Advertisement

Dr.ಬಲ್ಲಾಳ್‌ಗೆ ಎಂಎಂಎ- ಕೆವಿಕೆ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿ

11:26 PM Jan 13, 2024 | Team Udayavani |

ಮಂಗಳೂರು: ಮಂಗಳೂರು ಮ್ಯಾನೇಜ್‌ಮೆಂಟ್‌ ಅಸೋಸಿಯೇಶನ್‌ ವತಿಯಿಂದ 2023ನೇ ಎಂಎಂಎ-ಕೆವಿಕೆ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಪ್ರೊ ಚಾನ್ಸೆಲರ್‌ ಮತ್ತು ಅಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌ ಅವರಿಗೆ ನಗರದ ಎಸ್‌ಡಿಎಂ ಕಾಲೇಜಿನಲ್ಲಿ ಶನಿವಾರ ನೀಡಿ ಗೌರವಿಸಲಾಯಿತು.

Advertisement

ಅಸೋಸಿಯೇಶನ್‌ ಅಧ್ಯಕ್ಷ ಕೆ. ಜೈರಾಜ್‌ ಬಿ. ರೈ ಮಾತನಾಡಿ, ಮಂಗಳೂರು ಮ್ಯಾನೇಜ್‌ಮೆಂಟ್‌ ಅಸೋಸಿಯೇಶನ್‌ ವೃತ್ತಿಪರ ಸಂಘಟನೆಯಾಗಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ವಿಶಿಷ್ಟ ಕೊಡುಗೆ ನೀಡಿದ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಕೆಎಂಸಿ ಮಂಗಳೂರಿನ ಮಾಜಿ ಡೀನ್‌ ಡಾ| ವೈ.ಎಸ್‌. ರೈ ಮುಖ್ಯ ಅತಿಥಿಯಾಗಿದ್ದರು. ಉಪಾಧ್ಯಕ್ಷ ಡಾ| ಕೆ. ಜನಾರ್ದನ ಅವರು ಸಮ್ಮಾನ ಪತ್ರ ವಾಚಿಸಿದರು. ಎಐಎಂಎ ಸಹ ಸದಸ್ಯ ಡಾ| ದೇವರಾಜ್‌ ಕೆ. ಅವರು ಪ್ರಶಸ್ತಿಯ ಔಚಿತ್ಯದ ಕುರಿತು ಮಾತನಾಡಿದರು.

ಪ್ರಮುಖರಾದ ಡಾ| ಪ್ರಮಿಳಾ ಶೆಟ್ಟಿ, ಭುವನಪ್ರಸಾದ್‌ ಹೆಗ್ಡೆ, ಅಭಯಚಂದ್ರ ಜೈನ್‌ ಮೊದಲಾದವರಿದ್ದರು. ಡಾ| ಪ್ರಮೀಳಾ ಶೆಟ್ಟಿ ವಂದಿಸಿ, ಹರ್ಷಿತಾ ಕೆ. ನಿರೂಪಿಸಿದರು.

ಸಾಮಾಜಿಕ ಪ್ರಜ್ಞೆ ರೂಢಿಸಿಕೊಳ್ಳಿ
ಡಾ| ಬಲ್ಲಾಳ್‌ ಮಾತನಾಡಿ, ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಈಗಾಗಲೇ ಹಲವಾರು ಸಾಧಕರಿಗೆ ಗೌರವಿಸಲಾಗಿದೆ. ಪ್ರತಿಯೊಬ್ಬರೂ ಶಿಕ್ಷಣದೊಡನೆ ಸಾಮಾಜಿಕ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು. ಸಮಾಜ ಬದಲಾವಣೆಗೆ ಎಲ್ಲರ ಒಳಗೊಳ್ಳುವಿಕೆ ಅಗತ್ಯ. ಯಾವುದೇ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕಾದರೆ ಗ್ರಾಹಕರ ಜತೆ ಉತ್ತಮ ಬಾಂಧವ್ಯ ಹೊಂದಿರಬೇಕು. ಯಾವುದೇ ಹುದ್ದೆಯಲ್ಲಿದ್ದರೂ, ನಿರ್ವಹಣಾ ಕೌಶಲ್ಯ ಬೆಳೆಸಿಕೊಳ್ಳಬೇಕು. ದೇಶದ ಕಾನೂನು ಪಾಲನೆ ಮಾಡಿ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next