Advertisement
ನಗರದ ತಮ್ಮ ಕಚೇರಿಯಲ್ಲಿ ಸೋಮವಾರವಷ್ಟೇ ಶಾಸಕ ಶ್ರೀನಿವಾಸಗೌಡರು ಮಾಡಿದ್ದ ಆರೋಪಕ್ಕೆ ಉತ್ತರಿಸುವ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಅವರು ಹೇಳಿರುವಂತೆ ಅಕ್ರಮ ಎಸಗಿದ್ದರೆರಾಜಕೀಯದಿಂದ ದೂರವಾಗುತ್ತೇನೆ. ಆದರೆ, ಅದನ್ನು ಸಾಬೀತುಪಡಿಸಲಾಗದಿದ್ದರೆ ಶ್ರೀನಿವಾಸಗೌಡರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರಾಜಕೀಯದಿಂದ ದೂರ ಸರಿಯಲು ಎಂದು ಆಗ್ರಹಿಸಿದರು.
Related Articles
Advertisement
ಜನ ಪ್ರಶ್ನೆ ಮಾಡಲಿ: ನಗರ, ಕ್ಷೇತ್ರ ಬಗ್ಗೆ ಶ್ರೀನಿವಾಸಗೌಡರಿಗೆ ಕಾಳಜಿಯಿಲ್ಲ. ಅವರನ್ನು ಬಲವಂತ ಮಾಡಿ ತಾಜ್ ಹೋಟೆಲ್‌ಗೆ ಕರೆದುಕೊಂಡು ಹೋಗಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಸಿ ಮೂರು ರಸ್ತೆಗೆ 17 ಕೋಟಿ ರೂ. ಮಂಜೂರು ಮಾಡಿಸಲಾಯಿತು. ಜ್ಞಾಪಕ ಇದ್ರೆ ಮೆಲಕು ಹಾಕಲಿ. ನಾನು ರಾಜಕಾರಣ ಮಾಡಲ್ಲ. ಜಿಲ್ಲೆಯಲ್ಲಿ ಸಂಸದರು, ಶಾಸಕರುಇದ್ದಾರೆ ಎಷ್ಟರ ಮಟ್ಟಿಗೆ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ ಎಂಬುದಕ್ಕೆ ಜನ ಪ್ರಶ್ನೆ ಮಾಡಲಿ ಎಂದು ಕಿವಿಮಾತು ಹೇಳಿದರು.
ಕೊಟ್ಟಿರುವ ಹಣ ಚುಕ್ತಾ ಮಾಡಲಿ :
ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಶ್ರೀನಿವಾಸಗೌಡರ ಮೇಲಿನ ಗೌರವದಿಂದ ಜೆಡಿಎಸ್‌ನಲ್ಲಿ ಕೆಲಸ ಮಾಡಿದ್ದೇನೆ. ಇದರಿಂದಾಗಿ 2018ರ ಚುನಾವಣೆಯ ಬಿಫಾರಂ ಗೌಡರಿಗೆ ಕೊಡಿಸಲು ಅನುಕೂಲವಾಯಿತು. ಆದರೆ, ಈ ಚುನಾವಣೆಯಿಂದ ನನಗೆ ಆರ್ಥಿಕ ಹೊರೆ ತಂದಿದ್ದಾರೆ. ಆನಷ್ಟದಿಂದ ಹೊರಬರಲು ಸಾಧ್ಯವಾಗಿಲ್ಲ. ನಾನು ನೀಡಿರುವಹಣ ಚುಕ್ತಾ ಮಾಡಿ ಹೇಳಿಕೆ ನೀಡಲಿ. ಅವರ ಬಗ್ಗೆ ಸಾಕಷ್ಟುದುಗುಡ ಇದೆ. ಮುಂದಿನ ದಿನಗಳಲ್ಲಿ ಸಾಕ್ಷಿ ಸಮೇತ ಬಹಿರಂಗ ಪಡಿಸಲಾಗುವುದು ಎಂದು ತಿಳಿಸಿದರು. ನಾನು ಯಾರನ್ನು ಓಲೈಸಿಕೊಂಡು ಶಾಸಕನಾಗಿಲ್ಲ. ಗೌಡರ ಋಣದಲ್ಲಿ ನಾನು ಇಲ್ಲ. ಎಂಎಲ್ಸಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ನನ್ನದು ತೆರೆದ ಪುಸ್ತಕ ಇದ್ದಂತೆ. ಶ್ರೀನಿವಾಸಗೌಡರೇ ನೀವು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದೀರಾ ಅಲ್ಲಾದರೂ ನಿಷ್ಠೆಯಿಂದ ಇರಿ ಎಂದುಎಂಎಲ್ಸಿ ಇಂಚರ ಗೋವಿಂದರಾಜು ವ್ಯಂಗ್ಯವಾಡಿದರು. ಶಾಸಕಶ್ರೀನಿವಾಸಗೌಡರಿಗೋಸ್ಕರ ಮಾಡಿದ ಖರ್ಚು ನನ್ನ ಶ್ರಮದಿಂದಸಂಪಾದನೆ ಮಾಡಿದ್ದು. ಜೆಡಿಎಸ್‌ನಲ್ಲಿ ಉಸಿರುಗಟ್ಟಿದ ವಾತಾವರಣ ಇದೆ ಎಂಬುದು ಗೊತ್ತಿದ್ದರೂ ಬಿ ಫಾರಂಗಾಗಿ ನನ್ನಲ್ಲಿಗೆ ಯಾಕೆ ಬರಬೇಕಿತ್ತು. ಕಾಂಗ್ರೆಸ್‌ನಲ್ಲಿ ನಿಮಗೆ ಪೂರಕ ವಾತಾವರಣ ಇದೆ. ಸತ್ಯ ಬೆಂಕಿ ಇದ್ದಹಾಗೆ ಎಂದರು.