Advertisement

ಪ್ರಸ್ತುತ ದೇಶದ ರಾಜಕಾರಣ ಅಸ್ತವ್ಯಸ್ತ

07:03 PM Oct 24, 2020 | Suhan S |

ಹೂವಿನಹಡಗಲಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ನಮ್ಮ ದೇಶದ ರಾಜಕಾರಣ ಇಂದು ಅಸ್ತವ್ಯಸ್ತಗೊಂಡಿದೆ. ಸಂಸದೀಯ ವ್ಯವಸ್ಥೆಗೆ ಅಗೌರವ ತೋರುವ ಪ್ರಕ್ರಿಯೆ ನಡೆಯುತ್ತಿರುವುದರ ಕುರಿತುಚರ್ಚೆಯಾಗಬೇಕಾಗಿದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ, ಮಾಜಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

Advertisement

ವಿಧಾನ ಪರಿಷತ್‌ ಚುನಾವಣೆ-ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಿಮಿತ್ತ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರು ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಕೂಡಲೇ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಉದ್ಯೋಗ ಸೃಷ್ಟಿ ಇರಲಿಉದ್ಯೋಗ ಕಳೆದುಕೊಳ್ಳುವುದನ್ನು ನಿಮ್ಮ ಕೈಯಲ್ಲಿ ತಡೆಯಲಾಗಲಿಲ್ಲ. ನೋಟು ಅಮಾನೀಕರಣ ಮಾಡಿದಿರಿ. ಬ್ಲ್ಯಾಕ್‌ ಮನಿ ಹೊರಗೆ ತಂದು ದೇಶದ ಜನತೆ ಖಾತೆಗೆ 15 ಲಕ್ಷ ರೂಗಳನ್ನು ಹಾಕುತ್ತೇವೆ ಎಂದು ಹೇಳಿದಿರಿಎಲ್ಲಿದೇ ನಿಮ್ಮ 15 ಲಕ್ಷ. ಒಂದು ಪೈಸೆ ಸಹ ಜನತೆಗೆ ಖಾತೆಗೆ ಹಾಕಲಿಲ್ಲವೇಕೆ ಎಂದು ಪ್ರಶ್ನೆ ಮಾಡಿದರು.

ಒಟ್ಟಾರೆಯಾಗಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಲೆ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ಉತ್ತಮರನ್ನು ಆಯ್ಕೆ ಮಾಡಿ ಕಳುಹಿಸುವ ಮೂಲಕವಾಗಿ ದೇಶದಲ್ಲಿನ ಆನ್ಯಾಯವನ್ನು ಕೇಳುವ ವ್ಯಕ್ತಿಗಳನ್ನು ನೀವುಗಳು ಬೆಂಬಲಿಸಬೇಕಾಗಿದೆ. ಶರಣಪ್ಪ ಮಟ್ಟೂರು ಈ ಕೆಲಸ ಮಾಡುತ್ತಾರೆ. ಕ-ಕ ಭಾಗದಲ್ಲಿನ ಸಮಸ್ಯೆಗಳನ್ನು ಕುರಿತು ಹಾಗೂಸರ್ಕಾರದ ಮೀಸಲಾತಿ ಕುರಿತುಸರ್ಕಾರಕ್ಕೆ ಬೌದ್ಧಿಕವಾಗಿ ಒತ್ತಡವನ್ನು ಹೇರಿದಂತವರು ನಮ್ಮ ಪಕ್ಷದ ಶರಣಪ್ಪ ಮಟ್ಟೂರು ಅವರು. ಕಳೆದ ನಮ್ಮ ಸರ್ಕಾರದಲ್ಲಿ ನಾನು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಗ್ರಾಪಂ ಸಿಬ್ಬಂದಿ ಕಾಯಂಗೊಳಿಸುವಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ಜನಪರ ಕೆಲಸ ಮಾಡಿದ್ದಾರೆ. ಕಾರಣ ನಮ್ಮ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರನ್ನು ಬೆಂಬಲಿಸಲು ಮತದಾರರನ್ನು ಮನವಿ ಮಾಡಿಕೊಂಡರು.

