Advertisement

ಪರಿಷತ್‌ ಚುನಾವಣೆಗೆ ಮಸ್ಟರಿಂಗ್‌

08:23 PM Dec 09, 2021 | Team Udayavani |

ಉಡುಪಿ: ಶುಕ್ರವಾರ ನಡೆಯುವ ದ.ಕ., ಉಡುಪಿ ಸ್ಥಳೀಯಾಡಳಿತ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಗೆ ಪೂರ್ವಭಾವಿಯಾಗಿ ಗುರುವಾರ  ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಸ್ಟರಿಂಗ್‌ ಕಾರ್ಯ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ನೇತೃತ್ವದಲ್ಲಿ ನಡೆಯಿತು.

Advertisement

ಜಿಲ್ಲೆಯಲ್ಲಿ ಒಟ್ಟು 2,505 ಮತದಾರರಿದ್ದು (ಗ್ರಾ.ಪಂ., ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು) ಇವರು 158 ಮತದಾನ ಕೇಂದ್ರಗಳಲ್ಲಿ ಮತದಾನ ನಡೆಸುವರು. ಚುನಾವಣ ಆಯೋಗ ಹೊರಡಿಸಿದ ಮಾರ್ಗಸೂಚಿ ಪ್ರಕಾರ ತಾಲೂಕು ಕೇಂದ್ರಗಳಲ್ಲಿ ಚುನಾವಣ ಸಿಬಂದಿ ಮತಪೆಟ್ಟಿಗೆ ಮೊದಲಾದ ಚುನಾವಣ ಸಾಮಗ್ರಿಗಳನ್ನು ಮತಗಟ್ಟೆ ಕೇಂದ್ರಗಳಿಗೆ ತೆಗೆದುಕೊಂಡು ಹೋದರು. ಚುನಾವಣ ವೀಕ್ಷಕರಿಂದ ಮೈಕ್ರೋ ವೀಕ್ಷಕರಿಗೆ ತರಬೇತಿ ನೀಡಲಾಗಿದ್ದು ನ್ಯಾಯೋಚಿತ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮತಗಟ್ಟೆ ಕೇಂದ್ರಗಳಲ್ಲಿ ವೀಡಿಯೋಗ್ರಫಿ ಮಾಡ ಲಾಗುವುದು, ನಿಷ್ಪಕ್ಷಪಾತ ಚುನಾವಣೆ ನಡೆಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next