Advertisement

ಸಂಕನೂರು ಗೆಲುವಿಗೆ ಶ್ರಮಿಸಿ: ಕೋಟಾ

03:20 PM Oct 25, 2020 | Suhan S |

ಅಳ್ನಾವರ: ಸಮಗ್ರ, ಶಕ್ತಿಶಾಲಿ, ಸ್ವಾಭಿಮಾನಿ ಭಾರತದ ಜತೆಗೆ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಬರುವ ವಿಧಾನ ಪರಿಷತ್‌ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌ .ವಿ. ಸಂಕನೂರ ಅವರಿಗೆ ಮತ ನೀಡುವ ಮೂಲಕ ಮೇಲ್ಮನೆಯಲ್ಲಿ ಬಹುಮತದ ಕೊರತೆ ನೀಗಿಸಲು ಸಹಕರಿಸುವಂತೆ ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತದಾರರಲ್ಲಿ ಮನವಿ ಮಾಡಿದರು.

Advertisement

ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಪಟ್ಟಣದಲ್ಲಿ ಶನಿವಾರಜರುಗಿದ ಸಭೆಯಲ್ಲಿ ಮಾತನಾಡಿದಅವರು, ಪ್ರಜಾ ಪ್ರಭುತ್ವ ವ್ಯವಸ್ಥೆಯಡಿ ವಿರೋಧ ಪಕ್ಷಗಳು ಟೀಕಿಸುವುದು ಸಹಜ. ಅಂತಹ ಟೀಕೆಗಳಿಗೆಸಮರ್ಥವಾಗಿ ಉತ್ತರಿಸಿ ಸರ್ಕಾರ ದಕ್ಷ ಆಡಳಿತ ನೀಡುತ್ತಿದೆ ಎಂದರು. ಈ ಚುನಾವಣೆಯಲ್ಲಿ ಪಕ್ಷದ ಗೆಲುವು ಸಂಕನೂರ ಅವರ ಗೆಲುವು ಆಗದೆ ಅದೊಂದು ಪ್ರಾಮಾಣಿಕತೆಯ ಗೆಲುವು ಎನಿಸಲಿದೆ ಎಂದರು

ಶಾಸಕ ಸಿ.ಎಮ್‌.ನಿಂಬಣ್ಣವರ ಮಾತನಾಡಿ, ಅತ್ಯಂತ ಮಹತ್ವದ ಚುನಾವಣೆ ಎನಿಸಿರುವ ವಿಧಾನಪರಿಷತ್‌ನಲ್ಲಿ ಬಹುಮತ ಹೊಂದಲು ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಅನಿವಾರ್ಯ. ಸರ್ಕಾರದ ಸಾಧನೆ ಹಾಗೂ ಅಭ್ಯರ್ಥಿ ಸಂಕನೂರ ಅವರ ಕಾರ್ಯಗಳು ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು.

ಭಾಜಪ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಚುನಾವಣೆಯ ರೂಪು ರೇಷೆ ವಿವರಿಸಿದರು. ಅಳ್ನಾವರ ಮಂಡಳ ಬಿಜೆಪಿ ಅಧ್ಯಕ್ಷ ಕಲ್ಮೇಶ ಬೇಲೂರ ಪ್ರಾಸ್ತಾವಿಕ ಮಾತನಾಡಿದರು. ಪಕ್ಷದ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ, ಮಾಜಿ ಜಿಪಂ ಅಧ್ಯಕ್ಷ ವಿ.ಎಸ್‌.ಪಾಟೀಲ,ಜಿಲ್ಲಾ ಎಸ್‌.ಸಿ. ಮೋರ್ಚಾ ಉಪಾಧ್ಯಕ್ಷ ಪ್ರವೀಣ ಪವಾರ, ಶಿವಾಜಿ ಡೊಳ್ಳಿನ,ಬಸವರಾಜ ಗುಂಡಗೋವಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಎಮ್‌.ಸಿ.ಹಿರೇಮಠ, ಲಿಂಗರಾಜ ಮೂಲಿಮನಿ, ಕರೆಪ್ಪ ಅಮ್ಮಿನಭಾವಿ, ಸಂದೀಪ ಪಾಟೀಲ, ನೇತ್ರಾವತಿ ಕಡಕೋಳ, ಮಂಗಲಾ ರವಳಪ್ಪನವರ ಇದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಾರಾಯಣ ಮೊರೆ ನಿರೂಪಿಸಿದರು. ಪ್ರಕಾಶ ಗಾಣಿಗೇರ ವಂದಿಸಿದರು.

