Advertisement

ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ

10:02 AM Jan 12, 2020 | keerthan |

ಕಲಬುರಗಿ:‌ ಮೋದಿ ಸರ್ಕಾರ ಭಾರತದಲ್ಲಿರುವ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ದೂರಿದರು.

Advertisement

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಗರದಲ್ಲಿ ನಡೆದ ಬೃಹತ್ ತಿರಂಗ ಧ್ವಜದ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೋದಿ ಸರ್ಕಾರ ಯಾರ ಪೌರತ್ವ ಕಿತ್ತುಕೊಳ್ಳುವುದಿಲ್ಲ.‌ ಆದರೆ, ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದೆ. ನಾನು ಶರಣ ಬಸವೇಶ್ವರರ ಅಣೆ ಮಾಡಿ ಹೇಳಲು ಬಂದಿದ್ದೇನೆ. ಮೋದಿ ಸರ್ಕಾರ ಯಾರಿಗೂ ಅನ್ಯಾಯ ಮಾಡಿಲ್ಲ ಎಂದರು.

ಪಾಕಿಸ್ತಾನದಲ್ಲಿ ಹಿಂದುಗಳು, ಪಾರ್ಸಿಗಳು, ಸಿಖ್ಖರಿಗೆ ಉದ್ಯೋಗ ಕೊಡುತ್ತಿಲ್ಲ‌. ಶಾಲೆಗಳಿಗೆ ಮಕ್ಕಳನ್ನು ಸೇರಿಸಿಕೊಳ್ಳುತ್ತಿಲ್ಲ. ಆಸ್ಪತ್ರೆಯಲ್ಲಿ ಆರೋಗ್ಯ ಸಿಗುತ್ತಿಲ್ಲ. ಮಹಿಳೆಯರ ಮೇಲೆ ನಿರಂತರ ಶೋಷಣೆ ಆಗುತ್ತಿದೆ. ಇದರಿಂದ ನೊಂದ ಲಕ್ಷಾಂತರ ಜನರು ಭಾರತದ ಪೌರತ್ವಕ್ಕಾಗಿ ಕಾಯುತ್ತಿದ್ದಾರೆ ಎಂದರು.

ದೇಶ ವಿಭಜನೆ ಸಮಯದಲ್ಲಿ ಪಾಕಿಸ್ತಾನದಲ್ಲಿ 23ರಷ್ಟು ರಷ್ಟು ಹಿಂದುಗಳು ಇದ್ದರು. 1955ರಲ್ಲಿ ಪೌರತ್ವ ಕಾಯ್ದೆ ಜಾರಿಗೆ ಬಂತು. ಆದರೆ, ಅದು ಸರಿಯಾದ ಜಾರಿಗೆ ಬಂದಿಲ್ಲ. 2003ರಲ್ಲಿ ಪಾಕಿಸ್ತಾನದಲ್ಲಿ ನೊಂದ ಹಿಂದುಗಳಿಗೆ ಪೌರತ್ವ ಕೊಡಿ ಎಂದು ಡಾ.ಮನಮೋಹನ್ ಸಿಂಗ್ ಕೇಳಿದ್ದರು. ಸೋನಿಯಾ ಗಾಂಧಿ ಅವರಿಗೆ ಪೌರತ್ವ ನೀಡಿದ ದೇಶ ನಮ್ಮದು‌. ಮೋದಿ ಸರ್ಕಾರ ಬಂದ ಮೇಲೆ 600 ಜನರಿಗೆ ಪೌರತ್ವ ನೀಡಲಾಗಿದೆ. ಯಾರ ಪೌರತ್ವ ತೆಗೆಯುವುದಿಲ್ಲ. ಕಾಂಗ್ರೆಸ್ ಸುಳ್ಳನ್ನು ನಂಬ ಬೇಡಿ ಎಂದು ಮನವಿ ಮಾಡಿದರು.

Advertisement

ಸಂಸದ ಡಾ.ಉಮೇಶ ಜಾಧವ್ ಮಾತಮಾಡಿ, ಇಂದು ದೇಶದಲ್ಲಿ ನಕಲಿ ಕಾಂಗ್ರೆಸ್ ಇದೆ. ಮೋದಿ ಸರ್ಕಾರದ್ದು ಜೀವ ಕೊಡುವ ಕಾಯ್ದೆ ಇದು, ಜೀವ ತೆಗೆಯುವ ಕಾಯ್ದೆ ಅಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಾಥ್ ಕಾ ವಿಶ್ವಾಸ ಎಂದು ಹೇಳಿರುವಂತೆ ಪ್ರಧಾನಿ ಮೋದಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು.

ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಮಾತನಾಡಿ, ಎಲ್ಲರೂ ಒಂದಾಗಿರಬೇಕು. ದೇಶ ಒಟ್ಟಾಗಿರಬೇಕು. ಪೌರತ್ವ ಕಾಯ್ದೆಯನ್ನು ಎಲ್ಲ ಬೆಂಬಲಿಸಬೇಕು ಎಂದು ಹೇಳಿದರು.

ಬಿಜೆಪಿ ಶಾಸಕರಾದ ಸುಭಾಷ್ ಗುತ್ತೇದಾರ, ದತ್ತಾತ್ರೇಯ ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ್, ಬಿ.ಜಿ.ಪಾಟೀಲ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹಲವರು ಪಾಲ್ಗೊಂಡಿದ್ದರು.

ಬೃಹತ್ ‌ಮೆರವಣಿಗೆ: ಪೌರತ್ವ ಕಾಯ್ದೆ ಬೆಂಬಲಿಸಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ‌ ನೇತೃತ್ವದಲ್ಲಿ ಕಲಬುರಗಿ ನಾಗರಿಕ ಸಮಿತಿಯಿಂದ ಆರು ಕಿ.ಮೀ ದೂರ ಬೃಹತ್ ತಿರಂಗ ಧ್ವಜದ ಮೆರವಣಿಗೆ ನಡೆಯಿತು.‌

ನಗರೇಶ್ವರ ಶಾಲೆಯಿಂದ ಆರಂಭವಾದ ಮೆರವಣಿಗೆ ಪ್ರಮುಖ ಮಾರ್ಗಗಳ‌ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆಯಿತು.‌

ಮಠಾಧೀಶರು, ಬಿಜೆಪಿ ಮುಖಂಡರು,ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದಾರೆ. ತಿರಂಗ ಹಿಡಿದು ಪೌರತ್ವ ಕಾಯ್ದೆ, ಪ್ರಧಾನಿ ಮೋದಿ ಪರ ಘೋಷಣೆ ಕೂಗಿದರು

Advertisement

Udayavani is now on Telegram. Click here to join our channel and stay updated with the latest news.

Next