Advertisement

ನೀನು ಸೂಪರ್‌ಸ್ಟಾರ್‌ ಇರ್ಬಹುದು,ಆದ್ರೆ ಆಲಿಬಾಗ್‌ ನಿಂದಲ್ಲ…

12:45 PM Nov 11, 2017 | Team Udayavani |

ಮುಂಬಯಿ: ಸ್ಟಾರ್‌ನಟ ಶಾರುಖ್‌ ಖಾನ್‌ಗೆ ಅಭಿಮಾನಿಗಳ ಎದುರೆ ಆಲಿಬಾಗ್‌ನ ಎಂಎಲ್‌ಸಿ ಯೊಬ್ಬರು ತಾಳ್ಮೆ ಕಳೆದು ಕೊಂಡು ಬೈದಿರುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

Advertisement

ನವೆಂಬರ್‌ 2 ರಂದು ಘಟನೆ ನಡೆದಿದ್ದು, ವಿಡಿಯೋ ತಡವಾಗಿ ವೈರಲ್‌ ಆಗಿದೆ. ಬರ್ತ್‌ ಡೇ ಆಚರಣೆಗೆಂದು ಅಲಿಬಾಗ್‌ ಜೆಟ್ಟಿಗೆ ತೆರಳಿ ವಿಹಾರ ನೌಕೆಯಲ್ಲಿ ಶಾರುಖ್‌ ಖಾನ್‌ ವಿಹರಿಸುತ್ತಿದ್ದರು. ಇದೇ ವೇಳೆ ಎಂಎಲ್‌ಸಿ ಜಯಂತ್‌ ಪಾಟೀಲ್‌ ಅವರು  ರಾಯ್‌ಘಡ್‌ನ‌ ಕೊಲಾಬಾದಲ್ಲಿರುವ ನಿವಾಸಕ್ಕೆ ತೆರಳು ಸ್ಥಳಕ್ಕಾಗಮಿಸಿದ್ದಾರೆ. 

ಶಾರುಖ್‌ರಿಂದಾಗಿ  ಪಾಟೀಲ್‌  ಪ್ರಯಾಣಿಸಬೇಕಾಗಿದ್ದ ಬೋಟ್‌ ಬರುವುದು ವಿಳಂಬವಾಯಿತು. ವಿಹರ ನೌಕೆ ಏರಲು ತಡವಾಗಿದ್ದು, ಅಭಿಮಾನಿಗಳ ಸಂದಣಿಯಲ್ಲಿ ಪಾಟೀಲ್‌ ಪರದಾಡಬೇಕಾಯಿತು. ನೌಕೆ ಏರುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಪಾಟೀಲ್‌ ಶಾರುಖ್‌ಗೆ ಬೈದೇ ಬಿಟ್ಟಿದ್ದಾರೆ. ‘ನೀನು ಸೂಪರ್‌ ಸ್ಟಾರ್‌ ಇರಬಹುದು ಆದ್ರೆ ಆಲಿಬಾಗ್‌ ನಿಂದಲ್ಲ’ ಎಂದಿದ್ದಾರೆ.

ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗದ ಶಾರುಖ್‌ ಹೊರಬರುತ್ತಿದ್ದಂತೆ ನೂರಾರು ಅಭಿಮಾನಿಗಳು ಸಂಭ್ರಮದಿಂದ ಜೈಕಾರ ಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next