Advertisement

ಮೇಲ್ಮನೆ ಚುನಾವಣೆಯಲ್ಲಿ ನನಗೆ ಅಭೂತಪೂರ್ವ ಬೆಂಬಲ: ಪ್ರಕಾಶ್ ಹುಕ್ಕೇರಿ

07:24 PM Jun 05, 2022 | Team Udayavani |

ಚಿಕ್ಕೋಡಿ: ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ ಕಳೆದ 12 ವರ್ಷದಲ್ಲಿ ಶಿಕ್ಷಕರ ಯಾವುದೇ ಸಮಸ್ಯೆಗಳಿಗೆ ಸ್ಪಂದನೆ ಮಾಡಿಲ್ಲವೆಂದು ಬಿಜೆಪಿ ನಾಯಕರೇ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಮೂರು ಜಿಲ್ಲೆಗಳಲ್ಲಿ ನನಗೆ ಅಭೂತ್ವಪೂರ್ವ ಶಿಕ್ಷಕರ ಬೆಂಬಲ ವ್ಯಕ್ತವಾಗುತ್ತಿದೆ ಎಂದು ವಾಯವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಹೇಳಿದರು.

Advertisement

ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಭಾನುವಾರ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಚಾರ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಬಹುಮತ ನೀಡಿ ಗೆಲ್ಲಿಸುವ ಮೂಲಕ ಶಿಕ್ಷಕರ ಸಮಸ್ಯೆ ನಿವಾರಣೆ ಮತ್ತು ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅವಕಾಶ ನೀಡಬೇಕು. ಪದವಿಪೂರ್ವ ಶಿಕ್ಷಣ ಮಂಡಳಿಯನ್ನು ಬೆಳಗಾವಿ ತರುತ್ತೇನೆ. ಜೊತೆಗೆ ಮುಂಬರುವ ಆರು ವರ್ಷಗಳ ಸೇವಾವಧಿಯಲ್ಲಿ ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಆಗದಿದ್ದಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.

ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಶಿಕ್ಷಕ ಮತದಾರರು ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿಯೂ ಕಾಂಗ್ರೆಸ್‌ಗೆ ಹೆಚ್ಚಿನ ಬಹುಮತ ಪಡೆಯುವ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಪರಸ್ಪರ ಪ್ರಚಾರ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ನಾನು ಸಂಸದರಿದ್ದ ವೇಳೆಯಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರಾಧ್ಯಂತ ಹೆಚ್ಚಿನ ಶಾಲೆಗಳಿಗೆ ಅನುದಾನ ನೀಡುವ ಮೂಲಕ ಅಭಿವೃದ್ಧಿ ಮಾಡಲಾಗಿದೆ. ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಾಡಿರುವ ಕೊಡುಗೆ ಇಡೀ ರಾಜ್ಯದಲ್ಲಿ ಮಾದರಿಯಾಗಿದೆ. ಚಿಕ್ಕೋಡಿ ಭಾಗದ ಉಪನ್ಯಾಸಕರಿಗೆ ತೊಂದರೆ ಆಗುತ್ತಿದೆಂದು ಪದವಿಪೂರ್ವ ಉಪನಿರ್ದೇಶಕರ ಕಚೇರಿ, ಡಿಡಿಪಿಐ ಕಚೇರಿ ಹೀಗೆ ಚಿಕ್ಕೋಡಿ ಶೈಕ್ಷಣಿ ಜಿಲ್ಲೆ ರಚನೆ ನನ್ನ ಪ್ರಯತ್ನದಿಂದ ಆಗಿದೆ ಎಂದು ತಿಳಿಸಿದರು.

Advertisement

ಕಳೆದ ನಾಲ್ಕು ದಶಕದಿಂದ ರಾಜಕೀಯ ಜೀವನದಲ್ಲಿ ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ದಣಿವರಿಯದೇ ಜನ ಸೇವೆ ಮಾಡಿದ್ದೇನೆ. ಕೊನೆಯದಾಗಿ ಗುರುಗಳಾದ ಶಿಕ್ಷಕ ಸಮೂಹದ ಸೇವೆ ಸಲ್ಲಿಸಲು ಮೇಲ್ಮನೆ ಚುನಾವಣೆಗೆ ಸ್ಪರ್ಧಿಸಿದ್ದೇನೆ, ಇದು ನನ್ನ ಕೊನೆ ಚುನಾವಣೆಯಾಗಿದೆ ಎಂದು ಪ್ರಕಾಶ ಹುಕ್ಕೇರಿ ಹೇಳಿದರು.

ಉಗಾರ ಅತಿಥಿ ಉಪನ್ಯಾಸಕ ವಿಶ್ವನಾಥ ನಾಮದಾರ ಮಾತನಾಡಿ, ಪ್ರಕಾಶ ಹುಕ್ಕೇರಿ ಅವರು ಕಳೆದ 40 ವರ್ಷಗಳಿಂದ ಎಲ್ಲ ಕ್ಷೇತ್ರದಲ್ಲಿ ಅಬಿವೃದ್ಧಿ ಮಾಡುತ್ತಾ ಬಂದಿದ್ದಾರೆ. ಇವರು ಆಯ್ಕೆಯಾದರೇ ಶಿಕ್ಷಣ ವ್ಯವಸ್ಥೆ ಅಬಿವೃದ್ಧಿ ಜೊತೆಗೆ ಸರ್ವತೋಮುಖ ಅಭಿವೃದ್ಧಿಗೆ ನಾಂಧಿ ಹಾಡಲಾಗುತ್ತದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಉಂಟಾದ ಭೀಕರ ಪ್ರವಾಹ ಮತ್ತು ಕೊರೊನಾ ಸಂದರ್ಭದಲ್ಲಿ ಶಿಕ್ಷಕರಿಗೆ ಮಡಿರುವ ಸಹಾಯ ಯಾರು ಮರೆಯುವಂತಿಲ್ಲ ಎಂದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೂಡಾ ಶಿಕ್ಷಕರ ಯಾವುದೇ ಸಮಸ್ಯೆ ಬಗೆಹರಿಸುವಲ್ಲಿ ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ ವಿಫಲರಾಗಿದ್ದಾರೆ. ಎಲ್ಲ ಉಪನ್ಯಾಸಕರು ಪ್ರಕಾಶ ಹುಕ್ಕೇರಿ ಅವರಿಗೆ ಬೆಂಬಲ ನೀಡುವ ಮೂಲಕ ಹೆಚ್ಚು ಮತಗಳ ಅಂತದಿಂದ ಆಯ್ಕೆ ಮಾಡಲು ನಾವೇಲ್ಲರು ಶ್ರಮೀಸುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರವೀಂದ್ರ ಚೌಗಲಾ, ಅಣ್ಣಾಸಾಹೇಬ ಹವಲೆ, ಅರುಣ ದೇಸಾಯಿ, ರಾಜೇಂದ್ರ ಕರಾಳೆ, ಮಲ್ಲಿಕಾರ್ಜುನ ಪಾಟಿಲ, ರವೀಂದ್ರ ಮಿರ್ಜೆ ಸೇರಿದಂತೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next