ಸಭೆಯಲ್ಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷಬಿ.ವಿ ಶಿವಯೋಗಿ ಕಾರ್ಯಕ್ರಮ ಕುರಿತು ಮಾತನಾಡಿ ಮತಯಾಚನೆ ಮಾಡಿದರು. ಮುಖಂಡರುಗಳಾದ ಎಂ.ಪರಮೇಶ್ವರಪ್ಪ, ಐಗೊಳ್‌ ಚಿದಾನಂದ್‌, ಆಟವಾಳಗಿ ಕೊಟ್ರೇಶ್‌, ವಾರದ ಗೌಸುಮೊಹದ್ದಿನ್‌, ಬಿ. ಹನುಮಂತಪ್ಪ, ಜ್ಯೋತಿ ಮಲ್ಲಣ್ಣ, ಚಾಂದ್‌ ಸಾಬ್‌ ಮುಂತಾದವರು ಇದ್ದರು.

ಶರಣಪ್ಪ ಮಟ್ಟೂರು ಗೆಲುವಿಗೆ ಶ್ರಮಿಸಿ :

Advertisement

ಸಿರುಗುಪ್ಪ: ಅ. 28ರಂದು ನಡೆಯಲಿರುವ ಈಶಾನ್ಯ ಶಿಕ್ಷಕರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶರಣಪ್ಪ ಮಟ್ಟೂರ್‌ ಅವರಿಗೆ ಶಿಕ್ಷಕ ಮತದಾರರು ಮೊದಲ ಪ್ರಾಶಸ್ತ್ಯದ ಹಕ್ಕು ಚಲಾಯಿಸುವ ಮೂಲಕ ಮಟ್ಟೂರರನ್ನು ಮತ್ತೂಮ್ಮೆ ಆಯ್ಕೆ ಮಾಡಬೇಕೆಂದು ಮಾಜಿ ಶಾಸಕ ಬಿ.ಎಂ.ನಾಗರಾಜ ತಿಳಿಸಿದರು.

ನಗರದ ಬಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ತಾಲೂಕಿನ ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸಿದ ಶಿಕ್ಷಕರ ಸಮಸ್ಯೆಗಳನ್ನು ಇತ್ಯರ್ಥಪಡಿಸುವಲ್ಲಿ ಅತ್ಯಂತ ನಿಷ್ಠಾವಂತ, ಪ್ರಾಮಾಣಿಕ ಪ್ರಯತ್ನವನ್ನುಮಾಡಿದ್ದಾರೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಹಲವು ಬಾರಿ ಹೋರಾಟ ಮಾಡಿದ್ದಾರೆ. ಅಧಿ ವೇಶನದಲ್ಲಿಯೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಆದ್ದರಿಂದ ಮತ್ತೂಮ್ಮೆ ಶರಣಪ್ಪ ಮಟ್ಟೂರ್‌ರನ್ನು ಆಯ್ಕೆ ಮಾಡಲು ಶಿಕ್ಷಕ ಮತದಾರರು ಮತನೀಡುವಂತೆ ಶಿಕ್ಷಕರ ಮನವೊಲಿಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡಬೇಕೆಂದು ಹೇಳಿದರು.

ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯಸ್ವಾಮಿ ಮಾತನಾಡಿ, ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸಿರುವ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರನ್ನು ತಾಲೂಕಿನಶಿಕ್ಷಕರು ಅತಿ ಹೆಚ್ಚು ಮತ ನೀಡುವಂತೆ ನಮ್ಮ ಕಾರ್ಯಕರ್ತರು ಶ್ರಮಿಸಬೇಕೆಂದು ತಿಳಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಕರಿಬಸಪ್ಪ,ತಾಪಂ ಮಾಜಿ ಅಧ್ಯಕ್ಷ ಎಂ. ಗೋಪಾಲರೆಡ್ಡಿ, ಮುಖಂಡರಾದ ಮಲ್ಲಿಕಾರ್ಜುನ, ಮಾರುತಿರೆಡ್ಡಿ, ನರಸಿಂಹನಾಯಕ, ಮಹಮ್ಮದ್‌ ನೂರೂಲ್ಲ ಮತ್ತು ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next