Advertisement

Election Result: ಈಶಾನ್ಯ ಪದವೀಧರ ಕ್ಷೇತ್ರ; ಬಿಜೆಪಿಯ ಅಮರನಾಥ ಪಾಟೀಲ್ ಗೆ ಆರಂಭಿಕ ಮುನ್ನಡೆ

08:22 PM Jun 06, 2024 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗ ಒಳಗೊಂಡ ಈಶಾನ್ಯ ಕರ್ನಾಟಕ ಪದವೀಧರ ಮತಕ್ಷೇತ್ರದ ಚುನಾವಣೆ ಮತ ಏಣಿಕೆ ಇಲ್ಲಿನ ಗುಲ್ಬರ್ಗ ವಿವಿಯ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಕೇಂದ್ರದಲ್ಲಿ ನಡೆದಿದ್ದು, ಬಿಜೆಪಿ ಆರಂಭಿಕ ಮುನ್ನಡೆ ಪಡೆದಿದೆ.

Advertisement

ಪ್ರಥಮ ಸುತ್ತಿನ ಮತ ಎಣಿಕೆ ಮುಕ್ತಾಯ ನಂತರ ಅಭ್ಯರ್ಥಿ ಅಮರನಾಥ ಪಾಟೀಲ್ 4,521 ಮತಗಳು ಪಡೆದಿದ್ದು, 306 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಸಮೀಪದ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಾ.‌ಚಂದ್ರಶೇಖರ ಪಾಟೀಲ ಹುಮನಾಬಾದ್ ಅವರು 4,215 ಮತಗಳು ಮತ್ತು ಸ್ವತಂತ್ರ ಅಭ್ಯರ್ಥಿ ಎನ್.ಪ್ರತಾಪರೆಡ್ಡಿ ಅವರು 3,037 ಮತಗಳು ಪಡೆದಿದ್ದಾರೆ. 1,585 ಮತಗಳು ತಿರಸ್ಕೃತವಾಗಿವೆ. ಇದೂವರೆಗೆ ಒಟ್ಟಾರೆ 13,990 ಮತಗಳ ಎಣಿಕೆ ಮುಕ್ತಾಯವಾಗಿದೆ.

ಬೆಳಿಗ್ಗೆ ಮತಪೆಟ್ಟಿಗೆಗಳನ್ನು ತೆರೆದು ಎಲ್ಲ ಮತಪತ್ರಗಳನ್ನು ಕ್ರೋಢಿಕರಿಸಿ ತಲಾ 25 ರ ಮತಪತ್ರಗಳಂತೆ ಬಂಡಲ್ ಮಾಡಲಾಗಿ ಸಂಜೆ 4.30 ರ ನಂತರ ಮತ ಏಣಿಕೆ ಶುರುವಾಯಿತು.

ಬಿಜೆಪಿ ಹಾಗೂ ಕಾಂಗ್ರೆಸ್ ಜತೆಗೆ ಪಕ್ಷೇತರ ಅಭ್ಯರ್ಥಿ ಪ್ರತಾಪರೆಡ್ಡಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರಿಂರ ಶುಕ್ರವಾರ ಬೆಳಗಿನ ಜಾವ ಫಲಿತಾಂಶ ಹೊರ ಬೀಳುವ ನಿರೀಕ್ಷೆವಿದೆ.

Advertisement

ಬಿಜೆಪಿಯಿಂದ ಅಮರನಾಥ ಪಾಟೀಲ್, ಕಾಂಗ್ರೆಸ್ ನಿಂದ ಡಾ.‌ಚಂದ್ರಶೇಖರ ಪಾಟೀಲ್ ಹಾಗೂ ಪಕ್ಷೇತರಾಗಿ ಎನ್. ಪ್ರತಾಪ ರೆಡ್ಡಿ ಕಣದಲ್ಲಿರುವ ಪ್ರಮುಖರಾಗಿದ್ದಾರೆ.

1.56 ಲಕ್ಷ ಮತದಾರರ ಪೈಕಿ 1.09 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.‌69.65 ಪ್ರತಿಶತ ಮತದಾನವಾಗಿದೆ.

ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ನೇತೃತ್ವದ ಲ್ಲಿ ಮತ ಏಣಿಕೆ ನಡೆಯುತ್ತಿದ್ದು, ವಿಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲಾಧಿಕಾರಿಗಳು ಹಾಜರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next