು ಹಾಳು ಮಾಡುತ್ತಿರುವ ನೂಪುರ್ ಶರ್ಮಾ ಮತ್ತು ನವೀನಕುಮಾರ ಜಿಂದಾಲ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಘಟನೆ ಖಂಡಿಸಿ ಎಚ್.ಎಂ. ಚೌಧರಿ ಮತ್ತಿತರರು ಮಾತನಾಡಿದರು. ಅಲ್ಲಾಭಕ್ಷ ದೇಸಾಯಿ, ಎನ್.ಎ. ನದಾಫ್, ಸದ್ದಾಂ ಹುಸೇನ್, ಎ.ಎಂ. ಮಕಾನದಾರ, ನೂರೇನಬಿ ನದಾಫ್, ಎಫ್.ಎಂ. ಶಿರಗುಂಪಿ, ಶಾಬಾಜ್ ಮೋಮಿನ್, ಸಮೀರ ಮಕಾನದಾರ, ಯೂನೂಸ್ ವಾಲೀಕಾರ, ಎಂ.ಆರ್. ಖಾಜಿ ಸೇರಿ ಹಲವರು ಇದ್ದರು.