Advertisement

ಮಂಗಳೂರು, ಟಿ4 ಸೂಪರ್‌ ಕಿಂಗ್ಸ್‌ ಸೆಮಿಗೆ

06:00 AM Mar 31, 2018 | Team Udayavani |

ಮಂಗಳೂರು: ಬ್ರ್ಯಾಂಡ್‌ ವಿಷನ್‌ ಈವೆಂಟ್ಸ್‌, ಮಂಗಳೂರು ಅಕೇಶನಲ್ಸ್‌ ಕ್ರೀಡಾ ಸಂಸ್ಥೆ ಮತ್ತು ಸಿ ಬರ್ಡ್‌ ಕ್ರಿಕೆಟ್‌ ಅಕಾಡೆಮಿಯ ಆಶ್ರಯದಲ್ಲಿ ಎನ್‌ಎಂಪಿಟಿಯ ಡಾ| ಬಿ. ಆರ್‌. ಅಂಬೇಡ್ಕರ್‌ ಕ್ರೀಡಾಂಗಣ ದಲ್ಲಿ ಆಯೋಜಿಸಿದ ಮಂಗಳೂರು ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಕೂಟದ ಮೊದಲ ರೋಮಾಂಚಕಾರಿ ಎಲಿಮಿನೇಟರ್‌ ಪಂದ್ಯದಲ್ಲಿ ಟಿ4 ಸೂಪರ್‌ ಕಿಂಗ್ಸ್‌ ತಂಡವು 5 ರನ್ನುಗಳ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿತು.

Advertisement

ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಟಿ4 ಸೂಪರ್‌ ಕಿಂಗ್ಸ್‌ ತಂಡವು ವಿನಯ್‌ ಸಾಗರ್‌ (43), ನಿಹಾಲ್‌ ಉಳ್ಳಾಲ (46) ಮತ್ತು ಅಬ್ದುಲ್‌ ಮಜೀದ್‌ (28) ಅವರ ಉತ್ತಮ ಆಟದಿಂದಾಗಿ 9 ವಿಕೆಟಿಗೆ 161 ರನ್‌  ಪೇರಿಸಿತು. ಇದಕ್ಕುತ್ತರವಾಗಿ ಅಲಿ ವಾರಿಯರ್ ತಂಡವು ಬಿರುಸಿನ ಆಟ ಆಡಿದ್ದರೂ ಅಂತಿಮವಾಗಿ 7 ವಿಕೆಟಿಗೆ 157 ರನ್‌ ಗಳಿಸಿ ಶರಣಾಯಿತು. ರೋಹಿತ್‌ ಗೌಡ 58 ರನ್‌ ಗಳಿಸಿ ಅಜೇಯರಾಗಿ ಉಳಿದರು. 

“ಎ’ ಗುಂಪಿನ ಅಗ್ರಸ್ಥಾನ ಪಡೆದ ಟೀಂ ಎಲಿಗೆಂಟ್‌ ಮತ್ತು “ಬಿ’ ಗುಂಪಿಯ ಅಗ್ರಸ್ಥಾನಿ ಮಂಗಳೂರು ಯುನೈಟೆಡ್‌ ತಂಡಗಳು ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿದವು. 

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಮಂಗಳೂರು ಯುನೈಟೆಡ್‌ ತಂಡವು ಯುನೈಟೆಡ್‌ ಉಳ್ಳಾಲ ತಂಡವನ್ನು 64 ರನ್ನುಗಳಿಂದ ಸೋಲಿಸಿತು. ನಾಕೌಟ್‌ ಹಂತಕ್ಕೇರಬೇಕಾದರೆ ಉಳ್ಳಾಲ ತಂಡಕ್ಕೆ ಈ ಪಂದ್ಯ ಗೆಲ್ಲಲೇಬೇಕಾಗಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಮಂಗಳೂರು ಯುನೈಟೆಡ್‌ ತಂಡವು 8 ವಿಕೆಟಿಗೆ 162 ರನ್‌ ಗಳಿಸಿತ್ತು. ರೋಶನ್‌ ಶೆಟ್ಟಿ (46), ಪ್ರವೀಣ್‌ ದುಬೆ 46 ರನ್‌ ಹೊಡೆದರು. ಇದಕ್ಕುತ್ತರವಾಗಿ ಉಳ್ಳಾಲ ತಂಡವು 98 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಕಾರ್ತಿಕ್‌ 35 ರನ್‌ ಗಳಿಸಿದರೆ ನಾಗಭರತ್‌ ಮತ್ತು ಅಕ್ಷಯ್‌ ಬಲ್ಲಾಳ್‌ ತಲಾ ಮೂರು ವಿಕೆಟ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next