ಸಂಕನೂರ ಪರ ಕೋಟಾ ಶ್ರೀನಿವಾಸ ಪೂಜಾರಿ ಪ್ರಚಾರ :

Advertisement

ಅಳ್ನಾವರ: ಕೋವಿಡ್ ಹಾಗೂ ಅತಿವೃಷ್ಟಿಯಂತಹ ಕಾಲಘಟ್ಟದಲ್ಲೂ ವಿಚಲಿತಗೊಳ್ಳದೆ ರಾಜ್ಯದ ಜನರ ಪರ ಹಗಲಿರುಳು ಶ್ರಮಿಸುತ್ತಿರುವ ಮುಖ್ಯ ಮಂತ್ರಿ ಯಡಿಯೂರಪ್ಪನವರು ರೈತರು, ನೊಂದವರ ಕಷ್ಟದಲ್ಲಿ ಸ್ವತಃ ಭಾಗಿಯಾಗಿರುವುದು ವಿಶೇಷ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು

ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ವಿ.ಸಂಕನೂರ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಸಂಕನೂರ ಅವರು ವಿಧಾನ ಪರಿಷತ್‌ದಲ್ಲಿ ಪದವೀಧರರ ಪರ ದ್ವನಿ ಎತ್ತಿದ ಬೆರಳೆಣಿಕೆಯ ವ್ಯಕ್ತಿಗಳ ಪೈಕಿ ಇವರೂ ಒಬ್ಬರಾಗಿದ್ದಾರೆ ಎಂದರು.

ಕೇಂದ್ರ ಸರಕಾರ ಬಿಹಾರ ರಾಜ್ಯಕ್ಕೆ ಮಾತ್ರ ಉಚಿತವಾಗಿ ಕೋವಿಡ್ ಔಷಧಿ ನೀಡುವ ಭರವಸೆ ನೀಡಿದೆ ಎನ್ನುವುದು ಸುಳ್ಳು. ಮೋದಿಯವರು ದೇಶವೇ ನನ್ನ ಕುಟುಂಬ ಎಂದು ಬದುಕುತ್ತಿರುವ ವ್ಯಕ್ತಿ. ಸಮಗ್ರ ಭಾರತದ ಏಳಿಗೆಯೇ ಅವರಕನಸಾಗಿದೆ. ತನಗಾಗಿ ಏನನ್ನೂ ಮಾಡಿಕೊಳ್ಳದೆ ದೇಶ ಮೊದಲು ಎಂದು ವಿಶ್ರಾಂತಿ ಇಲ್ಲದೆ ದುಡಿಯುತ್ತಿರುವ ಪ್ರಧಾನಿಗಳ ಕೈ ಬಲಪಡಿಸಲು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಬದ್ಧರಾಗಿದ್ದಾರೆ ಎಂದರು

ಶಾಸಕ ಸಿ.ಎಮ್‌.ನಿಂಬಣ್ಣವರ,ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಲಿಂಗರಾಜ ಮೂಲಿಮನಿ, ವಿ.ಎಸ್‌.ಪಾಟೀಲ, ಕಲ್ಮೇಶ ಬೇಲೂರ, ಪ್ರವೀಣ ಪವಾರ, ಶಿವಾಜಿ ಡೊಳ್ಳಿನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next