Advertisement

ಈಶಾನ್ಯ ಪದವೀಧರರ ಚುನಾವಣೆ: ಹರಪನಹಳ್ಳಿಯಲ್ಲಿ ಮ.1 ಗಂಟೆಯವರೆಗೆ ಶೇ.33.8 ರಷ್ಟು ಮತದಾನ

02:59 PM Jun 03, 2024 | Team Udayavani |

ಹರಪನಹಳ್ಳಿ: ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಪಟ್ಟಣದಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದೆ. ಮಧ್ಯಾಹ್ನ1 ಗಂಟೆ ವೇಳೆಗೆ ಶೇ.33.8 ರಷ್ಟು ಮತದಾನವಾಗಿದೆ.

Advertisement

ಪಟ್ಟಣ ಜೂನಿಯರ್  ಕಾಲೇಜಿನಲ್ಲಿ ಸ್ಥಾಪಿಸಿರುವ ಮೂರು  ಮತಗಟ್ಟೆ ಕೇಂದ್ರಗಳುಗೆ ಬೆಳಗ್ಗಿನಿಂದಲೇ ಮತದಾರರು ಉತ್ಸಾಹದಿಂದ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಹಮ್ಮಸ್ಸಿನಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ‌.

ಕಳೆದ ರಾತ್ರಿ ಮಳೆ ಸುರಿದ ಪರಿಣಾಮ ಇಂದು ತಂಪೆರೆದ ವಾತಾವರಣ ಇದ್ದರಿಂದ ಬಿಸಿಲಿನ ತಾಪ ಮತದಾರಿಗೆ ತಾಕಲಿಲ್ಲ

ಹಿರಿಯ ನಾಗರಿಕರಿಗೆ ನೇರವಾಗಿ ಮತಗಟ್ಟೆ ಒಳಗಡೆ  ಪ್ರವೇಶಿಸಿ ಮತಚಲಾಯಿಸಲು ಚುನಾವಣಾ ಸಿಬ್ಬಂದಿ ಅವಕಾಶ ಮಾಡಿಕೊಟ್ಟರು.

ಒಟ್ಟು 3549 ಮತದಾರರ ಪೈಕಿ ಒಂದು ಗಂಟೆ ವೇಳೆಗೆ 1050 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

Advertisement

ಮತಗಟ್ಟೆ ಕೇಂದ್ರಕ್ಕೆ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಶಿಲ್ದಾರ ಗಿರೀಶಬಾಬು ಆಗಮಿಸಿ ಪರಿಶೀಲನೆ ನಡೆಸಿದರು.

ಪಟ್ಟಣದ ಪ್ರಸಿದ್ಧ ತೆಗ್ಗಿನ ಮಠದ ವರಸದ್ಯೋಜಾತ ಶ್ರೀಗಳು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಮತಗಟ್ಟೆ ಸುತ್ತ ಸೂಕ್ತ ಪೊಲೀಸ್ ಬಂದಬಸ್ತ್ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next